Daily Horoscope: ಯಾವ ರಾಶಿಗೆಲ್ಲ ಇದು ಶುಭ ಶನಿವಾರವಾಗಿದೆ ನೋಡಿ..

By Suvarna NewsFirst Published Apr 9, 2022, 1:55 PM IST
Highlights

ಈ ಶನಿವಾರದ ದಿನ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.
 

ಮೇಷ(Aries): ಕ್ರೀಡಾ ಚಟುವಟಿಕೆಗಳಿಂದ ಉಲ್ಲಾಸ. ಗೆಳೆಯರೊಂದಿಗೆ ಹರಟೆ. ಬಹಳ ದಿನಗಳ ಬಳಿಕ ಸಂಗಾತಿಯೊಂದಿಗೆ ದೂರಪ್ರಯಾಣ ಮಾಡುವಿರಿ. ನಕಾರಾತ್ಮಕ ಯೋಚನೆಗಳನ್ನು ಬದಿಗಿಡುವ ಪ್ರಯತ್ನ ಮಾಡಿ. ಬೇಡದ ವಾಗ್ವಾದಗಳಿಂದ ಮನಸ್ಸು ಹಾಳಾಗಬಹುದು. ಮೌನದ ಮೊರೆ ಹೋಗಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ವೃಷಭ(Taurus): ಹೊರ ಊರಿನಲ್ಲಿರುವ ಮಕ್ಕಳು ಮನೆಗೆ ಭೇಟಿ ನೀಡಿ ಸಂತಸವಾಗುವುದು. ಗೃಹಕೃತ್ಯಗಳು ಹೆಚ್ಚುವುವು. ಮನರಂಜನೆಗಾಗಿ ಸಮಯ ಮೀಸಲಿಡುವಿರಿ. ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುವಿರಿ. ಅಕ್ಕಪಕ್ಕದವರೊಂದಿಗೆ ಜಗಳ ಮಾಡಬೇಡಿ. ಎಳ್ಳು ದಾನ ನೀಡಿ. 

Latest Videos

ಮಿಥುನ(Gemini): ಕುಟುಂಬದವರೊಡನೆ ಕಾಲ ಕಳೆಯುವಿರಿ. ಮಧ್ಯಸ್ಥಿಕೆ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುವುದು. ಭೂಮಿಯ ವ್ಯವಹಾರದಲ್ಲಿ ಅಭಿವೃದ್ಧಿ ಹೆಚ್ಚಿ ಸಂತಸವಾಗುವುದು. ಹೊಸ ಮನೆ ಕೊಳ್ಳಬಹುದು ಅಥವಾ ಪಿತ್ರಾರ್ಜಿತ ಆಸ್ತಿ ದೊರೆಯಲಿದೆ. ಆಂಜನೇಯನಿಗೆ ವೀಳ್ಯದ ಹಾರ ಅರ್ಪಿಸಿ.

ಕಟಕ(Cancer): ಬೇಡದ ವಸ್ತುಗಳ ಖರೀದಿಗಾಗಿ ಹಣ ವ್ಯಯಿಸಿ, ನಂತರ ವ್ಯರ್ಥವಾಯಿತು ಎಂಬ ಸಂಕಟವಾಗುವುದು. ಕೋಪದ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಿ. ಸಂಗಾತಿಯೊಂದಿಗೆ ಪ್ರೀತಿಯ ಮಾತುಗಳನ್ನಾಡಿ. ದಾಂಪತ್ಯ ಜೀವನ ಚೆನ್ನಾಗಿರಲಿದೆ. ಇರುವೆಗಳಿಗೆ ಸಿಹಿ ತಿನ್ನಿಸಿ. 

ಸಿಂಹ(Leo): ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ. ನೆಂಟರಿಷ್ಟರ ಭೇಟಿಯಿಂದ ಸಂತಸ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿ ಬರಲಿದೆ. ವ್ಯಾಪಾರ ವಹಿವಾಟುಗಳಲ್ಲಿ ಲಾಭದಾಯಕ ಆದಾಯವಿದೆ. ಹೊಸ ಮನೆಯ ಬಾಕಿ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಶಿವ ಧ್ಯಾನ ಮಾಡಿ. 

Vastu Tips : ಯಮರಾಜನಿಗೆ ಸೀಮಿತವಾದ ಈ ದಿಕ್ಕಿನ ಬಗ್ಗೆ ನಿರ್ಲಕ್ಷ್ಯ ಬೇಡ

ಕನ್ಯಾ(Virgo): ಹಣದ ವಿಚಾರದಲ್ಲಿ ಕಷ್ಟಗಳು ಬರುತ್ತವೆ. ಸೂಚನೆ ಕೊಡದೇ ಖರ್ಚುಗಳು ಹೆಚ್ಚಬಹುದು. ಅನಿರೀಕ್ಷಿತವಾಗಿ ಹಣ ವ್ಯಯ ಮಾಡಬೇಕಾಗುವುದು. ಉದಾಸೀನತೆ ಕಾಡಿ ಕೆಲಸಗಳು ನಿಧಾನಗತಿಯಲ್ಲಿ ಸಾಗುವುವು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ತುಲಾ(Libra): ನಿಮ್ಮ ಹೊಣೆಗಾರಿಕೆ ಹೆಚ್ಚುವುದು. ಯಾರೊಂದಿಗೂ ವಾಗ್ವಾದಕ್ಕಿಳಿಯಬೇಡಿ. ಅನಗತ್ಯ ವಿಚಾರಗಳಿಂದ ದೂರವಿರುವುದು ಎಷ್ಟು ಮುಖ್ಯವೋ, ಅಗತ್ಯ ವಿಚಾರಗಳಿಗೆ ಹೆಚ್ಚಿನ ಸಮಯ ಕೊಡುವುದೂ ಅಷ್ಟೇ ಮುಖ್ಯ. ಮನೆ ದೇವರಿಗೆ ಪ್ರಾರ್ಥಿಸಿ. 

ವೃಶ್ಚಿಕ(Scorpio): ಕೆಲಸ ಕಾರ್ಯಗಳು ಅಂದುಕೊಂಡಿದ್ದಕ್ಕಿಂತ ಚೆನ್ನಾಗಾಗಿ ನೆಮ್ಮದಿಯಾಗುವುದು.  ಒಡ ಹುಟ್ಟಿದವರೊಂದಿಗೆ ಜಗಳಗಳಾಗುವ ಸಾಧ್ಯತೆಯಿದೆ. ಎಚ್ಚರ ವಹಿಸಿ. ಯಾರಿಗೂ ನಿಮ್ಮ ಮೇಲೆ ದೌರ್ಜನ್ಯವೆಸಗಲು ಅವಕಾಶ ಕೊಡಬೇಡಿ. ಬೇಕಿದ್ದರೆ ಅಧಿಕಾರದಲ್ಲಿರುವವರ ಸಹಾಯ ಪಡೆಯಿರಿ. ಕಪ್ಪು ವಸ್ತುಗಳನ್ನು ದಾನ ಮಾಡಿ. 

ಧನುಸ್ಸು(Sagittarius): ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿಬರಲಿವೆ. ಸ್ವಂತ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭವಿದ್ದು, ನಿಮ್ಮ ಕೆಲಸವನ್ನು ಎಲ್ಲರೂ ಮೆಚ್ಚುವರು. ಬಲ ವೃದ್ಧಿಯಾಗಲಿದೆ. ಮನೆ ಹಿರಿಯರ ಆಶೀರ್ವಾದ ಪಡೆಯಿರಿ. 

ಮಕರ(Capricorn): ಮಾಡಬೇಕಾದ ಕೆಲಸಗಳು ಸಾಕಷ್ಟಿದ್ದರೂ ಯಾವುದೂ ಮಾಡದೆ ಕಳೆದು ದಿನಾಂತ್ಯದಲ್ಲಿ ಪಶ್ಚಾತ್ತಾಪ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ  ಓದಿನಲ್ಲಿ ಆಸಕ್ತಿ ಹೆಚ್ಚುವ ಜೊತೆಗೆ ಏಕಾಗ್ರತೆಯೂ ಹೆಚ್ಚುವುದು.  ಅಶ್ವತ್ಥ ಮರದ ಬುಡದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ. 

ನವರಾತ್ರಿ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ಬಾರ್ದು ಅಂತಾರಲ್ಲ ಯಾಕೆ ?

ಕುಂಭ(Aquarius): ಪೂರೈಕೆಯಾಗದ ಕೆಲಸಗಳ ಬಗ್ಗೆ ಚಿಂತೆ ಬೇಡ. ಗಡುವು ವಿಸ್ತರಣೆಯಾಗಲಿದೆ. ಸಂಗಾತಿಯ ವಿಚಾರದಲ್ಲಿ ಕೊಂಚ ಕಸಿವಿಸಿ, ಜಗಳ ಇರಬಹುದು. ಅಹಂ ಬಿಡಲು ಪ್ರಯತ್ನಿಸಿ. ಮನೆಯ ಸ್ಥಳಾಂತರ ಕಾರ್ಯ ನಡೆಯಬಹುದು. ಕುಲದೇವರಿಗೆ ತುಪ್ಪದ ದೀಪ ಹಚ್ಚಿ. 

ಮೀನ(Pisces): ಮಕ್ಕಳ ಮಾನಸಿಕ ಆರೋಗ್ಯ, ಬೆಳವಣಿಗೆ ಕುರಿತಾಗಿ ಹೆಚ್ಚಿನ ಕಾಳಜಿ ಅಗತ್ಯ. ನಿರುದ್ಯೋಗಿಗಳು ಪ್ರಯತ್ನಬಲ ಹೆಚ್ಚಿಸಬೇಕು. ನಿದ್ರಾಹೀನತೆ ಕಾಡಲಿದೆ. ಧ್ಯಾನ, ಪ್ರಾಣಾಯಾಮ ನಿಮ್ಮ ಸಹಾಯಕ್ಕೆ ಬರಬಹುದು. ಶನಿ ಮಂತ್ರ ಹೇಳಿಕೊಳ್ಳಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!