Daily Horoscope: ಕುಂಭ ರಾಶಿಗಿಂದು ಆಸ್ಪತ್ರೆ ಅಲೆದಾಟ, ನಿಮ್ಮ ರಾಶಿಯ ಭವಿಷ್ಯ ಏನಿದೆ ನೋಡಿ..

Published : Dec 24, 2021, 05:13 AM IST
Daily Horoscope: ಕುಂಭ ರಾಶಿಗಿಂದು ಆಸ್ಪತ್ರೆ ಅಲೆದಾಟ, ನಿಮ್ಮ ರಾಶಿಯ ಭವಿಷ್ಯ ಏನಿದೆ ನೋಡಿ..

ಸಾರಾಂಶ

24 ಡಿಸೆಂಬರ್ 2021, ಶುಕ್ರವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕನ್ಯಾ ರಾಶಿಗೆ ಅದೃಷ್ಟ, ಮಕರಕ್ಕೆ ಎದುರಾಗುವ ಮುನಿಸು

ಮೇಷ(Aries): ದೂರದೂರಿಗೆ ಕುಟುಂಬದೊಡನೆ ಪ್ರವಾಸ ಕೈಗೊಳ್ಳುವಿರಿ. ಇದರಿಂದ ಇಡೀ ದಿನ ದೇಹಾಯಾಸವಾದರೂ ಸಂತಸ ತುಂಬಿರಲಿದೆ. ಮನೆ ಹಿರಿಯರಿಗೆ ಅನಾರೋಗ್ಯ ಕಾಡಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಗಳ ನೆರವು. ಧನ ನಷ್ಟ, ಪ್ರಾಣಿಪಕ್ಷಿಗಳಿಗೆ ಆಹಾರ ನೀಡಿ. 

ವೃಷಭ(Taurus): ಹತ್ತಿರದವರೆನಿಸಿಕೊಂಡವರೇ ನಿಮ್ಮ ದಾರಿಗೆ ಕಲ್ಲುಗಳನ್ನು ಅಡ್ಡ ಇಡುತ್ತಿದ್ದಾರೆ. ಅದನ್ನು ತಿಳಿಯದೆ ಹೋದರೆ ಸಮಸ್ಯೆಗೆ ಸಿಲುಕುವಿರಿ. ಹಿತಶತ್ರುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.

ಮಿಥುನ(Gemini): ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ. ಮನೋರಂಜನೆ ವಿಷಯಗಳಿಗೆ ಧನವ್ಯಯ. ಸ್ನೇಹಿತರ ಭೇಟಿಯಿಂದ ಸಂತಸ. ಮಕ್ಕಳ ಸಲುವಾಗಿ ಖರ್ಚು ಹೆಚ್ಚುವುದು. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಿರಿ. ಅಹಿತ ಆಹಾರ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳಬೇಡಿ. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ. 

ಕಟಕ(Cancer): ಪ್ರಭಾವಿ ಜನರ ಭೇಟಿಯಿಂದ ಬಹು ದಿನಗಳಿಂದ ಹಿಂದೆ ಬಿದ್ದಿದ್ದ ಕೆಲಸ ಮುಂದೆ ಸಾಗಿ ನಿರಾಳವಾಗುವಿರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸ ಹೆಚ್ಚುವುದು. ಶಿವಶಕ್ತಿಯರ ಪ್ರಾರ್ಥನೆ ಮಾಡಿ. 

ಸಿಂಹ(Leo): ಎಲೆಕ್ಟ್ರಿಕ್, ದಿನಸಿ, ವಸ್ತ್ರ, ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಲಾಭದ ದಿನ. ವಿದ್ಯಾರ್ಥಿಗಳಿಗೆ ಅನುಕೂಲದ ದಿನ. ವೃತ್ತಿಯಲ್ಲಿ ಹೊಸ ಅವಕಾಶದಿಂದ ಸಂತೋಷ. ನಾಲಿಗೆ ಮೇಲೆ ಹಿಡಿತ ಅಗತ್ಯ. ಅವಿವಾಹಿತರಿಗೆ ಶುಭ ಸುದ್ದಿ. ಲಕ್ಷ್ಮೀ ಅಷ್ಟೋತ್ತರ ಹೇಳಿಕೊಳ್ಳಿ. 

ಕನ್ಯಾ(Virgo): ಎಲ್ಲರ ಗಮನದ ಕೇಂದ್ರಬಿಂದುವಾಗುವ ಅವಕಾಶ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗಿ ಬರುವುದು. ನಿರುದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಮನಸ್ತಾಪ, ವ್ಯಾಜ್ಯಗಳು ಇತ್ಯರ್ಥವಾಗಲಿವೆ. ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ. 

