Daily Horoscope: ಮಿಥುನ ರಾಶಿಗಿಂದು ಆರೋಗ್ಯ ಸಮಸ್ಯೆ, ಪರಿಹಾರವೇನು?

By Suvarna News  |  First Published Dec 4, 2021, 5:08 AM IST

4 ಡಿಸೆಂಬರ್ 2021, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕೆಲಸಕ್ಕೆ ಅಡೆತಡೆಗಳಿದ್ದಾಗ ಪರಿಹಾರವೇನು?


ಮೇಷ(Aries): ಕೆಲಸದಲ್ಲಿ ಹಲವಾರು ರೀತಿಯ ಅಡೆತಡೆಗಳು ಬರಬಹುದು. ಅಸಮಾಧಾನದ ದಿನ, ನಷ್ಟಫಲ. ಶತ್ರುಗಳಿಂದ ದೂರ ಉಳಿಯಿರಿ. ಬಂಧುಗಳೊಡನೆ ಯಾವ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳುವುದು ಬೇಡ. ಮನೋಬಲ ಇದ್ದರೂ ದ್ವಂದ್ವತೆ ಇರಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ವೃಷಭ(Taurus): ದಾಂಪತ್ಯದಲ್ಲಿ ಅಸಮಾಧಾನ, ಮನಸ್ಸು ಕದಡಿ ಹೋಗಲಿದೆ. ವ್ಯಾಪಾರದಲ್ಲಿ ಅಸಮಾಧಾನ, ಮೋಸ ಹೋಗುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಎಚ್ಚರವಾಗಿರಿ, ಮನೆದೇವತೆಗೆ ಪಾರ್ಥಿಸಿ ಮುಂದುವರಿಯಿರಿ. ದುರ್ಗಾ ದೇವಸ್ಥಾನದಲ್ಲಿ ದೂರ್ವಾರ್ಚನೆ ಮಾಡಿಸಿ.

Tap to resize

Latest Videos

undefined

ಮಿಥುನ(Gemini): ಆರೋಗ್ಯದಲ್ಲಿ ತೊಡಕು, ಆಸ್ಪತ್ರೆ ಅಲೆದಾಟದಿಂದ ಸುಸ್ತು. ತಂದೆ ಕಡೆ ಬಂಧುಗಳಿಂದ ಅಸಮಾಧಾನ, ಯಾರೊಡನೆಯೂ ವೃಥಾ ಜಗಳ, ವಾದ ವಿವಾದಗಳು ಬೇಡ. ಅಚಾನಕ್ ಪ್ರಯಾಣ ಸಾದ್ಯತೆ. ದುರ್ಗಾ ಸನ್ನಿಧಾನದಲ್ಲಿ ತುಪ್ಪದ ದೀಪ ಹಚ್ಚಿ. ದೈವಾನುಕೂಲ ಇರಲಿದೆ. 

dangerous zodiac signs: ಈ ಅಪಾಯಕಾರಿ ರಾಶಿಗಳೊಂದಿಗೆ ಎಚ್ಚರ, ಕಟ್ಟೆಚ್ಚರ!

ಕಟಕ(Cancer): ಆರೋಗ್ಯದಲ್ಲಿ ಸುಧಾರಣೆ ಹೊಂದುವಿರಿ. ಆದರೂ ಮಾನಸಿಕ ಅಸಮಾಧಾನ ತಪ್ಪದು. ಸಂಸಾರದ ವಾತಾವರಣ ಶಾಂತಿಯಿಂದ ಕೂಡಿರುತ್ತದೆ. ಮಕ್ಕಳಿಂದ ಬೇಸರ, ಬುದ್ಧಿ ಏರುಪೇರಾಗಲಿದೆ. ಸ್ತ್ರೀಯರನ್ನು ಗೌರವದಿಂದ ಕಾಣಿ. ಅವಿವಾಹಿತರಿಗೆ ಬೇಸರ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಸಿಂಹ(Leo): ಭೂ ವ್ಯವಹಾರಗಳಿಂದ ಲಾಭವಿದೆ. ಪ್ರಯಾಣ ಯೋಗವಿದೆ. ಕೃಷಿಕರಿಗೆ ಲಾಭವಿದೆ. ಬೆಂಕಿ, ನೀರಿನ ವಿಚಾರದಲ್ಲಿ ಎಚ್ಚರ ಇರಲಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಸಂತಾನ ಪ್ರಾಪ್ತಿ ಯೋಗವಿದೆ. ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಭಯ ದೂರಾಗುವುದು. ಕಟೀಲು ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ.

ಕನ್ಯಾ(Virgo): ಆರೋಗ್ಯ ಯಥಾಸ್ಥಿತಿಯಲ್ಲಿರುತ್ತದೆ. ಅವಿವಾಹಿತರಿಗೆ ಕಂಕಣ ಬಲವಿದೆ. ವಾಹನ, ದಿನಸಿ ವ್ಯಾಪಾರಸ್ಥರಿಗೆ ಲಾಭದ ದಿನ. ದಾಯಾದಿ ಕಲಹದಿಂದ ಅಸಮಾಧಾನ ಉಂಟಾಗಬಹುದು. ಕೆಲಸದ ಒತ್ತಡದಿಂದ ದೇಹಾಲಸ್ಯ ಆಗಬಹುದು. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ.

