Daily Horoscope: ಮೀನಕ್ಕೆ ನಿದ್ರಾಹೀನತೆ, ಕನ್ಯಾ ರಾಶಿಗೆ ಮುಖಭಂಗ

Published : Feb 19, 2022, 05:00 AM IST
Daily Horoscope: ಮೀನಕ್ಕೆ ನಿದ್ರಾಹೀನತೆ, ಕನ್ಯಾ ರಾಶಿಗೆ ಮುಖಭಂಗ

ಸಾರಾಂಶ

19 ಫೆಬ್ರವರಿ 2022, ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕಟಕಕ್ಕೆ ಕೈ ಹಿಡಿಯದ ಅದೃಷ್ಟ, ತುಲಾ ರಾಶಿಗೆ ಹಣಕಾಸಿನ ತೊಡಕು

ಮೇಷ(Aries): ಶತ್ರುಗಳು ನಿಮ್ಮ ಮುಂದೆ ಸೋತು ಹೋಗ್ತಾರೆ. ನಿಮಗಾಗುವ ತೊಂದರೆಗಳು ದೂರಾಗಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೊಂಚ ಆತಂಕವಾಗಬಹುದು. ದೂರ ಪ್ರಯಾಣಗಳ ಸಿದ್ಧತೆಯಲ್ಲಿ ತೊಡಗುವಿರಿ. ಸ್ನೇಹಿತರ ಭೇಟಿಯಿಂದ ಸಂತಸ. ಆಂಜನೇಯ ಸ್ಮರಣೆ ಮಾಡಿ. 

ವೃಷಭ(Taurus): ನಿಮ್ಮ ಪ್ರವಾಸ ಯೋಜನೆಗಳಿಗೆ ಅನಾರೋಗ್ಯ ಅಡ್ಡಿಯಾಗಬಹುದು. ಇದರಿಂದ ಧನನಷ್ಟ ಆಗಬಹುದು. ಮಕ್ಕಳ ವಿಷಯದಲ್ಲಿ ಅತಿಯಾದ ಸಡಿಲಿಕೆ ಒಳ್ಳೆಯದಲ್ಲ. ಸಂಗಾತಿಯ ಜೊತೆ ವಾಗ್ವಾದಗಳು ಮನಸ್ಸಿಗೆ ಕಸಿವಿಸಿ ಉಂಟು ಮಾಡಲಿವೆ. ಪ್ರೇಮಿಗಳಿಗೆ ವಿರಸದ ದಿನ. ಶನಿ ಮಂತ್ರ ಹೇಳಿಕೊಳ್ಳಿ. 

ಮಿಥುನ(Gemini): ದೈಹಿಕ, ಮಾನಸಿಕ ದೃಢತೆ ಹೆಚ್ಚುವುದು. ಆತ್ಮಬಲದಿಂದ ಮಾಡಿದ ಕೆಲಸಗಳೆಲ್ಲ ಸಕ್ಸಸ್ ಆಗುತ್ತವೆ. ಸಮಾಧಾನ ಇರುತ್ತದೆ. ರಿಯಲ್ ಎಸ್ಟೇಟ್‌ನಲ್ಲಿರುವವರಿಗೆ ಶುಭಫಲವಿದೆ. ಸಂಗಾತಿಯ ಇಲ್ಲವೇ ಹೆತ್ತವರ ಆರೋಗ್ಯದಲ್ಲಿ ಸ್ವಲ್ಪ ತೊಂದರೆಗಳಾಗುವ ಸಾಧ್ಯತೆ ಇದೆ. ಧನ್ವಂತರಿ ಶ್ಲೋಕ ಹೇಳಿಕೊಳ್ಳಿ. 

ಕಟಕ(Cancer): ಅದೃಷ್ಟ ಕೈಕೊಡುವ ಕಾರಣ ಮನಸ್ಸಿಗೆ ವೇದನೆ. ಆದರೆ ದೈವದ ಬಗ್ಗೆ ನಂಬಿಕೆ ಹೆಚ್ಚಬಹುದು. ನಿಮ್ಮ ಒಡಹುಟ್ಟಿದವರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಏಳಬಹುದು. ಸಹವಾಸ ದೋಷಗಳಿಂದ ನಷ್ಟ ಹೆಚ್ಚಬಹುದು. ತಾಯಿಯ ಮನಸ್ಸಿಗೆ ನೋವುಂಟು ಮಾಡುವಿರಿ. ನವಗ್ರಹ ಪ್ರಾರ್ಥನೆ ಮಾಡಿ.

ಸಿಂಹ(Leo): ಹಿಂದೆ ಕೈಬಿಟ್ಟ ಕೆಲಸಗಳನ್ನು ಪುನರಾರಂಭ ಮಾಡುತ್ತೀರಿ. ನಿಮ್ಮ ಸಂಗಾತಿಯಿಂದಲೂ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸಂಗಾತಿಯ ಜೊತೆ ಸರಸ ಹೆಚ್ಚಲಿದೆ. ದೂರ ಫ್ರಯಾಣ ಯೋಗವಿದೆ. ಹೊಸ ಅನುಭವಗಳಿಂದ ಉತ್ಸಾಹ ಹೆಚ್ಚಲಿದೆ. ಕರಿ ಎಳ್ಳನ್ನು ದಾನ ಮಾಡಿ. 

