
ಹಾಸನ (ಫೆ.21): ಸಿನಿಮಾ ಧಾರಾವಾಹಿಯಲ್ಲಿ ಸಭ್ಯರಂತೆ ಇರುವ ನಟ ನಿನಾಸಂ ಅಶ್ವತ್ಥ್ ವಿರುದ್ಧ ಗಂಭೀರ ಆರೋಪ ಎದುರಾಗಿದೆ.
ನಿನಾಸಂ ಅಶ್ವತ್ಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬನ್ನೂರು ಠಾಣೆಯಲ್ಲಿ ಅಶ್ವತ್ಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದನೆ, ಮಾನನಷ್ಟ, ಕೊಲೆ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದೆ.
ಅರಸೀಕೆರೆ ತಾಲೂಕಿನ ಮೇಲ್ಲಾಪುರದ ಲೋಕೇಶ್ ಎಂಬುವವರು ಅಶ್ವತ್ಥ್ ವಿರುದ್ಧ ದೂರು ನೀಡಿದ್ದಾರೆ.
ನಾನ್‌ವೆಜ್ ಹೊಟೇಲ್‌ನಲ್ಲಿ ಲಿಕ್ಕರ್; ಬಾಡೂಟದ ಜೊತೆ ಭರ್ಜರಿ ಮದ್ಯ.! .
ಬನ್ನೂರು ತಾಲೂಕಿನ ಯಾಚೇನಹಳ್ಳಿಯಲ್ಲಿ ಫಾರ್ಮ್ ಹೌಸ್ ನಡೆಸುತ್ತಿರುವ ವೈ.ಕೆ.ಅಶ್ವತ್ಥ್ ಅಲಿಯಾಸ್ ನೀನಾಸಂ ಅಶ್ವತ್ಥ್. ಅಕ್ಷಯಕಲ್ಪ ಫಾರ್ಮ್ ಆ್ಯಂಡ್ ಫುಡ್ ಪ್ರವೈಟ್ ಲಿಮಿಟೆಡ್ ಕಂಪನಿಗೆ ನಾಟಿ ಹಾಲು ಸರಬರಾಜು ಮಾಡುತ್ತಿದ್ದರು.
ಪ್ರಾಂಶುಪಾಲೆ ಜತೆ ಅಶ್ಲೀಲವಾಗಿ ಮಾತನಾಡಿ ವೃದ್ಧನಿಂದ ಲೈಂಗಿಕ ಕಿರುಕುಳ ..
ಇಲ್ಲಿ ಏರಿಯಾ ಇನ್‌ಚಾರ್ಜ್ ಆಗಿರುವ ಲೋಕೇಶ್ ಕಳಪೆ ಗುಣಮಟ್ಟದ ಹಾಲು ಎಂದು ನಿರಾಕರಿಸಿದ್ದರು. ಇದರಿಂದ ಕುಪಿತರಾದ ಅಶ್ವತ್ಥ್ ಕಾಲ್ ಮಾಡಿ ಲೋಕೇಶ್‌ಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಲೋಕೇಶ್ ಅಧೀನ ಅಧಿಕಾರಿ ನಾಗೇಶ್ ಎಂಬವರಿಗೆ ಅಶ್ವತ್ಥ್ ಸ್ನೇಹಿತ ಡಿ.ಪಿ.ಅಶೋಕ್ ಕುಲಕರ್ಣಿ ಎಂಬವರು ನಿಂದಿಸಿದ್ದು, ಈ ನಿಟ್ಟಿನಲ್ಲಿ ಇದೀಗ ಲೋಕೇಶ್ ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