Effect of Rahu in 2022: ಮೇಷ, ವೃಷಭ ಸೇರಿ 6 ರಾಶಿಗೆ ರಾಹು ಕಾಟ

ತುಲಾ(Libra): ಸುಖದ ದಿನ. ಸಣ್ಣಪುಟ್ಟ ತಿರುಗಾಟದಿಂದ ಸಂತಸ. ಗೃಹಾಲಂಕಾರ ವಸ್ತುಗಳು, ಬಟ್ಟೆಬರೆಗಾಗಿ ಖರ್ಚು. ಮನೋರಂಜನೆಗಾಗಿ ಖರ್ಚು. ಆದರೆ ಕುಟುಂಬದಲ್ಲಿ ಅಸಹಕಾರ, ಮಾತು ಕಠಿಣವಾಗಲಿದೆ.  ವಾತದಿಂದ ದೇಹಾಯಾಸ. ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ.

ವೃಶ್ಚಿಕ(Scorpio): ವಾಹನ ಬಿಡಿ ಭಾಗಗಳ ವ್ಯಾಪಾರ, ಲೋಹದ ವ್ಯಾಪಾರ, ವಸ್ತ್ರ, ವಾಹನ ವ್ಯಾಪಾರದಲ್ಲಿ ಲಾಭ. ಆರೋಗ್ಯ ವೃದ್ಧಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಸದ್ವಿನಿಯೋಗಕ್ಕೆಡೆಯಿದೆ. ಬಲಹೀನತೆ, ಬುದ್ಧಿ ಮಂದವಾಗುತ್ತದೆ. ಅಮ್ಮನವರಿಗೆ ಪುಷ್ಪಾರ್ಚನೆ ಮಾಡಿಸಿ.

ಧನುಸ್ಸು(Sagittarius): ಬಹಳ ಜಾಗರೂಕತೆಯಿಂದ ಕೆಲಸಕಾರ್ಯಗಳನ್ನು ಮುನ್ನಡೆಸಿ. ಪತ್ನಿ ಪುತ್ರರ ಸಹಕಾರದಿಂದ ನೆಮ್ಮದಿ. ವ್ಯಯ ಹೆಚ್ಚಾಗಲಿದೆ, ಆರೋಗ್ಯದಲ್ಲಿ ಸಣ್ಣಪುಟ್ಟ ತೊಡಕು. ಆತಂಕಕ್ಕೆ ಕಾರಣವಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾಹಾನಿ. ದುರ್ಗಾ ಕವಚ ಪಠಿಸುವುದರಿಂದ ನಿಮ್ಮ ಪರಿಸ್ಥಿತಿ ಸುಧಾರಿಸಲಿದೆ.

ಮಕರ(Capricorn): ಕಬ್ಬಿಣ, ಬಣ್ಣ, ಬಟ್ಟೆ, ತೈಲ, ವಾಹನ ವ್ಯಾಪಾರಿಗಳಿಗೆ ಲಾಭ ಸಮೃದ್ಧಿ, ನಿರೀಕ್ಷೆಗೂ ಮೀರಿ ಸಂಗ್ರಹವಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ರಾಜಕೀಯದಲ್ಲಿ ಉನ್ನತ ಸ್ಥಾನ ಗಿಟ್ಟೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಅಮ್ಮನವರ ಸನ್ನಿಧಾನದಲ್ಲಿ ಫಲ ದಾನ ಮಾಡಿ.

ಕುಂಭ(Aquarius): ವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿ. ಅಪವಾದ ಭೀತಿ. ಗೃಹದಲ್ಲಿ ಮಂಗಳಕಾರ್ಯಕ್ಕೆ ನಾಂದಿ. ಶುಭ ಕಾರ್ಯದ ನಿಮಿತ್ತ ದೂರ ಸಂಚಾರ ಯೋಗವಿದೆ. ಹರಕೆಗಳನ್ನು ತೀರಿಸಿ. ಹೊಸ ಮಿತ್ರಾಗಮನ. ಶೈಕ್ಷಣಿಕ ವೆಚ್ಚ ಹೆಚ್ಚಳ. ಆರೋಗ್ಯದಲ್ಲಿ ಕಫ, ವಾತ ದೋಷಗಳಿಂದ ತೊಂದರೆ ಕಾಣಿಸಬಹುದು. ಲಲಿತಾ ಸಹಸ್ರನಾಮ ಪಠಿಸಿ.

ಮೀನ(Pisces): ವ್ಯಾಪಾರ- ವ್ಯವಹಾರದಲ್ಲಿ ಅಭಿವೃದ್ಧಿದಾಯಕ ಆದಾಯ, ರಾಜಕೀಯ ಕ್ಷೇತ್ರದಲ್ಲಿ ಅಸ್ಥಿರತೆ ಕಾಡಲಿದೆ. ರೈತರಿಗೆ ನಷ್ಟ. ತಂದೆ-ಮಕ್ಕಳಲ್ಲಿ ಅಸಮಾಧಾನ, ವೃತ್ತಿಯಲ್ಲಿ ಹಿನ್ನಡೆ, ದೇಹಾಯಾಸ ಇರಲಿದೆ. ಹೆಂಡತಿಯೊಂದಿಗೆ ತಕರಾರು. ಸಮಾಧಾನದಿಂದ ಮಾತನಾಡಿ. ಲಲಿತಾಪರಮೇಶ್ವರಿ ಪ್ರಾರ್ಥನೆ ಮಾಡಿ.

click me!