Daily Horoscope: ಕನ್ಯಾಗೆ ಆಸ್ತಿ ಖರೀದಿ ಸಂತಸ, ವೃಶ್ಚಿಕಕ್ಕೆ ಅಪಘಾತ ಸಾಧ್ಯತೆ

Published : Feb 12, 2022, 05:07 AM IST
Daily Horoscope: ಕನ್ಯಾಗೆ ಆಸ್ತಿ ಖರೀದಿ ಸಂತಸ, ವೃಶ್ಚಿಕಕ್ಕೆ ಅಪಘಾತ ಸಾಧ್ಯತೆ

ಸಾರಾಂಶ

12 ಫೆಬ್ರವರಿ 2022, ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಧನಸ್ಸಿಗೆ ಪ್ರಯತ್ನವಿದ್ದರೆ ಮಾತ್ರ ಫಲ ಸಿದ್ಧಿ

ಮೇಷ(Aries): ನಿಮ್ಮ ಮನೋಭಾವಕ್ಕೆ ಕುಟುಂಬವರ್ಗದಿಂದ ವಿರೋಧಗಳು ಕೇಳಿ ಬರಬಹುದು. ಬಂಧುಗಳೊಂದಿಗೆ ಮುನಿಸು. ಮಾತಿನ ಮೇಲೆ ಹಿಡಿತವಿರಲಿ. ಮಂದಗತಿಯಲ್ಲಿ ಸಾಗುವ ಕೆಲಸಗಳು. ಹಣಕಾಸಿನ ಅಡಚಣೆ ಹೆಚ್ಚಲಿದೆ. ಮನೆ ದೇವರ ಪ್ರಾರ್ಥನೆ ಮಾಡಿ.

ವೃಷಭ(Taurus): ನಿಮ್ಮ ಕುಟುಂಬ ಸದಸ್ಯರ ಮೇಲೆ ಸಂಗಾತಿ ದೂರಬಹುದು. ಮನಸ್ಸಿನ ಕೈಗೆ ಬುದ್ಧಿ ಕೊಡಬೇಡಿ, ಅದರಲ್ಲಿರುವ ಸತ್ಯಾಸತ್ಯತೆ ಬಗ್ಗೆ ಯೋಚಿಸಿ, ಆ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರೋ ಹಾಗೆ ಮಾಡಿ. ಇದರಿಂದ ನೆಮ್ಮದಿ ಲಭಿಸುವುದು. ಶನಿ ಸ್ಮರಣೆ ಮಾಡಿ. 

ಮಿಥುನ(Gemini): ಎಲ್ಲವೂ ನಿಮ್ಮ ಮಾತಿನಂತೆಯೇ ನಡೆಯಬೇಕು ಎಂಬ ಹಟ ಬಿಡಿ. ಜೊತೆಗಿರುವವರ ಮಾತನ್ನೂ ಆಲಿಸುವ ಅಭ್ಯಾಸ ಮಾಡಿಕೊಳ್ಳಿ. ಹತ್ತಿರದವರು ಮನೆಗೆ ಭೇಟಿ ನೀಡುವುದರಿಂದ ಸಂತಸ. ಉಳಿದಂತೆ ಉದಾಸೀನವಾಗಿ ದಿನ ಕಳೆಯುವಿರಿ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಕಟಕ(Cancer): ಪ್ರೇಮ ಜೀವನದ ಸಮಸ್ಯೆಗಳೇನು ಮುಗಿಯುವಂತೆ ಕಾಣುವುದಿಲ್ಲ. ಆರ್ಥಿಕ ಸಂಕಷ್ಟಗಳೂ ಇರುವ ಸಮಸ್ಯೆಗೆ ಜೊತೆಯಾಗಲಿವೆ. ಆದರೆ, ಭರವಸೆ ಇರಲಿ, ಸಮಯವೇ ಎಲ್ಲವನ್ನೂ ಸರಿ ಮಾಡುವುದು. ಕೋಪದಿಂದ ಅನಾಹುತಗಳಿಗೆ ಎಡೆ ಮಾಡಿಕೊಳ್ಳದಿರಿ. ಅಶ್ವತ್ಥ ವೃಕ್ಷಕ್ಕೆ ನಮಸ್ಕರಿಸಿ. 

ಸಿಂಹ(Leo): ವೃಥಾ ಕಾಲು ಕೆರೆದುಕೊಂಡು ಅಕ್ಕಪಕ್ಕದವರೊಡನೆ ಜಗಳಕ್ಕೆ ಹೋಗಬೇಡಿ. ನೈತಿಕವಾಗಿ ನೀವು ಬಲವಾಗಿದ್ದಾಗ ಮಾತ್ರ ಮತ್ತೊಬ್ಬರತ್ತ ಬೊಟ್ಟು ತೋರಿಸಬಹುದು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ. ವ್ಯಾಪಾರದಲ್ಲಿ ಲಾಭ ಹೆಚ್ಚುವುದು. ಕಪ್ಪು ಧಾನ್ಯ ದಾನ ಮಾಡಿ. 

