* ಜೋಧ್ಪುರದಲ್ಲಿ ಶಾಕಿಂಗ್ ಘಟನೆ
* ಪುಟ್ಟ ಕಂದನಿಗೆ ಜನ್ಮ ಕೊಟ್ಟ ಹನ್ನೆರಡು ವರ್ಷದ ಬಾಲಕಿ
* ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಕರೆದೊಯ್ದಾಗ ಹೆತ್ತವರಿಗೆ ಶಾಕ್
* ಅತ್ಯಾಚಾರಗೈದ ಇಬ್ಬರು ಅಪ್ರಾಪ್ತರ ವಿಚಾರಣೆ
ಜೋಧ್ಪುರ(ಆ.24) ಜೋಧ್ಪುರದಲ್ಲಿ ಶಾಕಿಂಗ್ ಘಟನೆಯೊಂದು ವರದಿಯಾಗಿದೆ. ತನ್ನದೇ ಗ್ರಾಮದ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರಕ್ಕೀಡಾದ 12 ವರ್ಷದ ಬಾಲಕಿಯೊಬ್ಬಳು ಸೋಮವಾರ ಇಲ್ಲಿನ ಆಸ್ಪತ್ರೆಯಲ್ಲಿ ಪುಟ್ಟ ಕಂದನಿಗೆ ಜನ್ಮ ನೀಡಿದ್ದಾಳೆ.
ಹಾಗಲ್ಲ..ಹೀಗೆ... ಅಸ್ವಾಭಾವಿಕ ಸೆಕ್ಸ್‌ಗೆ ಉದ್ಯಮಿ ಪತಿ ಒತ್ತಾಯ!
ಭಾನುವಾರ ರಾತ್ರಿ ಬಾಲಕಿಯನ್ನು ಆಕೆಯ ಹೆತ್ತವರು ಆಸ್ಪತ್ರೆಗೆ ದಾಖಲಿಸಿದ್ದು, ತಡರಾತ್ರಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ರಾಜಸ್ಥಾನದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಧನ್ಪಟ್ ಗುರ್ಜರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಾಲಕಿ ಹಾಗೂ ಕಂದ ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ತಿಳಿಸಿದ್ದಾರೆ.
ಬಾಲಕಿಯ ಹೆತ್ತವರು ಆರಂಭದಲ್ಲಿ ತಮ್ಮ ಮಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಆಕೆಯನ್ನು ತಮ್ಮ ಗ್ರಾಮದ ಬಳಿಕ ಬಲೆಸರ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕಿಯನ್ನು ತಪಾಸಣೆ ಮಾಡಿದ ವೈದ್ಯರು ಆಕೆ ಗರ್ಭಿಣಿಯಾಗಿದ್ದಾಳೆಂದು ತಿಳಿಸಿದ್ದಾರೆ. ಇದನ್ನು ಕೇಳಿ ಕಂಗಾಲಾದ ಹೆತ್ತವರು ಅಬಾರ್ಷನ್ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಈ ಕೇಸ್ ಅತ್ಯಂತ ಸೂಕ್ಷ್ಮವಾಗಿದ್ದ ಕಾರಣ ವೈದ್ಯರು ಬಾಲಕಿಯನ್ನು ಜೋಧ್ಪುರ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅಲ್ಲದೇ ಪೊಳಿಸರಿಗೂ ಮಾಹಿತಿ ನೀಡಿದ್ದಾರೆ.
ಮತ್ತೊಂದು ನಿರ್ಭಯ ಪ್ರಕರಣದಿಂದ ಬೆಚ್ಚಿ ಬಿದ್ದ ದೆಹಲಿ;ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ರೇಪ್!
ಮಾಹಿತಿ ಪಡೆದು ಆಸ್ಪತ್ರೆಗೆ ಬಂದ ಪೊಲೀಸರ ಬಳಿ ಇಬ್ಬರು ಅಪ್ರಾಪ್ತ ಬಾಲಕರು ತನ್ನನ್ನು ಶಾಲೆಯಲ್ಲಿ ಅತ್ಯಾಚಾರ ನಡೆಸಿದ್ದಾರೆಂದು ಮಾಹಿತಿ ನೀಡಿದ್ದಾಳೆ. ಈವರೆಗೂ ಪ್ರಕರಣದ ಬಗ್ಗೆ ಪೊಲೀಸರು ಯಾವ ಮಾಹಿತಿ ಕೊಟ್ಟಿಲ್ಲವಾದರೂ, ವರದಿಗಳ ಅನ್ವಯ ಅಲಾಖೆ ಅಧಿಕಾರಿಗಳು ಇಬ್ಬರು ಅಪ್ರಾಪ್ತರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆನ್ನಲಾಗಿದೆ..