ಅಶ್ಲೀಲ ಭಾಷೆ ಬಳಸಿ ಲೈವ್ ಕಾಮೆಂಟರಿ; ಯೂಟ್ಯೂಬರ್ ದಂಪತಿ ಅರೆಸ್ಟ್

Published : Jun 18, 2021, 10:29 PM ISTUpdated : Jun 18, 2021, 10:32 PM IST
ಅಶ್ಲೀಲ ಭಾಷೆ ಬಳಸಿ ಲೈವ್  ಕಾಮೆಂಟರಿ; ಯೂಟ್ಯೂಬರ್ ದಂಪತಿ ಅರೆಸ್ಟ್

ಸಾರಾಂಶ

* ಯೂಟ್ಯೂಬರ್ ದಂಪತಿ ಬಂಧನ * ಅಶ್ಲೀಲ ಭಾಷೆ ಬಳಸಿ ಅಪ್ ಲೋಡ್ ಮಾಡುತ್ತಿದ್ದರು * ಲೈವ್ ಗೇಮಿಂಗ್ ಫ್ಲಾಟ್ ಫಾರ್ಮ್ * ಬಳಕೆ ಮಾಡಿರುವ ಶಬ್ದಕ್ಕೆ ಆಘಾತ ವ್ಯಕ್ತಪಡಿಸಿದ ಕೋರ್ಟ್  

ಚೆನ್ನೈ (ಜೂ.  18) ಜನಪ್ರಿಯ ಯೂಟ್ಯೂಬರ್ ಮತ್ತು ಬ್ಯಾನ್ ಆಗಿರುವ ಪಬ್‌ ಜಿ ಗೇಮರ್ ಮದನ್ ಕುಮಾರ್ ಅವರನ್ನು ಧರ್ಮಪುರಿಯ ಮನೆಯೊಂದರಿಂದ ತಮಿಳುನಾಡು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಲೈವ್-ಸ್ಟ್ರೀಮಿಂಗ್ ನಲ್ಲಿ PUBG ಗೇಮಿಂಗ್ ವೀಡಿಯೊ ಬಿಟ್ಟಿದ್ದು ಅಲ್ಲದೇ ಮಹಿಳೆಯರನ್ನು ಉದ್ದೇಶಿಸಿ ಅಶ್ಲೀಲ ಕಾಮೆಂಟರಿ  ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ಕೆಲವು ದಿನಗಳ ಹಿಂದೆ ಈತನ ಪತ್ನಿ ಯೂಟ್ಯೂಬರ್ ಕೃತಿಕಾ  ಅವರನ್ನು ಸಹ ಸೇಲಂನಲ್ಲಿ ಬಂಧಿಸಲಾಗಿದೆ.  ದಂಪತಿಗಳು ನಡೆಸುತ್ತಿರುವ ಯೂಟ್ಯೂಬ್ ಚಾನೆಲ್‌ಗೆ ಸುಮಾರು ಎಂಟು ಲಕ್ಷ ಚಂದಾದಾರರು ಇದ್ದರು.

ದಂಪತಿ,  ಮದನ್, ಟಾಕ್ಸಿಕ್ ಮದನ್ 18+, ಪಬ್‌ಜಿ ಮದನ್ ಗರ್ಲ್ ಫ್ಯಾನ್, ರಿಚೀ ಗೇಮಿಂಗ್ ವೈಟಿ ಹೆಸರಿನ ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿದ್ದರು. ಅಲ್ಲಿ ಗೇಮಿಂಗ್ ವೀಡಿಯೊಗಳನ್ನು ಶೇರ್ ಮಾಡಿ ಅಶ್ಲೀಲ ಸಂಭಾಷಣೆ ಬಳಸಿಕೊಳ್ಳುತ್ತಿದ್ದರು.

ಯೂಟ್ಯೂಬರ್ ಗಳ ವಿರುದ್ಧ ಗುಡುಗಿದ ಡೆಡ್ಲಿ ಆದಿತ್ಯ

ಚೆನ್ನೈ ನಿವಾಸಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಬಂಧನವಾಗಿದೆ. ಅಪ್ರಾಪ್ತರು ಈ ವಿಡಿಯೋ ಸಂಭಾಷಣೆಯಿಂದ ದಾರಿತಪ್ಪುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. 

ಮದ್ರಾಸ್ ಹೈಕೋರ್ಟ್ ಆರೋಪಿಗಳ ಜಾಮೀನು ಅರ್ಜಿಯನ್ನು ಆಲಿಸಿದೆ. ವಿಡಿಯೋದಲ್ಲಿ ಬಳೆಕೆ ಮಾಡಿರುವ ಶಬ್ದಗಳನ್ನು ಕೇಳಿ ಆಘಾತ ವ್ಯಕ್ತಪಡಿಸಿದೆ. ಯಾವ ಕಾನೂನಿನ ಚೌಕಟ್ಟಿನಲ್ಲಿ ಈ ಪ್ರಕರಣ ನಿಲ್ಲುತ್ತದೆ ಎನ್ನುವುದು ಗೊತ್ತಾಗಿಲ್ಲ.

ಕೇಂದ್ರ ಸರ್ಕಾರ ಸಹ ಸೋಶಿಯಲ್ ಮೀಡಿಯಾ ಮೇಲೆ ನಿಯಂತ್ರಣಕ್ಕೆ ಕೆಲ ಸೂತ್ರಗಳನ್ನು  ಜಾರಿ ಮಾಡಿದೆ. ಅದದರ ನಡುವೆ ಇಂಥದ್ದೊಂದು ಪ್ರಕರಣ ದಾಖಲಾಗಿದ್ದು ಹಲವು ಕೋನಗಳನ್ನು ತೆರೆದಿರಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!