ತುಲಾ(Libra): ಆಹಾರದಲ್ಲಿ ವ್ಯತ್ಯಾಸವಾಗಿ ಉದರ ಸಮಸ್ಯೆಗಳು ಎದುರಾಗಬಹುದು.  ಬಹುಕಾಲದಿಂದ ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಬಂಧುಮಿತ್ರರ ಮನೆಗೆ ಭೇಟಿ. ರೈತರು, ವ್ಯಾಪಾರಿಗಳು, ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಪ್ರಶಂಸೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.

Wedding Superstitions: ಮದುವೆ ದಿನ ವಧು ಅತ್ರೆ ಒಳ್ಳೇದಾ ಕೆಟ್ಟದ್ದಾ?

ವೃಶ್ಚಿಕ(Scorpio): ನೀರಿನ ಸಮೀಪದಲ್ಲಿ ಎಚ್ಚರವಾಗಿರಿ. ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸುದಿನ. ಪ್ರೀತಿ ಪ್ರೇಮ ವ್ಯವಹಾರಗಳಲ್ಲಿ ಮನಸ್ತಾಪ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನತೆ. ರಾಜಕೀಯ, ಶೈಕ್ಷಣಿಕ ರಂಗದಲ್ಲಿರುವವರಿಗೆ ಅನಿರೀಕ್ಷಿತ ಸುದ್ದಿ ಕೇಳಿಬರುವುದು. ಮನೆದೇವರ ಸ್ಮರಣೆ ಮಾಡಿ. 

ಧನುಸ್ಸು(Sagittarius): ಕೆಲಸ ತುಸು ಶ್ರಮ ಎನಿಸಿದರೂ ಕಡೆಯಲ್ಲಿ ಲಾಭವಿದೆ, ಖರ್ಚೂ ಇದೆ. ದಾಂಪತ್ಯದಲ್ಲಿ ಸಹಕಾರ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಡಬಹುದು. ಮಕ್ಕಳ ಸಹಕಾರದಿಂದ ನೆಮ್ಮದಿ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ. 

ಮಕರ(Capricorn): ದಾಂಪತ್ಯದಲ್ಲಿ ಜಗಳ, ಮುನಿಸುಗಳು ಕಾಣಬಹುದು. ಮಾತುಗಳನ್ನು ನುಂಗಿಕೊಂಡು ಕೂರುವ ಬದಲು, ಮನಸ್ಸಿನಲ್ಲಿರುವುದನ್ನೆಲ್ಲ ಸಮಾಧಾನವಾಗಿ ಹೇಳಿ. ಮನೆಯಿಂದ ಬೇಡದ ವಸ್ತುಗಳನ್ನು ಹೊರಗೆ ದಾಟಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ,  ಹಸುವಿಗೆ ಹಸಿರು ತಿನ್ನಿಸಿ. 

2022 Happy year ಆಗ್ಬೇಕಂದ್ರೆ ಈ ರಾಶಿಯವರು ಹೀಗ್ ಮಾಡ್ಲೇಬಾರ್ದು...

ಕುಂಭ(Aquarius): ತಾಯಿಯ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ಅಲೆದಾಟ. ದೈನಂದಿನ ಕೆಲಸದಿಂದ ಕೊಂಚ ಬಿಡುವು. ಸಂಬಂಧಿಕರ ನೆರವಿನಿಂದ ಬಹುಕಾಲದ ಆತಂಕ ನಿವಾರಣೆಯಾಗುವುದು. ಹಲವು ಕೆಲಸಗಳು ಬಾಕಿ ಉಳಿದು ಕಿರಿಕಿರಿ. ಹೊಸ ವಸ್ತುಗಳ ಖರೀದಿಗೆ ಧನವ್ಯಯ. ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ. 

ಮೀನ(Pisces): ಕೌಟುಂಬಿಕವಾಗಿ ಹಿರಿಯರ ತಾಟಸ್ತ್ಯ ಧೋರಣೆಯಿಂದ ಬೇಸರ, ಸ್ಥಿರಾಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ, ಪ್ರವಾಸದಿಂದ ಅನಾರೋಗ್ಯ ಕಾಡಲಿದೆ. ಅವಮಾನಕರ ಘಟನೆಗಳು ಜರುಗುವ ಸಾಧ್ಯತೆ. ಸ್ತ್ರೀಪೀಡೆ, ಗೃಹಚಿಂತೆಗಳು ಕಂಗಾಲಾಗಿಸಲಿವೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 
 

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