ಸಿಮ್‌ ಕಾರ್ಡ್‌ ಅಪ್ಡೇಟ್‌ ನೆಪ, ಲಕ್ಷಾಂತರ ರು. ವಂಚನೆ: ಕಂಗಾಲಾದ ಮಹಿಳೆ..!

By Kannadaprabha News  |  First Published Jun 12, 2021, 10:46 AM IST

* ಧಾರವಾಡದ ಪದ್ಮಜಾ ಹೆಬ್ಬಾರ ಮೋಸ ಹೋದ ಮಹಿಳೆ
* ಬ್ಯಾಂಕ್‌ ಖಾತೆಯಿಂದ 5,79, 439 ಹಣ ವರ್ಗಾಯಿಸಿಕೊಂಡ ಖದೀಮ
* ಈ ಸಂಬಂಧ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲು


ಹುಬ್ಬಳ್ಳಿ(ಜೂ.12): ಸಿಮ್‌ ಕಾರ್ಡ್‌ನ ದಾಖಲೆ ಅಪ್ಡೇಟ್‌ ಮಾಡಬೇಕು ಎಂದು ಕರೆ ಮಾಡಿದ ವ್ಯಕ್ತಿ, ಧಾರವಾಡದ ಪದ್ಮಜಾ ಹೆಬ್ಬಾರ ಅವರ ಬ್ಯಾಂಕ್‌ ಖಾತೆಯಿಂದ 5.79 ಲಕ್ಷ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ.

ಪದ್ಮಜಾ ಅವರ ಪತಿ ಶ್ರೀನಿವಾಸ ಅವರ ಮೊಬೈಲ್‌ಗೆ ಕರೆ ಮಾಡಿರುವ ವಂಚಕ, ಸಿಮ್‌ಗೆ ಸಂಬಂಧಿಸಿದ ದಾಖಲೆಯನ್ನು ಕೂಡಲೇ ಅಪ್ಡೇಟ್‌ ಮಾಡಬೇಕು. ಇಲ್ಲದಿದ್ದರೆ, ಅದು ಬ್ಲಾಕ್‌ ಆಗುತ್ತದೆ ಎಂದು ತಿಳಿಸಿದ್ದಾನೆ.

Tap to resize

Latest Videos

undefined

ಡ್ರೆಸ್‌ ಹಿಂದಿರುಗಿಸಲು ಹೋಗಿ  2 ಲಕ್ಷ ರೂ. ಕಳಕೊಂಡ ಮಹಿಳೆ

ಮೊಬೈಲ್‌ಗೆ ಲಿಂಕ್‌ ಕಳುಹಿಸಿ ಮೊಬೈಲ್‌ ನಂಬರ್‌ ನೀಡಿದ್ದ. ಆ ನಂಬರ್‌ಗೆ ಪದ್ಮಜಾ ಕರೆ ಮಾಡಿದಾಗ, ಕ್ವಿಕ್‌ ಶೇರ್‌ ಟೀಮ್‌ ವೀವರ್‌ ಆ್ಯಪ್‌ ಡೌನ್ಲೋಡ್‌ ಮಾಡಲು ತಿಳಿಸಿದ್ದ. ಶ್ರೀನಿವಾಸ ಅವರ ಮೊಬೈಲ್‌ನಲ್ಲಿ ಆ್ಯಪ್‌ ಡೌನ್ಲೋಡ್‌ ಆಗದ ಕಾರಣ, ಪದ್ಮಜಾ ತನ್ನ ಮೊಬೈಲನಲ್ಲಿ ಆ್ಯಪ್‌ ಡೌನ್ಲೋಡ್‌ ಮಾಡಿ, ಅದಕ್ಕೆ ಬಂದ ಒಟಿಪಿ ನಿಗೆ ನೀಡಿದ್ದಾರೆ. ಆ್ಯಪ್‌ ಮೂಲಕವೇ ವಂಚಕ ಅವರ ಎಸ್‌ಬಿಐ ಖಾತೆಯಿಂದ 5,79, 439 ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!