ಹಬ್ಬದಂದು ಮುಸ್ಲಿಂ ಯುವಕರ ಪುಂಡಾಟ, ಮಾರಕಾಸ್ತ್ರ ಹಿಡಿದು ಹಿಂದೂ ವಿರೋಧಿ ಭಾಷಣದ ತುಣುಕಿಗೆ ಡಾನ್ಸ್!

Published : Oct 11, 2022, 06:45 PM IST
ಹಬ್ಬದಂದು ಮುಸ್ಲಿಂ ಯುವಕರ ಪುಂಡಾಟ, ಮಾರಕಾಸ್ತ್ರ ಹಿಡಿದು ಹಿಂದೂ ವಿರೋಧಿ ಭಾಷಣದ ತುಣುಕಿಗೆ ಡಾನ್ಸ್!

ಸಾರಾಂಶ

ಶಾಂತಿ-ಸೌಹಾರ್ದತೆ,  ಭಾವೈಕ್ಯತೆಗೆ ಹೆಸರಾಗಬೇಕಿದ್ದ ಈದ್ ಮಿಲಾದ್ ಹಬ್ಬದಂದು ಹಿಂದೂ ವಿರೋಧಿ ಭಾಷಣಕ್ಕೆ ಡಿಜೆ ಮ್ಯೂಸಿಕ್​ ಹಾಕಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ನಡುರಸ್ತೆಯಲ್ಲಿ  ಮುಸ್ಲಿಂ ಯುವಕರ ಗುಂಪು ಡ್ಯಾನ್ಸ್​ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಅ.11): ಶಾಂತಿ-ಸೌಹಾರ್ದತೆ,  ಭಾವೈಕ್ಯತೆಗೆ ಹೆಸರಾಗಬೇಕಿದ್ದ ಈದ್ ಮಿಲಾದ್ ಹಬ್ಬದಂದು ಹಿಂದೂ ವಿರೋಧಿ ಭಾಷಣಕ್ಕೆ ಡಿಜೆ ಮ್ಯೂಸಿಕ್​ ಹಾಕಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ನಡುರಸ್ತೆಯಲ್ಲಿ  ಮುಸ್ಲಿಂ ಯುವಕರ ಗುಂಪು ಡ್ಯಾನ್ಸ್​ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಈ ವಿಡಿಯೋದಲ್ಲಿ ಲಾಂಗ್, ಮಚ್ಚುಗಳನ್ನ ಹಿಡಿದು ಮನಸ್ಸಿಗೆ ಬಂದಂತೆ ಡಾನ್ಸ್. ಮಾಡುತ್ತಿರುವ ಈ ಗುಂಪು, ರಸ್ತೆಗೆ ಅಡ್ಡವಾಗಿ ನಿಂತು, ಹಿಂದೂ ವಿರೋಧಿ ಭಾಷಣಕ್ಕೆ ಡಿಜೆ ಸೌಂಡ್ ಮಿಕ್ಸ್ ಮಾಡಿ ಪುಂಡಾಟ ಮೆರೆದಿದ್ದಾರೆ. ಇಂಥದೊಂದು ಘಟನೆ ನಡೆದಿರೋದು ನಗರದ ಸಿದ್ದಾಪುರದ ಸೋಮೇಶ್ವರ ನಗರದಲ್ಲಿ. ಈದ್ ಮಿಲಾದ್ ಹಬ್ಬದ ದಿನ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಹಬ್ಬದ ಸಂಭ್ರಮದಲ್ಲಿ ನಗರದ ವಿವಿಧ ಭಾಗಗಳಲ್ಲಿ ಅಂದು ಸಾವಿರಾರು ಸಂಖ್ಯೆಯಲ್ಲಿ ಒಂದು‌ ಕಡೆ ಸೇರಿದ್ದ ಮುಸಲ್ಮಾನರು ಹಬ್ಬ ಆಚರಣೆ ಮಾಡ್ತಿದ್ರು‌. ಆದ್ರೆ ಸಿದ್ದಾಪುರದ ಸೋಮೇಶ್ವರ ನಗರದಲ್ಲಿ ಮಾತ್ರ, ಮುಸ್ಲಿಂ ಯುವಕರು, ಕೈಯಲ್ಲಿ ಲಾಂಗ್, ಮಚ್ಚು , ಡ್ರ್ಯಾಗರ್ ‌ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ಹಿಡಿದು ಡಾನ್ಸ್ ಮಾಡ್ತಿದ್ರು.  ಅಲ್ಲದೆ ಮುಸ್ಲಿಂ ನಾಯಕರು ಮಾಡಿರುವ ಹಿಂದೂ ವಿರೋಧಿ ಭಾಷಣಕ್ಕೆ ಜೊರು ಡಿಜೆ ಸೌಂಡ್ ಹಾಕಿ ಮಾರಕಾಸ್ತ್ರಗಳನ್ನು ಹಿಡಿದು ಪ್ರಚೋದಕಾರಿಯಾಗಿ  ನಡುರಸ್ತೆಯಲ್ಲೇ ಡಾನ್ಸ್ ಮಾಡಿ ಪುಂಡಾಟ ಮೆರೆದಿದ್ದಾರೆ. 

