18 ಏಪ್ರಿಲ್ 2022, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಹಿತ್ತಾಳೆ ಕಿವಿಯ ಸ್ವಭಾವದಿಂದ ಕಟಕಕ್ಕೆ ಸಮಸ್ಯೆ
ಮೇಷ(Aries): ಪ್ರೀತಿ ವಿಚಾರದಲ್ಲಿ ಗೊಂದಲ ಕಾಡುವುದು. ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ಮಾತುಗಳಿಗೆ ವಿರೋಧ ವ್ಯಕ್ತವಾಗಬಹುದು. ಅದನ್ನು ಧನಾತ್ಮಕವಾಗಿಯೇ ತೆಗೆದುಕೊಳ್ಳಿ. ಶಿವ ಶತನಾಮಾವಳಿ ಹೇಳಿಕೊಳ್ಳಿ.
ವೃಷಭ(Taurus): ತಂದೆತಾಯಿಯ ಕಡೆಯಿಂದ ಸಂತಸದ ಸುದ್ದಿ ಬರಲಿದೆ. ಅವಿವಾಹಿತರು ಪ್ರೇಮದ ಸಂಭ್ರಮದಲ್ಲಿ ಮೀಯಲಿದ್ದಾರೆ. ಕಚೇರಿಯಲ್ಲಿ ಕೆಲಸ ಎಂದಿನಂತಿರಲಿದೆ. ಲೇವಾದೇವಿ ವ್ಯವಹಾರಗಳಲ್ಲಿ ಲಾಭ. ಕೌಟುಂಬಿಕ ಸೌಖ್ಯ. ಶಿವ- ಶಕ್ತಿಯರ ಪ್ರಾರ್ಥನೆ ಮಾಡಿ.
undefined
ಮಿಥುನ(Gemini): ಸಣ್ಣ ಮಾತಿಂದ ವಿವಾದದ ಕಿಡಿ ಹೊತ್ತಿಕೊಳ್ಳಬಹುದು. ನಿಮ್ಮ ಒಳ್ಳೆಯ ಮನಸ್ಸನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎನಿಸಬಹುದು. ಸರ್ಕಾರಿ ಕೆಲಸಗಳು ವಿಳಂಬವಾಗಿ ಕಿರಿಕಿರಿಯಾಗುತ್ತದೆ. ಬೇಡದ ರಾಜಕೀಯ ವಿಷಯಗಳಿಗೆ ಮೂಗು ತೂರಿಸಬೇಡಿ. ಶಿವನಿಗೆ ಜಲಾಭಿಷೇಕ ಮಾಡಿಸಿ.
ಕಟಕ(Cancer): ಪತಿ ಪತ್ನಿಯ ನಡುವೆ ಮೂರನೆಯವರ ಮೂಗು ತೂರಿಸುವಿಕೆಯಿಂದ ಅಂತರ ಹೆಚ್ಚಬಹುದು. ಹಿತ್ತಾಳೆ ಕಿವಿಯವರಾಗಬೇಡಿ. ಕಂಡ ಕನಸುಗಳು ನನಸಾಗುವ ಹಾದಿಯಲ್ಲಿ ವಿಘ್ನಗಳೆದುರಾಗಿ ಮನಸ್ಸಿಗೆ ಕಸಿವಿಸಿಯಾಗಲಿದೆ. ಸುಬ್ರಹ್ಮಣ್ಯ ಸ್ಮರಣೆ ಮಾಡಿ.
ಸಿಂಹ(Leo): ದೂರ ಪ್ರಯಾಣ ಮಾಡುವ ಮುನ್ನ ಮನೆದೇವರ ಪ್ರಾರ್ಥನೆ ಮಾಡಿ. ಹಳೆಯ ಕಹಿ ಘಟನೆಗಳು ಕಾಡಬಹುದು. ಸಂಗಾತಿಯೊಂದಿಗೆ ಮೌನ ಯುದ್ಧ ನಡೆಯಬಹುದು. ಪಾಲುದಾರಿಕೆ ವ್ಯಾಪಾರ, ವ್ಯವಹಾರಗಳಿಂದ ಹೆಚ್ಚಿನ ಲಾಭ. ರುದ್ರಾಭಿಷೇಕ ಮಾಡಿಸಿ.
ವರ್ಷದ ಮೊದಲ ಸೂರ್ಯಗ್ರಹಣ ತರಲಿದೆ 5 ರಾಶಿಗಳಿಗೆ ಹರ್ಷ
ಕನ್ಯಾ(Virgo): ನಿಮ್ಮ ಏಳ್ಗೆ ಬಗ್ಗೆ ಕುಟುಂಬ ವರ್ಗದವರಲ್ಲಿ ಮತ್ಸರ ಹೆಚ್ಚಲಿದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ನಿಲುವಿನಿಂದ ಮುಂದುವರಿಯಿರಿ. ದೇವರ ಸ್ಮರಣೆಯೊಂದಿಗೆ ನಿಮ್ಮ ಬದುಕಿನ ಬಗ್ಗೆ ಮಾತ್ರ ಯೋಚಿಸಿ. ನಾಗರ ಕಟ್ಟೆಗೆ ನಮಸ್ಕರಿಸಿ.
ತುಲಾ(Libra): ದುಡುಕು ವರ್ತನೆಯಿಂದ ಧನನಷ್ಟವಾಗಲಿದೆ. ಮನಸ್ಸು ಚಂಚಲವಾಗಿರುವುದು. ಅನಗತ್ಯ ಆತಂಕಗಳು ಕಾಡುವುವು. ಪ್ರೇಮಿಗಳ ನಡುವೆ ಬಿಕ್ಕಟ್ಟು ಹೆಚ್ಚಲಿದೆ. ಎಷ್ಟೇ ನಂಬಿಕೆಯ ಜನರಾದರೂ ಕುಟುಂಬದ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಶಿವನ ದೇವಾಲಯಕ್ಕೆ ಭೇಟಿ ನೀಡಿ.
ವೃಶ್ಚಿಕ(Scorpio): ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಲಾಭದಾಯಕ ಆದಾಯವಿದ್ದರೂ ದುಡುಕದೇ ಮುಂದುವರಿಯಿರಿ. ಮಂಜುನಾಥ ಪ್ರಾರ್ಥನೆ ಮಾಡಿ.
ಧನುಸ್ಸು(Sagittarius): ಸದ್ವಿಚಾರ, ಸತ್‌ಚಿಂತನೆಗಳು ನಿಮ್ಮನ್ನು ಸರಿಯಾದ ಹಾದಿಯಲ್ಲಿ ನಡೆಸಲಿವೆ. ಸ್ವಂತ ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಲಾಭ ಪಡೆಯುವಿರಿ. ಮಕ್ಕಳಿಗೆ ಉತ್ತಮ ಪ್ರತಿಭಾನ್ವೇಷಣೆ ಅವಕಾಶಗಳು ಸಿಗುವುವು. ಆತ್ಮವಿಶ್ವಾಸ ಇರಲಿದೆ. ಸುಬ್ರಹ್ಮಣ್ಯನ ಶ್ಲೋಕಗಳನ್ನು ಹೇಳಿ.
ಮಕರ(Capricorn): ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ನಿರ್ಧಾರ ತೆಗೆದುಕೊಳ್ಳಿ. ಇಲ್ಲದಿದ್ದರೆ ಭವಿಷ್ಯದಲ್ಲಿ ಹೊರೆಯಾಗುವುದು. ಕೆಲಸ ಕಾರ್ಯಗಳು ಸರಾಗವಾಗಿ ಸಾಗುವುವು. ಪ್ರೇಮ ಸಂಬಂಧಗಳು ನಿಮ್ಮ ಜೀವನೋತ್ಸಾಹ ಹೆಚ್ಚಿಸಲಿವೆ. ಮೃತ್ಯುಂಜಯ ಜಪ ಮಾಡಿ.
ಕುಂಭ(Aquarius): ಮಕ್ಕಳು ಯಾವುದೋ ಸಮಸ್ಯೆಯಲ್ಲಿ ಸಿಲುಕಿರಬಹುದು. ಆ ಬಗ್ಗೆ ವಿಚಾರಿಸಿ, ಅವರಿಗೆ ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಿ. ತ್ವಚೆಯ ಸಮಸ್ಯೆಗಳು ಕಾಡಬಹುದು. ನೆಂಟರಿಷ್ಟರ ನಡೆಗಳು ಮನಸ್ಸಿನಲ್ಲಿ ಕ್ಲೇಶ ಉಂಟು ಮಾಡಬಹುದು. ಶಿವ ಶತನಾಮಾವಳಿ ಹೇಳಿ.
Vastu Tips for Women: ಈ ಸಣ್ಣ ಎಚ್ಚರಿಕೆಗಳು ತರುತ್ತವೆ ಮನೆ ಮಹಿಳೆಗೆ ಆರೋಗ್ಯ
ಮೀನ(Pisces): ವಿರೋಧಿಗಳ ಉಪದ್ರವ ಹೆಚ್ಚಬಹುದು. ಈ ಬಾರಿಯೂ ಪ್ರತಿಕ್ರಿಯಿಸದೆ ಉಳಿದರೆ ಮತ್ತಷ್ಟು ಕಿರಿಕಿರಿ ಹೆಚ್ಚುವುದು. ಸಾತ್ವಿಕ ಮಾರ್ಗದಲ್ಲಿ ಸರಿಯಾಗಿ ತಿರುಗೇಟು ನೀಡಿ. ರಕ್ತದೊತ್ತಡ, ತಲೆನೋವು ಇತ್ಯಾದಿ ಬಾಧೆ ಕಾಡಬಹುದು. ಹಸುವಿಗೆ ಅಕ್ಕಿ ನೀಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.