ದಿನ ಭವಿಷ್ಯ: ಸಿಂಹ ರಾಶಿಯವರಿಗೆ ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ!

By Precilla Olivia Dias  |  First Published Sep 13, 2021, 7:08 AM IST

* 13 ಸಪ್ಟೆಂಬರ್ 2021 ಸೋಮವಾರದ ಭವಿಷ್ಯ

* ಸಿಂಹ ರಾಶಿಯವರಿಗೆ ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 


ಮೇಷ - ಪ್ರತಿಭಾ ಶಕ್ತಿ ಜಾಗೃತವಾಗಲಿದೆ, ಸರ್ಕಾರಿ ನೌಕರರಿಗೆ ಮನ್ನಣೆ, ಮಾನಸಿಕ ದುರ್ಬಲತೆ ಇರಲಿದೆ, ಚಂದ್ರ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ಸ್ಥಾನ ಮಾನ, ಹಣಕಾಸಿನ ಏರುಪೇರು, ಮಾತಿನಲ್ಲಿ ಹಿಡಿತವಿರಲಿ, ಚಂದ್ರ-ಬುಧರ ಪ್ರಾರ್ಥನೆ ಮಾಡಿ

Latest Videos

undefined

ಮಿಥುನ - ಮಾತಿನಿಂದ ಸ್ಥಾನ ಕಳೆಯುವ ಸಾಧ್ಯತೆ ಇದೆ, ಕುಟುಂಬದಲ್ಲಿ ಮನಸ್ತಾಪ, ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ

ಕಟಕ - ವ್ಯಯ ಹೆಚ್ಚಲಿದೆ, ದೇಹದಲ್ಲಿ ವ್ಯತ್ಯಾಸವಾಗಲಿದೆ, ಮಾನಸಿಕ ವ್ಯತ್ಯಾಸವೂ ಇರಲಿದೆ, ಅದೃಷ್ಟ ಹೀನತೆ, ಚಂದ್ರ-ಬುಧರ ಪ್ರಾರ್ಥನೆ ಮಾಡಿ

ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!

ಸಿಂಹ - ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಗಂಭೀರ ತೊಂದರೆಗೆ ಒಳಪಡುವ ಸಾಧ್ಯತೆ ಇರಲಿದೆ, ಸಂಗಾತಿಯ ಸಹಕಾರ ಪಡೆಯಿರಿ, ಚಂದ್ರನ ಉಪಾಸನೆ ಮಾಡಿ

ತುಲಾ - ಸ್ತ್ರೀಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ, ವಾಗ್ವಾದ, ಘರ್ಷಣೆವೊಳಗಾಗುವ ಸಂದರ್ಭ ಬರಬಹುದು, ದುರ್ಗಾ ದೇವಸ್ಥಾನದಲ್ಲಿ ದೀಪ ನಮಸ್ಕಾರ ಮಾಡಿ

ವೃಶ್ಚಿಕ - ಲಾಭ ಸಮೃದ್ಧಿ, ಹಣ ಸಮೃದ್ಧಿ, ವಸ್ತ್ರ-ದ್ರವ್ಯ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

ಧನುಸ್ಸು - ಸಂಗಾತಿಯಿಂದ-ಮಿತ್ರರರಿಂದ ಸಹಕಾರ, ವ್ಯಾಪಾರಿಗಳಿಗೆ ಸಹಕಾರ, ಗುರು ಪ್ರಾರ್ಥನೆ ಮಾಡಿ

ಮಕರ - ನಷ್ಟ ಸಂಭವ, ವ್ಯಾಪಾರಿಗಳು ಎಚ್ಚರವಾಗಿರಿ, ಆತಂಕ ಬೇಡ, ಸಂಗಾತಿಯಿಂದ ಸಹಕಾರ, ಶಿವನ ಆರಾಧನೆ ಮಾಡಿ

ಕುಂಭ - ಉತ್ತಮ ವಾತಾವರಣ, ಮಕ್ಕಳಿಂದ ಸಮಾಧಾನ, ಬುದ್ಧಿಶಕ್ತಿಯಿಂದ ಫಲ, ಕುಜ ಪ್ರಾರ್ಥನೆ ಮಾಡಿ

ಮೀನ - ಶುಭಫಲಗಳಿದ್ದಾವೆ, ಸ್ತ್ರೀಯರ ಸಹಕಾರ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಗುರು-ಕುಜರ ಪ್ರಾರ್ಥನೆ ಮಾಡಿ

click me!