
ಮೇಷ(Aries): ಆರೋಗ್ಯದಲ್ಲಿ ವ್ಯತ್ಯಾಸವಿದ್ದರೂ ಚಿಂತಿಸುವ ಅಗತ್ಯವಿಲ್ಲ. ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿಗಳಿಂದ ಪ್ರಶಂಸೆ. ಸಹೋದರರ ಸಹಕಾರದಿಂದ ಗೃಹಕಾರ್ಯಗಳು ಸುಲಭವಾಗುವುವು. ಆಸ್ತಿ ಖರೀದಿ ಸಂಬಂಧ ಮಾತುಕತೆ. ದಾಖಲೆ ಪತ್ರಗಳ ಪರಿಶೀಲನೆ. ಬಹುಕಾಲದಿಂದ ಮುಂದೂಡಿದ್ದ ಕೆಲಸ ಕೈಗೆತ್ತಿಕೊಳ್ಳುವಿರಿ. ದೇವತಾಕಾರ್ಯಗಳಲ್ಲಿ ಭಾಗಿ, ಆದಿತ್ಯ ಹೃದಯ ಪಠಿಸಿ.
ವೃಷಭ(Taurus): ಇಂದು ನಿಮಗೆ ವ್ಯಯ ಹೆಚ್ಚು. ವಸ್ತ್ರ, ಒಡವೆ, ಗೃಹ ಅಗತ್ಯ ವಸ್ತುಗಳಿಗಾಗಿ ಖರ್ಚು. ಬಹಳ ಸಮಯದ ಕನಸೊಂದು ಈಡೇರಲಿದೆ. ಕಾಲು ನೋವಾಗುವ ಸಾಧ್ಯತೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬಂದು ಮನೆಯಲ್ಲಿ ಸಂತಸದ ವಾತಾವರಣ ಏರ್ಪಡುವುದು. ಸಹೋದರರಲ್ಲಿ ಮೌನಯುದ್ಧ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ.
ಮಿಥುನ(Gemini): ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಸಮೃದ್ಧಿ, ಮೃಷ್ಟಾನ್ನ ಭೋಜನ ಸವಿಯುವ ಅವಕಾಶ, ವಾಹನ ಖರೀದಿ, ಹಾಗೂ ಎಲೆಕ್ಟ್ರಿಕ್ ಉಪಕರಣಗಳ ಖರೀದಿಗೆ ಶುಭದಿನ. ಕುಟುಂಬದಲ್ಲಿ ಮಾತುಕತೆಯಿಂದ ಸಂತಸ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.
ಕಟಕ(Cancer): ಯಾವ ಕೆಲಸಕ್ಕೂ ಮನೋಬಲ ಕಡಿಮೆ, ಉದಾಸೀನವಾಗಿ ದಿನ ಕಳೆಯುವಿರಿ. ಅಂದುಕೊಂಡ ಕೆಲಸಗಳೊಂದೂ ಆಗದೆ ದಿನಾಂತ್ಯಕ್ಕೆ ಮನಸ್ಸಿಗೆ ಕಿರಿಕಿರಿ, ಬಹಳ ನಿರೀಕ್ಷೆಯಿಟ್ಟುಕೊಂಡಿದ್ದ ವಿಷಯವೊಂದು ನಿರಾಸೆ ಮೂಡಿಸುವುದು. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ.
ಸಿಂಹ(Leo): ಗೃಹಸೌಖ್ಯ. ಹೊರಗೆ ಸುತ್ತಾಟದಿಂದ ಮನಸ್ಸಿಗೆ ಪ್ರಫುಲ್ಲತೆ. ಮಕ್ಕಳಿಂದ ಸಂತೋಷ. ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಸಿಹಿಸುದ್ದಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವುವು. ನಿರುದ್ಯೋಗಿಗಳು ನೀವು ಹುಡುಕದೆ ಇರುವ ಕ್ಷೇತ್ರದಿಂದ ಬರುತ್ತಿರುವ ಅವಕಾಶವನ್ನು ಒಪ್ಪಿಕೊಳ್ಳುವುದರಿಂದ ಒಳಿತಾಗುವುದು. ಈಶ್ವರ ಪ್ರಾರ್ಥನೆ ಮಾಡಿ.
ಕನ್ಯಾ(Virgo): ಸಮಾಧಾನ ಇರಲಿದೆ, ಗೃಹಸೌಖ್ಯ. ರೈತರಿಗೆ ಕೃಷಿಯಲ್ಲಿ ಅನುಕೂಲ, ಹಾಲು-ಹೈನು ವ್ಯವಹಾರಗಳಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಲವಲವಿಕೆ. ನೆಂಟರಿಷ್ಟರ ಭೇಟಿಯಿಂದ ಮನೋಲ್ಲಾಸ. ಹಳೆ ಸ್ನೇಹಿತರ ಭೇಟಿ ಸಾಧ್ಯತೆ. ಮನೆದೇವರಿಗೆ ತುಪ್ಪದ ದೀಪ ಹಚ್ಚಿ.
