* ನಾಲ್ಕು ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ
* ಪೋರ್ನ್ ಚಿತ್ರಗಳಿಗೆ ಅಡಿಕ್ಟ್ ಆಗಿದ್ದ ಬಾಲಕ
* ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ
ಜೈಪುರ(ಆ. 24) ನಾಲ್ಕು ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಒಂದು ತಿಂಗಳ ಹಿಂದೆ ನಡೆದ ಪ್ರಕರಣ ಈಗ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ.
ಪೋರ್ನ್ ಚಿತ್ರಗಳಿಗೆ ಅಡಿಕ್ಟ್ ಆಗಿದ್ದ ಬಾಲಕ ಈ ಕೆಲಸ ಮಾಡಿದ್ದು ಆತನನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಒಂದು ತಿಂಗಳ ಹಿಂದೆ ಬಾಲಕಿ ಮತ್ತು ಆಕೆಯ ತಾಯಿ ತಮ್ಮ ಸಂಬಂಧಿಯ ಮನೆಗೆ ಬಂದಿದ್ದರು. ಈ ವೇಳೆ ಆರೋಪಿ ಬಾಲಕ ಮತ್ತು ಬಾಲಕಿಯ ತಾಯಿ ಮಾರ್ಕೆಟ್ ಗೆ ಹೋಗಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡ ಬಾಲಕ ಕ್ರೌರ್ಯ ಮೆರೆದಿದ್ದಾನೆ.
ಮಗುವಿಗೆ ಜನ್ಮ ಕೊಟ್ಟ ವಿದ್ಯಾರ್ಥಿನಿ!
ತಾಯಿ ಮನೆಗೆ ಬಂದಾಗ ಬಾಲಕಿ ಖಿನ್ನತೆಯಿಂದ ಕುಳಿತುಕೊಂಡಿರುವುದು ಗೊತ್ತಾಗಿದೆ. ನಂತರ ವಿಚಾರಿಸಿದಾಗ ಕೃತ್ಯದ ಬಗ್ಗೆ ಹೇಳಿದ್ದಾಳೆ. ಇದಾದ ಮೇಲೆ ತಾಯಿ ಪೊಲೀಸರ ಮೊರೆ ಹೋಗಿದ್ದಾಳೆ.
ಬಾಲಕನನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಬಾಲಕ ಪೋರ್ನ್ ಗೆ ಅಡಿಕ್ಟ್ ಆಗಿರುವುದು ಗೊತ್ತಾಗಿದೆ. ಹಿಂದೊಮ್ಮೆ ಮನೆಯಲ್ಲಿ ಅಶ್ಲೀಲ ಚಿತ್ರ ನೋಡುತ್ತಿದ್ದಾಗ ಸಿಕ್ಕಿಬಿದ್ದಿದ್ದ ಸಂಗತಿಯೂ ಬಹಿರಂಗವಾಗಿದೆ. ಬಾಲಕನ ತಂದೆ ಕೊರೋನಾ ಕಾರಣಕ್ಕೆ ಕೆಲ ತಿಂಗಳ ಹಿಂದೆ ಸಾವನ್ನಪ್ಪಿದ್ದರು.