'ಕರೆದಾಗ ಬಂದು ಮಲಗಬೇಕು.. ಇಲ್ಲಾ ಖಾಸಗಿ ಪೋಟೋ ಹರಿಬಿಡ್ತೇನೆ'

Published : Feb 21, 2021, 01:48 PM ISTUpdated : Feb 21, 2021, 01:53 PM IST
'ಕರೆದಾಗ ಬಂದು ಮಲಗಬೇಕು.. ಇಲ್ಲಾ ಖಾಸಗಿ ಪೋಟೋ ಹರಿಬಿಡ್ತೇನೆ'

ಸಾರಾಂಶ

ಹಣ ಕೊಡದಿದ್ದರೆ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತೆನೆ/ ಯುವತಿಗೆ ಬೆದರಿಕೆ ಹಾಕುತ್ತಿದ್ದ/ ಕರೆದಾಗ ಬಂದು ಲೈಂಗಿಕವಾಗಿ ಸಹಕರಿಸಬೇಕು/ ವಾಟ್ಸಪ್ ಗ್ರೂಪ್ ಮೂಲಕ ಆದ ಪರಿಚಯ

ಪುದುಚೇರಿ( ( ಫೆ.  21) ತನ್ನ ಜತೆಗಿನ ಹಳೆ ಸಂಬಂಧ ಮುಂದುವರಿಸದೇ ಇದ್ದರೆ ನಿನ್ನ ಖಾಸಗಿ ಪೋಟೋಗಳನ್ನು ಹರಿಯಬಿಡುತ್ತೇನೆ ಎಂದು 24  ವರ್ಷದ ಯುವಕನೊಬ್ಬ ಬೆದರಿಕೆ ಹಾಕಿದ್ದಾನೆ. ಜತೆಗೆ ಹಣ ನೀಡಬೇಕು ಎಂದು ತಾಕೀತು ಮಾಡಿದ್ದಾನೆ.

ತಮಿಳುನಾಡು ನಿವಾಸಿ ಯುವಕ  ಬೆದರಿಕೆ ಹಾಕಿದ್ದದಾನೆ.  ಕರೆದಾಗ ಸೆಕ್ಸ್ ಗೆ ಸಹಕರಿಸಬೇಕು ಜತೆಗೆ 50,000 ರೂ. ನೀಡಬೇಕು ಎಂದು ಕಾರ್ತಿ ಎಂಬ ಯುವಕ ಬ್ಲಾಕ್ ಮೇಲ್ ಶುರುಮಾಡಿದ್ದಾನೆ.

ಕಾರ್ತಿ ನಿರುದ್ಯೋಗಿದ್ದ.  ಈತನ ಗೆಳೆಯರು ರಚಿಸಿದ ವಾಟ್ಸಾಪ್ ಗ್ರೂಪ್ ಗೆ  ಆರೋಪಿ ಮತ್ತು 20 ವರ್ಷದ ಯುವತಿಯನ್ನು ಸೇರಿಸಲಾಯಿತು. ಆಖರೆ ತಿರುಭುವನೈನ ಖಾಸಗಿ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಳು.

ಆನ್ ಲೈನ್ ನಲ್ಲೇ ಆಟದ ಹೆಸರಿನಲ್ಲಿ ಸಹಪಾಠಿ ಬಟ್ಟೆ ಬಿಚ್ಚಿಸಿದ ಕಿರಾತಕ

ಗುಂಪಿನಲ್ಲಿ ಪರಿಚಯವಾದ ಮೇಲೆ ಪರಸ್ಪರ ಇಬ್ಬರ ನಡುವೆ ಮಾತುಕತೆ ನಡೆದು ಮತ್ತಷ್ಟು ಹತ್ತಿರವಾದರು. ಇಬ್ಬರು ತಮಿಳುನಾಡು ಮತ್ತು ಪಾಂಡಿಚೇರಿಯನ್ನು ಸಾಕಷ್ಟು  ತಿರುಗಾಡಿದರು. ಪೋಟೋಗಳನ್ನು ತೆಗೆದುಕೊಂಡರು.

ಕೆಲ ದಿನಗಳ ನಂತರ ಯುವತಿ ಕಾರ್ತಿಯಿಂದ ದೂರ ಸರಿಯಲು ತೀರ್ಮಾನ ಮಾಡಿದ್ದಾಳೆ. ಮಾತುಕತೆ ಬಂದ್ ಮಾಡಿದ್ದಾಳೆ. ಇದೇ ಕಾರಣಕ್ಕೆ ಸಿಟ್ಟಿಗೆದ್ದ ಯುವಕ  ನಿನ್ನ ಮತ್ತು ನನ್ನ ಪೋಟೋವನ್ನು ಸೋಶಿಯಲ್ ಮೀಡಿಯಾಕ್ಕೆ  ಹಾಕುತ್ತೇನೆ. ಹಾಗೆ ಆಗಬಾರದು ಎಂದರೆ ಹಣ ಕೊಡಿ ಎಂದು ಗಂಟು ಬಿದ್ದಿದ್ದಾನೆ.   ಈಗಾಗಲೇ ಹದಿನೈದು ಸಾವಿರ ಕೊಟ್ಟಿದ್ದ ಯುವತಿ ಅಂತಿಮವಾಗಿ ಪೊಲೀಸರ ಮೊರತೆ ಹೋಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?