ಕನ್ಯಾ(Virgo): ಆತುರ, ಕೋಪ, ಎದುರಿರುವವರಲ್ಲಿ ಯುದ್ಧ ಮಾಡುವವರಂತೆ ಮಾತನಾಡಿ ಸ್ನೇಹಿತರನ್ನು ಕಳೆದುಕೊಳ್ಳುವಿರಿ. ಪೂರ್ವ ತಯಾರಿಯಿಲ್ಲದೇ ಏನನ್ನಾದರೂ ಮಾಡಲು ಮುನ್ನುಗ್ಗಬೇಡಿ. ಇದರಿಂದ ಮುಖಭಂಗ ಉಂಟಾಗಬಹುದು. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ.

ತುಲಾ(Libra): ಬಹಳ ಕಾಲದಿಂದ ಕಷ್ಟ ಪಡುತ್ತಿದ್ದರೂ, ಫಲವಿಲ್ಲ ಎಂಬ ಕೊರಗು ಕಾಡುವುದು. ಹಣಕಾಸಿನ ವಿಚಾರಗಳಲ್ಲಿ ಇರಿಸು ಮುರಿಸು ಉಂಟಾಗಬಹುದು. ಹೆಚ್ಚುತ್ತಿರುವ ಜವಾಬ್ದಾರಿ, ಹೊಸ ಹೊಸ ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಬಹುದು. ದೇವರ ಧ್ಯಾನ ಮಾನಸಿಕ ಶಾಂತಿಯನ್ನು ನೀಡುತ್ತದೆ. 

ವೃಶ್ಚಿಕ(Scorpio): ಆಸ್ತಿ ತಗೊಳ್ಬೇಕು ಅಂದುಕೊಂಡಿರುವವರು, ಮನೆ ಕಟ್ಟಬೇಕು ಅಂದುಕೊಂಡಿರುವವರು ದೊಡ್ಡ ಮಟ್ಟದ ನಿರ್ಧಾರ ಮಾಡುತ್ತೀರಿ. ಕೆಲಸಗಳಲ್ಲಿ ಯಶಸ್ವಿಯಾಗುವುದಕ್ಕೆ ಬೇಕಾದ ಹಾಗೆ ನಿಮ್ಮ ಕಾರ್ಯಗಳಿರುತ್ತವೆ. ತಿರುಗಾಟಗಳಿಂದ ಸಂತಸ ಹೆಚ್ಚುವುದು. ಕುಲದೇವರ ಸ್ಮರಣೆ ಮಾಡಿ. 

Dream Interpretation: ಕನಸಲ್ಲಿ ಹಾವು ಪದೇ ಪದೇ ಬರ್ತಿದ್ಯಾ? ಕಾರಣ ಹೀಗಿರಬಹುದು..

ಧನುಸ್ಸು(Sagittarius): ನೀವು ಮದುವೆಯ ಪ್ರಸ್ತಾಪವನ್ನು ಹುಡುಕುತ್ತಿದ್ದರೆ, ನಿಮಗೆ ಶುಭವಾಗಲಿದೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ. ಸ್ನೇಹಿತರ ಭೇಟಿಯಿಂದ ಸಂತಸ. ಪ್ರವಾಸದ ಸಾಧ್ಯತೆಗಳಿವೆ. ಮಕ್ಕಳ ಬೆಳವಣಿಗೆ ಸಂತಸ ತರುವುದು. ತಾಯಿಯ ಆಶೀರ್ವಾದ ಪಡೆಯಿರಿ. 

ಮಕರ(Capricorn): ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ಹೊಸದನ್ನು ಮಾಡಲು ಯೋಜಿಸಿದರೆ, ನಿಮ್ಮ ದಾರಿಯಲ್ಲಿ ಅಡೆತಡೆಗಳು ಬರುತ್ತವೆ. ಸಾಲವನ್ನು ತೆಗೆದುಕೊಂಡಿದ್ದರೆ, ಮರುಪಾವತಿ ಮಾಡುವಿರಿ. ಧಾರ್ಮಿಕವಾಗಿ, ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳುವಿರಿ. ಶನಿ ಸ್ಮರಣೆ ಮಾಡಿ. 

ಕುಂಭ(Aquarius): ನಿಮ್ಮ ಕುಟುಂಬದೊಂದಿಗೆ ನೀವು ಪ್ರಯಾಣಿಸುವ ಸಾಧ್ಯತೆಗಳಿವೆ. ವಿಮಾನ ಪ್ರಯಾಣ ಇರಲಿದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಭೂರಿ ಭೋಜನ ಸೇವಿಸುವ ಸಾಧ್ಯತೆ ಇದೆ. ಹೊಸ ವಸ್ತುಗಳನ್ನು ಕೊಳ್ಳುವಿರಿ. ಸಂಗಾತಿಯೊಂದಿಗೆ ಸಂತೋಷದಲ್ಲಿ ದಿನ ಕಳೆಯುವಿರಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Feng Shui: ಈ ಸಸ್ಯಗಳು ಮನೆಯೊಳಗಿದ್ದರೆ ದುಃಖ, ದುರದೃಷ್ಟ ಹೊರಗೋಡುತ್ತವೆ!

ಮೀನ(Pisces): ನಿಮ್ಮ ಸಂಗಾತಿಯೊಂದಿಗೆ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳಿ. ವಿಪರೀತ ತಲೆನೋವು, ಕಾಲುನೋವು ಉಂಟಾಗಬಹುದು. ಮನರಂಜನೆಗಾಗಿ ಹೆಚ್ಚು ಖರ್ಚು ಮಾಡುವಿರಿ. ನಿದ್ರಾಹೀನತೆ ಕಾಡಬಹುದು. ಆಡಿದ ಮಾತಿಗೆ ತಪ್ಪದಿರಿ. ಕುಲದೇವರ ಸ್ಮರಣೆ ಮಾಡಿ. 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