14 ಅಪ್ರಾಪ್ತರು ಸೇರಿದಂತೆ 19 ಮಂದಿಯ ಬಂಧನ: ಈ ಘಟನೆ ನಡೆದ ನಂತರ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗ ತೊಡಗಿತ್ತು. ಈ ವಿಡಿಯೋಗಳನ್ನು ನೋಡಿದ ಸಿದ್ದಾಪುರ ಪೊಲೀಸರು, ತಕ್ಷಣ ಅಲರ್ಟ್ ಆಗಿ ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತರಾಗಿ ಎಫ್ ಐಆರ್ ದಾಖಲಿಸಿಕೊಂಡು, ಆರೋಪಿಗಳ ಪತ್ತೆ ಮುಂದಾದ್ರು. ಈ ಪ್ರಚೋದನಾಕಾರಿ ವಿಡಿಯೋಗಳ ಆಧಾರದ ಮೇಲೆ 14 ಜನ ಅಪ್ರಾಪ್ತರು ಸೇರಿಸಂತೆ ಒಟ್ಟು 19 ಮಂದಿಯನ್ನ ಬಂಧಿಸಿದ್ದಾರೆ.

ಬೆಂಗಳೂರು: ತಿಂಗಳಾದ್ರೂ ರೇವ್‌ ಪಾರ್ಟಿ ರಹಸ್ಯ ನಿಗೂಢ..!

ಈ ವಿಚಾರ ತಿಳಿಯುತ್ತಿದ್ದಂತೆಯೇ ಬಂಧಿತರ ಪೋಷಕರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ, ನಮ್ಮ ಮಕ್ಕಳು, ಅಮಾಯಕರು, ಪೊಲೀಸರು ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಮದಿರೆಯ ನಶೆಯಲ್ಲಿ ಊರಿಗೆ ಊರೇ ಸುಸ್ತು: ಬೋರ್‌ವೆಲ್ ಜಗ್ಗಿದ್ರೂ ಶರಾಬು ಬಂತು

ಪೊಲೀಸ್ ಠಾಣೆ ಮುಂದೆ ಬಂದು ನಮ್ಮ ಮಕ್ಕಳು ಅಮಾಯಕರು, ಅಪ್ರಾಪ್ತರು ಅನ್ನೋ ಪೋಷಕರು, ಮಾರಕಾಸ್ತ್ರಗಳನ್ನು ಹಿಡಿದು ನಡುರಸ್ತೆಯಲ್ಲಿ ಡಾನ್ಸ್ ಮಾಡುವಾಗ ಏನ್ ಮಾಡ್ತಿದ್ರು ಅನ್ನೋದು ಪೋಲಿಸರ ಪ್ರಶ್ನೆ. ಇನ್ನು ಈ ಪ್ರಕರಣದಲ್ಲಿ‌ ಮತ್ತಷ್ಟು ಜನರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!