ತುಲಾ(Libra): ಸಹೋದರರ ಸಹಕಾರದಿಂದ ಆಸ್ತಿ ವ್ಯಾಜ್ಯಗಳು ಮಾತುಕತೆಯಲ್ಲೇ ಪರಿಹಾರ ಕಾಣುವುವು. ದಾಂಪತ್ಯದಲ್ಲಿ ಸ್ವಲ್ಪ ಅಸಮಾಧಾನವಾದರೂ ಕ್ಷಣಿಕವಷ್ಟೇ. ವ್ಯಾಪಾರದಲ್ಲಿ ಎಚ್ಚರವಾಗಿರಿ. ಹೊಸ ಕಾರ್ಯಾರಂಭಕ್ಕೆ ಮುನ್ನ ಸೂರ್ಯ ಪ್ರಾರ್ಥನೆ ಮಾಡಿ ಮುಂದುವರಿಯಿರಿ.
ವೃಶ್ಚಿಕ(Scorpio): ಅನ್ನ ಸಮೃದ್ಧಿಯಿಂದ ಮನಸ್ಸಿಗೆ ಖುಷಿ. ಕುಟುಂಬ ಸೌಖ್ಯವಿದ್ದರೂ ಶತ್ರುಬಾಧೆ ಕಿರಿಕಿರಿ ಉಂಟು ಮಾಡಲಿದೆ. ಸ್ನೇಹಿತರ ಜೊತೆ ತಿರುಗಾಟ. ಪ್ರೇಮಿಗಳಿಗೆ ನೆನಪಿನಲ್ಲಿ ಉಳಿಯುವಂಥ ದಿನ. ಹಿರಿಯ ನಾಗರಿಕರಲ್ಲಿ ನೆಮ್ಮದಿ. ಆಂಜನೇಯ ಪ್ರಾರ್ಥನೆ ಮಾಡಿ.
ಧನುಸ್ಸು(Sagittarius): ಕೆಲಸಕಾರ್ಯಗಳಲ್ಲಿ ಲಾಭವಿದೆ. ಪಾಲುದಾರರ ಕಡೆಯಿಂದ ವಂಚನೆಗೊಳಗಾಗದಂತೆ ಹೆಚ್ಚಿನ ಎಚ್ಚರಿಕೆ ವಹಿಸಿ. ಆರೋಗ್ಯದಲ್ಲಿ ವ್ಯತ್ಯಾಸ, ಹೊಟ್ಟೆಯಲ್ಲಿ ಕಿರಿಕಿರಿ. ಪ್ರವಾಸದಿಂದ ಆಯಾಸ. ನವಗ್ರಹ ಪ್ರಾರ್ಥನೆ ಮಾಡಿ.
ಮಕರ(Capricorn): ವಾಗ್ಬಲ ಇರಲಿದೆ, ಮಾತನಾಡುವ ಮುನ್ನ ಎರಡು ಬಾರಿ ಯೋಚಿಸಿ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ವಾಹನಗಳನ್ನು ದುರಸ್ತಿ ಮಾಡಿಸಿಕೊಳ್ಳುವುದು ಒಳಿತು. ಸ್ತ್ರೀಯರಿಗೆ ನೋವು, ಆತಂಕ. ಹೊಸ ಪೀಠೋಪಕರಣಗಳ ಖರೀದಿ. ನವಗ್ರಹ ಪ್ರಾರ್ಥನೆ ಮಾಡಿ.
ಕುಂಭ(Aquarius): ಅಂಜಿಕೆ- ಭಯದ ದಿನ, ಬಹಳ ಆಪೇಕ್ಷೆಯಿಂದ ಎದುರು ನೋಡುತ್ತಿರುವ ವಿಷಯದಲ್ಲಿ ನಿರಾಸೆ. ದೈಹಿಕವಾಗಿ ಸಾಕಷ್ಟು ವಿಶ್ರಾಂತಿ ಪಡೆಯಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಮನೆಯಲ್ಲಿ ಶುಭ ಕಾರ್ಯ ಆಗಬಹುದು. ಆಂಜನೇಯ ಪ್ರಾರ್ಥನೆ ಮಾಡಿ.
ಮೀನ(Pisces): ಜೀವನ ಸಂಗಾತಿಯ ಸಂಪೂರ್ಣ ಪ್ರೀತಿ ದೊರಕಿ ಸಂತೋಷದಲ್ಲಿ ತೇಲುವಿರಿ. ಅದಾಗ್ಯೂ ಕುಟುಂಬದ ಇತರೆ ಸದಸ್ಯರೊಂದಿಗೆ ಸಣ್ಣ ಮಟ್ಟಿನ ಕಿರಿಕಿರಿಯಾಗಬಹುದು. ನೀವು ಮಾಡುತ್ತಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ನಿಮ್ಮ ವಿರೋಧಿಗಳ ಬಗ್ಗೆ ಉದ್ವೇಗಕ್ಕೆ ಒಳಗಾಗಬೇಡಿ. ವಾಹನ ಯೋಗ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡುವುದರಿಂದ ಒಳಿತು.