ರಾತ್ರಿ ಮಹಿಳೆಯಿಂದ ಬಂತು ಫೋನ್ ಕಾಲ್; ಕಾಡು ಸೇರಿ, ನನ್ನಿಂದ ಆಗಲ್ಲ ಎಂದು ವಿಷ ಕುಡಿದ ಯುವಕ

By Mahmad Rafik  |  First Published Jul 3, 2024, 7:01 PM IST

ಮೊಬೈಲ್‌ನಲ್ಲಿ ಎರಡು ಸೆಲ್ಫಿ ಮಾಡಿಕೊಂಡ ನಂತರ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಡಿಯೋದಲ್ಲಿ ತನ್ನ ಆತ್ಮಹತ್ಯೆಯ ಕಾರಣವನ್ನು ತಿಳಿಸಿದ್ದಾನೆ.


ಲಕ್ನೋ: ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತೆ ಎಂದು ಹೆದರಿದ ಯುವಕನೋರ್ವ (Youth) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ (Selfie Video) ಮಾಡಿಕೊಂಡಿರುವ ಯುವಕ ಮಹಿಳೆ ಹಾಗೂ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು (Allegation) ಮಾಡಿದ್ದಾನೆ. ಯುವಕನ ಆತ್ಮಹತ್ಯೆ ಸಂಬಂಧ ಮುರಾದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಸಲೀಂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ. ಸಲೀಂ ಮುರಾದನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನಪುರ ಗ್ರಾಮದ ನಿವಾಸಿ. ಮೊಬೈಲ್‌ನಲ್ಲಿ ಎರಡು ಸೆಲ್ಫಿ ಮಾಡಿಕೊಂಡ ನಂತರ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಡಿಯೋದಲ್ಲಿ ತನ್ನ ಆತ್ಮಹತ್ಯೆಯ ಕಾರಣವನ್ನು ತಿಳಿಸಿದ್ದಾನೆ. ನಾನು ಮೂರು ದಿನಗಳಿಂದ ಕಾಡಿನಲ್ಲಿದ್ದೇನೆ. ಇನ್ನು ನನ್ನಿಂದ ಓಡಲು ಸಾಧ್ಯವಿಲ್ಲ. ಹಾಗಾಗಿ ಸಾಯುವ ನಿರ್ಧಾರಕ್ಕೆ ಬಂದಿರೋದಾಗಿ ಸಲೀಂ ತಿಳಿಸಿದ್ದಾನೆ. 

Tap to resize

Latest Videos

ಹತ್ರಾಸ್ ಹೆಣಗಳ ರಾಶಿ ನೋಡಿ ಡ್ಯೂಟಿ ಪೊಲೀಸ್ ಕಾನ್‌ಸ್ಟೇಬಲ್ ಹೃದಯಾಘಾತದಿಂದ ಸಾವು

ಇನ್ನು ನನ್ನಿಂದ ಆಗ್ತಿಲ್ಲ

ಸೆಲ್ಫಿ ವಿಡಿಯೋದಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರಿ ಅಸ್ಲಾಂ ಲಿಯಾಖತ್ ಮತ್ತು ಮಹಿಳೆಯೊಬ್ಬಳು ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ರಾತ್ರಿ ನನಗೆ ಹುಡುಗಿ ಮತ್ತು ಆಕೆಯ ತಾಯಿ ಕರೆ ಮಾಡಿ ನನ್ನನ್ನು ಕೊಲ್ಲುವದಾಗಿ ಬೆದರಿಕೆ ಹಾಕಿದರು. ಭಯದಿಂದ ಊರು ತೊರೆದು ಕಾಡು ಸೇರಿಕೊಂಡಿದ್ದೇನೆ. ಓಡುತ್ತಾ ಸಾಕಷ್ಟು ದೂರ ಬಂದಿದ್ದೇನೆ. ಇನ್ನು ನನ್ನಿಂದ ಆಗುತ್ತಿಲ್ಲ. ನನಗೆ ನ್ಯಾಯ ಬೇಕು. ನಾನು ವಿಷ ಸೇವಿಸಿದ್ದೇನೆ ಎಂದು ಹೇಳಿದ್ದಾನೆ.

ವರ್ಷದ ಹಿಂದೆ ಪರಿಚಯವಾದವಳೇ ಶಬಾನಾ!

ಒಂದು ವರ್ಷದ ಹಿಂದೆ ಸಲೀಂಗೆ ಶಬಾನಾ ಎಂಬ ಮಹಿಳೆಯ ಪರಿಚಯವಾಗಿತ್ತು. ಶಬಾನಾಗೆ ಮದುವೆಯಾಗಿದ್ದು, ಗಂಡ ಮಲಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಳು. ಈ ಆರೋಪದಡಿ ಶಬಾನಾ ಗಂಡ ಜೈಲುಪಾಲಾಗಿದ್ದನು. ಈ ಸಮಯದಲ್ಲಿ ಶಬಾನಾಗೆ ಸಲೀಂ ಹತ್ತಿರವಾಗಿದ್ದನು. ತನ್ನ ಜೊತೆ ಸಂಬಂಧ ಬೆಳೆಸುವಂತೆ ಸಲೀಂ ಮೇಲೆ ಶಬಾನಾ ಒತ್ತಡ ಹಾಕಿದ್ದಳಂತೆ. ಸಲೀಂ ನಿರಾಕರಿಸಿದಾಗ ಮಗಳ ಜೊತೆ ಸೇರಿ ಸುಳ್ಳು ಪ್ರಕರಣದಲ್ಲಿ ಜೈಲು ಸೇರಿಸೋದಾಗಿ ಶಬಾನಾ ಬೆದರಿಕೆ ಹಾಕಿದ್ದಳು. ಈ ಹಿನ್ನೆಲೆ ಜೈಲು ಸೇರುವ ಭಯದಿಂದ ಸಲೀಂ ಊರು ತೊರೆದು ಕಾಡು ಸೇರಿದ್ದನು.

ತಡರಾತ್ರಿ ಆಕೆಯ ಕೋಣೆಗೆ ನುಗ್ಗಿದ 15ರ ಪೋರ; ರೊಮ್ಯಾನ್ಸ್ ಬಳಿಕ ಜೀವವೇ ಹೋಯ್ತು!

click me!