ದಿನ ಭವಿಷ್ಯ: ವೃಷಭ ರಾಶಿಯವರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ!

Published : Aug 15, 2021, 09:21 AM ISTUpdated : Aug 15, 2021, 09:22 AM IST
ದಿನ ಭವಿಷ್ಯ: ವೃಷಭ ರಾಶಿಯವರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ!

ಸಾರಾಂಶ

* 15 ಆಗಸ್ಟ್‌ 2021 ಭಾನುವಾರದ ಭವಿಷ್ಯ * ವೃಷಭ ರಾಶಿಯವರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಶುಭ ಫಲ

ವೃಷಭ: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಶುಭದಿನ.

ಮಿಥುನ: ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ.

ಕಟಕ: ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ.

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ಸಿಂಹ - ಧನ ಸಮೃದ್ಧಿ, ಬಲ ಕುಗ್ಗಲಿದೆ, ಆದಿತ್ಯ ಹೃದಯ ಪಾರಾಯಣದಿಂದ ಉತ್ತಮ ಫಲ

ಕನ್ಯಾ - ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ, ಶುಭಫಲವೂ ಇದೆ, ಅಂಜಿಕೆಯ ವಾತಾವರಣ, ಸುದರ್ಶನ ಮಂತ್ರ ಪಠಿಸಿ

ತುಲಾ- ವ್ಯಾಪಾರಿಗಳು ಜಾಗ್ರತೆ ವಹಿಸಿ, ಕೊಂಚ ಸಮಸ್ಯೆಗಳಾಗುವ ಸಾಧ್ಯತೆ ಇದೆ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಸಮೃದ್ಧಿಯ ಫಲಗಳಿದ್ದಾವೆ, ಸ್ತ್ರೀಯರಿಂದ ಮನಸ್ತಾಪ, ಸುವಾಸಿನಿ ಪೂಜೆ ಮಾಡಿ, ಸ್ತ್ರೀಯರಿಗೆ ಮಂಗಲದ್ರವ್ಯ ಸಮರ್ಪಿಸಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಧನುಸ್ಸು: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿ ಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಮಕರ: ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ 

ಕುಂಭ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಮೀನ: ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠೂರವಾಗಿ ನಡೆದುಕೊಳ್ಳಿ

 

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು