ದಿನ ಭವಿಷ್ಯ: ವೃಶ್ಚಿಕ ರಾಶಿಯವರು ನಿರ್ಧಾರ ಕೈಗೊಳ್ಳುವಾಗ ಎಚ್ಚರ, ಉಳಿದ ರಾಶಿ ಹೇಗಿದೆ?

Published : Jul 24, 2021, 08:08 AM ISTUpdated : Jul 24, 2021, 08:30 AM IST
ದಿನ ಭವಿಷ್ಯ: ವೃಶ್ಚಿಕ ರಾಶಿಯವರು ನಿರ್ಧಾರ ಕೈಗೊಳ್ಳುವಾಗ ಎಚ್ಚರ, ಉಳಿದ ರಾಶಿ ಹೇಗಿದೆ?

ಸಾರಾಂಶ

* 24ಜುಲೈ 2021 ಶನಿವಾರದ ಭವಿಷ್ಯ * ವೃಷಭ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಸಮಾಧಾನ * ಧನುಸ್ಸು ರಾಶಿಯವರು ದಾಂಪತ್ಯದಲ್ಲಿ ಎಚ್ಚರದಿಂದಿರಿ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಅದೃಷ್ಟ ಫಲವಿರಲಿದೆ, ತಂದೆಯಿಂದ ಸಹಕಾರ, ಅನುಕೂಲದ ದಿನ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಹಣಕಾಸಿನ ವಿಚಾರದಲ್ಲಿ ಸಮಾಧಾನ ಇರಲಿದೆ, ಸಹೋದರ ಸಂಬಂಧಿಗಳಿಂದ ಸಹಾಯ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗ್ರಾಮ ದೇವತೆಯ ಪ್ರಾರ್ಥನೆ ಮಾಡಿ

ಮಿಥುನ - ಸ್ತ್ರೀಯರಿಂದ ಸಹಕಾರ, ದಾಯಾದಿ ಕಲಹಕ್ಕೆ ಕಾರಣ, ಕೃಷ್ಣನಿಗೆ ತುಳಸಿ ಹಾರ ಸಮರ್ಪಿಸಿ

ಕಟಕ - ಗುರುವಿನ ಮಾರ್ಗದರ್ಶನ ಪಡೆಯಿರಿ, ಹಣಕಾಸಿಗೆ ಕೊಂಚ ಪರದಾಟ, ಉತ್ಸಾಹ ಶಕ್ತಿ ಇರಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

 

ಸಿಂಹ: ಸ್ವಾರ್ಥಿಗಳ ಸ್ವಾರ್ಥ ಸಾಧನೆಗೆ ನೀವು ಬಳಕೆಯಾಗುವ ಅವಕಾಶವಿದೆ. ಎಚ್ಚರಿಕೆಯಿಂದ ಇರಿ. ಮಾತಿಗಿಂತ ಮೌನ ಲೇಸು.

ಕನ್ಯಾ: ಎಲ್ಲವೂ ನನ್ನಿಂದಲೇ ಎನ್ನುವ ಅಹಂ ಬೇಡ. ನಿಮ್ಮ ಹಿತ ಬಯಸುವ ವ್ಯಕ್ತಿಗಳ ಮಾತಿಗೆ ಬೆಲೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ತುಲಾ: ರಾಜಕೀಯ ಪ್ರಗತಿಗೆ ಪೂರಕವಾಗಿ ಇಂದು ಕೆಲವು ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಬರಲಿವೆ. ಮನೆಯಲ್ಲಿ ಸಂತಸ ಹೆಚ್ಚಲಿದೆ.

ವೃಶ್ಚಿಕ: ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಲ್ಲ. ಸರಿಯಾಗಿ ವಿವೇಚನೆ ಮಾಡಿ ನಿರ್ಧಾರ ಕೈಗೊಳ್ಳಿ. ನಿಮ್ಮಿಂದ ಇತರರು ಖುಷಿಯಾಗಿರಲಿದ್ದಾರೆ.

 

ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?

ಧನುಸ್ಸು - ದಾಂಪತ್ಯದಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕುಂಟಾಗುವ ಸಾಧ್ಯತೆ ಇದೆ, ಹಿರಿಯರ ಸಹಕಾರ, ಮಾತಿನಲ್ಲಿ ಹಿಡಿತಬೇಕು, ಮನೆ ದೇವರ ಪ್ರಾರ್ಥನೆ ಮಾಡಿ

ಮಕರ ಮಾತಿನ ಸಮೃದ್ಧಿ, ಪ್ರಯಾಣ ಸುಖಕರವಾಗಿರಲಿ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಸ್ತೋತ್ರ ಪಠಿಸಿ

ಕುಂಭ - ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು, ಉದ್ಯೋಗಿಗಳಿಗೆ ಶುಭಫಲವಿದೆ, ಮೇಧಾ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ಮೀನ - ಪ್ರಯಾಣದಲ್ಲಿ ತೊಡಕು, ವಿಷ ಜಂತುಗಳಿಂದ ಎಚ್ಚರಿಕೆ ಇರಲಿ, ಕೃಷಿಕರು ಎಚ್ಚರವಾಗಿರಿ, ಗ್ರಾಮದೇವತಾ ಪೂಜೆ ಮಾಡಿ

 

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು