* ಎರಡು ಕುಟುಂಬಗಳ ನಡುವೆ ನಡೆದ ಆಸ್ತಿ ಜಗಳದಲ್ಲಿ ಯುವಕನ ಕೊಲೆ
* ತೀರ್ಥಪ್ರಸಾದ್(30) ಕೊಲೆಯಾದ ಯುವಕ.
* ತಿಪಟೂರು ತಾಲೂಕಿನ ನೆಲಗೊಂಡನಹಳ್ಳಿಯಲ್ಲಿ ಘಟನೆ.
* ಜಯಣ್ಣ ಮತ್ತು ಬಸವರಾಜು ಕುಟುಂಬ ನಡುವೆ ನಡೆದ ಆಸ್ತಿ ಜಗಳ
ತುಮಕೂರು(ಜೂ. 18) ಎರಡು ಕುಟುಂಬಗಳ ನಡುವೆ ನಡೆದ ಆಸ್ತಿ ಜಗಳಕ್ಕೆ ಯುವಕ ಬಲಿಯಾಗಿದ್ದಾನೆ. ತೀರ್ಥಪ್ರಸಾದ್(30) ಕೊಲೆಯಾದ ಯುವಕ. ತಿಪಟೂರು ತಾಲೂಕಿನ ನೆಲಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ.
ಜಯಣ್ಣ ಮತ್ತು ಬಸವರಾಜು ಕುಟುಂಬ ನಡುವೆ ನಡೆದ ಆಸ್ತಿ ಜಗಳವಿತ್ತು. ಬಸವರಾಜು ಕುಟುಂಬದಿಂದ ಜಯಣ್ಣ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಪರಿಣಾಮ ಜಯಣ್ಣರ ಮಗ ತೀರ್ಥಪ್ರಸಾದ್ ಹತ್ಯೆಯಾಗಿದ್ದಾರೆ. ಹೊನ್ನವಳ್ಳಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಂಜನಗೂಡು; ಪ್ರಿಯಕರನ ಜತೆ ಸೇರಿ ಮಗಳ ಮದುವೆಯನ್ನೇ ನಿಲ್ಲಿಸಿದಳು!
ಬಸವರಾಜರ ಮಕ್ಕಳಾದ ಸುರೇಶ್, ಚಂದ್ರಶೇಖರ ಹಾಗೂ ತಮ್ಮ ಲೊಕೇಶ್ ಎಂಬುವರನ್ನು ಅರೆಸ್ಟ್ ಮಾಡಲಾಗಿದೆ. 7 ಗುಂಟೆ ಜಮೀನಿಗಾಗಿ ನಡೆದ ಜಗಳ ಯುವಕನ ಪ್ರಾಣವನ್ನೇ ಬಲಿಪಡೆದಿದೆ.