ಗೆಳತಿಯೊಂದಿಗೆ ಸೆಕ್ಸ್.. ಕಾಂಡೋಮ್ ಸಿಕ್ಕಿಲ್ಲವೆಂದು ಗಮ್ ಸವರಿಕೊಂಡು ಪ್ರಾಣ ಬಿಟ್ಟ!

By Suvarna News  |  First Published Aug 25, 2021, 12:43 AM IST

* ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಸಿಗಲಿಲ್ಲ ಎಂದು ಅಂಟು ಸವರಿಕೊಂಡ
* ಮರುದಿನ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆ ಸೇರಿದ
* ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟ ಡ್ರಗ್ಸ್ ವ್ಯಸನಿ


ಅಹಮದಾಬಾದ್(ಆ. 25)  ಇದೊಂದು ವಿಚಿತ್ರ ಪ್ರಕರಣ. ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಹೋಗಿ ಈತ ಪ್ರಾಣ  ಕಲೆದುಕೊಂಡಿದ್ದಾನೆ.

 ಗುಜರಾತ್ ನ ಅಹಮದಾಬಾದ್ ನಲ್ಲಿ 25 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಸಿಗದ ಕಾರಣ ರಕ್ಷಣೆಗೆಂದು ತನ್ನ ಖಾಸಗಿ ಅಂಗಕ್ಕೆ ಅಂಟೊಂದನ್ನು ಸವರಿಕೊಂಡಿದ್ದಾನೆ.  ಈ ಅಂಟು ಆತನ ಪ್ರಾಣವನ್ನೇ ಬಲಿ ಪಡೆದಿದೆ.

Tap to resize

Latest Videos

undefined

ಸಲ್ಮಾನ್ ಮಿರ್ಜಾ (25), ಅಹಮದಾಬಾದ್‌ನ ಫತೇವಾಡಿ ಪ್ರದೇಶದ ನಿವಾಸಿ ಸಾವನ್ನಪ್ಪಿದ್ದಾನೆ.  ಡ್ರಗ್ಸ್ ಗೆ ದಾಸರಾಗಿದ್ದ ಪ್ರೇಮಿಗಳು ನಶೆಯಲ್ಲಿಯೇ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾರೆ.  ಹೊಟೆಲ್ ಒಂದಕ್ಕೆ ಆ. 22  ರಂದು ತೆರಳಿದ್ದರು. ಈ ವೇಳೆ ಜೋಡಿ ಜತೆ ಮತ್ತೊಬ್ಬ ಮಹಿಳೆಯರು ಇದ್ದರು.

ಸಂಗಾತಿಯೊಂದಿಗೆ ಸರಸದಲ್ಲಿದ್ದಾಗಲೇ ಲಂಬವಾಗಿ ಮುರಿದ ಶಿಶ್ನ

ಮಿರ್ಜಾ ಮತ್ತು ಆತನ ಗರ್ಲ್ ಫ್ರೆಂಡ್ ಹಾಗೂ ಹಳೆಯ ಗೆಳತಿ ಡ್ರಗ್ಸ್ ತೆಗೆದುಕೊಂಡಿದ್ದಾರೆ. ಗೆಳತಿ ಗರ್ಭಿಣಿ ಆಗುತ್ತಾಳೆ ಎಂಬ ಭಯದಿಂದ ಕೈಗೆ ಸಿಕ್ಕಿದ ಅಂಟೊಂದನ್ನು ತನ್ನ ಖಾಸಗಿ ಅಂಗಕ್ಕೆ ಸವರಿಕೊಂಡಿದ್ದಾನೆ.

ವೈಟ್ನರ್ ರೀತಿಯ ಪದಾರ್ಥವನ್ನು ಮಾದಕ ದೃವ್ಯದ ರೀತಿ ಬಳಸುತ್ತಿದ್ದು ಅದನ್ನೇ ಸವರಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ಮರುದಿನ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಿರ್ಜಾ ಪತ್ತೆಯಾಘಿದ್ದು ಪರಿಚಯದ ವ್ಯಕ್ತಿ ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮಿರ್ಜಾ ಸಂಬಂಧಿಕರೊಬ್ಬರು ನಂತರ ಆಕಸ್ಮಿಕ ಸಾವು  ಎಂಬ ದೂರು ದಾಖಲಿಸಿದ್ದಾರೆ. ಹೊಟ್ಟೆ  ಭಾಗವನ್ನು ಲ್ಯಾಬ್ ಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 

click me!