* ಅಪ್ರಾಪ್ತ ಬಾಲಕಿಯರಿಗೆ ಆಮಿಷ ನೀಡಿ ಮದುವೆಯಾಗಿದ್ದ ವಂಚನೆ ಪ್ರಕರಣ ಬೆಳಕಿಗೆ
* ಇಬ್ಬರನ್ನು ಮದುವೆಯಾಗಿದ್ದ ಇಬ್ಬರ ವಿರುದ್ಧ ಪೋಸ್ಕೋ ಪ್ರಕರಣ ದಾಖಲು
* ದಾವಣಗೆರೆ ನಗರದ ಹೊಸ ಕುಂದವಾಡದಲ್ಲಿ ಘಟನೆ
ದಾವಣಗೆರೆ, (ಜೂನ್.12): ಅನಾಥ ಹಾಗೂ ಅಪ್ರಾಪ್ತ ಬಾಲಕಿಯರನ್ನು ಪುಸಲಾಯಿಸಿ, ಮದುವೆಯಾಗಿದ್ದ ಯುವಕರಿಬ್ಬರ ವಿರುದ್ಧ ಪ್ರಕರಣ ದಾಖಲಲಾಗಿದೆ. ದಾವಣಗೆರೆ ನಗರದ ಹೊಸ ಕುಂದವಾಡದಲ್ಲಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗಿದ್ದ ಹೊಸಕುಂದವಾಡದ ಇಬ್ಬರು ಯುವಕರ ವಿರುದ್ಧ ಅಪಹರಣ, ಬಾಲ್ಯವಿವಾಹ ನಿಷೇಧ, ಪೋಕ್ಸೋ ಕಾಯ್ದೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವಕರು ನಾಪತ್ತೆಯಾಗಿದ್ದು ಪತ್ತೆ ಕಾರ್ಯ ನಡೆದಿದೆ.
ಶಿರಸಿ-ಸಿದ್ದಾಪುರ; ಪ್ರಿಯಕರನ ನಿರ್ಲಕ್ಷ್ಯ, ಯುವತಿ ಆತ್ಮಹತ್ಯೆ
ಬಾಲಕಿಯರ ತಂದೆ ಎರಡು ವರ್ಷಗಳ ಹಿಂದೆ, ತಾಯಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಈ ದಂಪತಿಗೆ 15,13, 8, 6 ವರ್ಷದ ನಾಲ್ವರು ಹೆಣ್ಣು ಮಕ್ಕಳು, ಐದು ವರ್ಷದ ಒಬ್ಬ ಮಗನಿದ್ದು ಈ ಐದು ಮಕ್ಕಳನ್ನು ಕಣ್ಣು ಕಾಣದ ಅಜ್ಜಿ ಸಾಕಿಕೊಂಡಿದ್ದರು.
9ನೇ ತರಗತಿ ಓದುತ್ತಿದ್ದ 15ವರ್ಷದ ಬಾಲಕಿಯನ್ನು ಸ್ಥಳೀಯ ಯುವಕನೋರ್ವ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಆಗಿದ್ದನು. ಮತ್ತೊಬ್ಬ ಸ್ಥಳೀಯ ಯುವಕ ಆಕೆಯ ತಂಗಿ 7ನೇ ತರಗತಿ ಓದುತ್ತಿದ್ದ 13 ವರ್ಷದ ಬಾಲಕಿಯನ್ನು 9 ದಿನಗಳ ಹಿಂದೆ ಮದುವೆಯಾಗಿದ್ದನು ಎನ್ನಲಾಗಿದೆ.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶುಕ್ರವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವೈ.ಆರ್. ಕಿರಣ್ ಮತ್ತು ಮಮತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ವರದಿ ನೀಡಿದ್ದರು.
ಈ ವರದಿ ಆಧರಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್, ಶನಿವಾರ ಭೇಟಿ ಎಲ್ಲ ಐದು ಮಕ್ಕಳನ್ನು ಸಖಿ ಒನ್ ಕೇಂದ್ರದಲ್ಲಿ ಆಶ್ರಯ ನೀಡಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.