ಕನ್ಯಾ(Virgo): ಮನೆ, ಜಮೀನು ಖರೀದಿ ಕೆಲಸಗಳು ಮುಂದುವರಿಯಲಿವೆ. ಜೀವನ ಸಂಗಾತಿಯಿಂದ ಪ್ರೀತಿ ಮತ್ತು ಸಹಕಾರದ ವಿಷಯದಲ್ಲಿ ದಿನವು ಅದ್ಭುತವಾಗಿದೆ. ಧಾರ್ಮಿಕ, ಶುಭ ಸಮಾರಂಭಗಳಿಗೆ ಭೇಟಿಯಿಂದ ಸಂತಸ. ಹೊಸ ವಸ್ತುಗಳ ಖರೀದಿ. ಕುಲದೇವರ ಸ್ಮರಣೆ ಮಾಡಿ. 

Astrology Tips: ಆಂಜನೇಯನನ್ನು ನೀವೇಕೆ ಪೂಜಿಸಲೇಬೇಕು ಅಂದರೆ..

ತುಲಾ(Libra): ವಾಹನಗಳು ದುರಸ್ಥಿಗೆ ಬರುವ ಸಾಧ್ಯತೆ. ಹಿಂದೆ ತೆಗೆದುಕೊಂಡ ನಿರ್ಧಾರವೊಂದು ತದ್ವಿರುದ್ಧವಾಗಿ ಬದಲಾಗಬಹುದು. ನೀವು ತೋರಿದ ಅಹಂಕಾರಕ್ಕೆ ಬೆಲೆ ಕಟ್ಟಬೇಕಾಗಬಹುದು. ಯಾರೊಂದಿಗೂ ವಿನಾ ಕಾರಣ ವಾದ ಮಾಡಬೇಡಿ. ನವಗ್ರಹ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ತೆಗೆದುಕೊಂಡ ಸಾಲ ಹಿಂದೆ ಕೊಡದಿರುವ ಯೋಚನೆಯೇ ಮುಳುವಾದೀತು. ಮೊದಲು ಅದನ್ನು ಹಿಂದೆ ಕೊಟ್ಟು ನಂತರ ನಿಮ್ಮ ಪ್ರಗತಿಯ ಯೋಜನೆಗಳನ್ನು ಮುಂದುವರಿಸಿ. ಗೃಹಿಣಿಯರಿಗೆ ಮನರಂಜನೆ. ಅಪಘಾತ ಸಾಧ್ಯತೆ ಇದ್ದು, ಹೆಚ್ಚನ ಎಚ್ಚರ ಅಗತ್ಯ. ಶನಿ ಸ್ಮರಣೆ ಮಾಡಿ. 

ಧನುಸ್ಸು(Sagittarius): ನಿಮ್ಮ ರೊಮ್ಯಾಂಟಿಕ್ ಜೀವನ ಚೆನ್ನಾಗಿರಬೇಕು ಎಂದರೆ ಅದಕ್ಕಾಗಿ ನೀವೊಂದಿಷ್ಟು ಪ್ರಯತ್ನ ಹಾಕಬೇಕು. ಸೋತು ಗೆಲ್ಲುವುದನ್ನು ಕಲಿಯಬೇಕು. ಸಂಗಾತಿಯನ್ನು ಖುಷಿ ಪಡಸಲು ಪ್ರಯತ್ನಿಸಿ. ಅವರ ಮಾತುಗಳನ್ನು ಸಂಪೂರ್ಣವಾಗಿ ಆಲಿಸಿ, ತಾಳ್ಮೆಯಿಂದ ಪ್ರತಿಕ್ರಿಯಿಸಿ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಮಕರ(Capricorn): ಆಸ್ತಿ ಸಂಬಂಧ ಸಂಘರ್ಷಗಳಿಂದ ಮನಸ್ಸಿಗೆ ಕಸಿವಿಸಿ. ಬಂಧುಗಳೊಂದಿಗೆ ಮುನಿಸು. ಉದ್ಯೋಗ ಹಾಗೂ ಮನೆಯಲ್ಲಿ ಸಂತೋಷ ಹುಡುಕಿ. ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ನೀವು ಬಯಸಿದ್ದೆಲ್ಲ ತಾನಾಗೇ ದೊರಕುತ್ತದೆ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

Gift Ideas: ಈ ಉಡುಗೊರೆ ಕೊಟ್ರೆ ನಿಮ್ಮ ಲವ್ ಪಕ್ಕಾ ಸಕ್ಸಸ್ ಆಗುತ್ತೆ!

ಕುಂಭ(Aquarius): ಶ್ರಮವಿಲ್ಲದೆ ಯಾವುದೂ ಬರಲಾರದು. ಅದೃಷ್ಟದ ಬಲದಿಂದ ಬಂದರೂ ಅದನ್ನು ಉಳಿಸಿಕೊಳ್ಳಲಾದರೂ ಶ್ರಮ ಹಾಕಲೇಬೇಕು ಎಂಬುದನ್ನು ನೆನಪಿಟ್ಟರೆ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದು. ಅದೃಷ್ಟ ರತ್ನ ಧರಿಸಿ. 

ಮೀನ(Pisces): ವೃತ್ತಿ ಸಂಬಂಧ ಸಂಶಯಗಳಿದ್ದರೆ, ಗೊಂದಲದಲ್ಲಿದ್ದರೆ, ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಹಿರಿಯರ ಚುಚ್ಚು ಮಾತುಗಳಿಗೆ ಉದಾಸೀನವೇ ಮದ್ದು.ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಕೋಪದ ಮೇಲೆ ನಿಯಂತ್ರಣ ಅಗತ್ಯ. ಶಿವ ದೇವಾಲಯಕ್ಕೆ ಭೇಟಿ ನೀಡಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