Crime News: ಮದ್ಯದಲ್ಲಿ ಮತ್ತು ಬರುವ ಔಷಧಿ ಹಾಕಿ ಮಹಿಳೆಯ ಅತ್ಯಾಚಾರ: ಮೂವರ ಬಂಧನ

By Sharath Sharma Kalagaru  |  First Published Oct 11, 2022, 2:22 PM IST

Crime News Today: ಮದ್ಯದಲ್ಲಿ ಮತ್ತು ಬರುವ ಔಷಧಿ ನೀಡಿ ಮಹಿಳೆಯನ್ನು ಸ್ನೇಹಿತ ಮತ್ತು ಆತನ ಗೆಳೆಯರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ದೇಶದ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 


ನವದೆಹಲಿ: ಮೂವತ್ತೆರಡು ವರ್ಷದ ಮಹಿಳೆಗೆ ಮತ್ತು ಬರುವ ಔಷಧ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ದೇಶದ ರಾಜಧಾನಿಯಲ್ಲಿ ನಡೆದಿದೆ. ದೆಹಲಿಯ ಆದರ್ಶ ನಗರದ ಹೋಟೆಲ್‌ ಕೋಣೆಯಲ್ಲಿ ಮೂವರು ಆರೋಪಿಗಳಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಜಯ್‌, ತಾರಾ ಚಂದ್‌, ನರೇಶ್‌ ಮೂವರು ಆರೋಪಿಗಳು ರಾಜಸ್ಥಾನದ ಅಲ್ವಾರ್‌ ಮೂಲದವರು. ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. 

ದೆಹಲಿ ಉಪ ಪೊಲೀಸ್‌ ಆಯುಕ್ತೆ ಉಶಾ ರಂಗ್ನಾನಿ ಪ್ರಕರಣದ ಮಾಹಿತಿ ನೀಡಿದ್ದು, ಭಾನುವಾರ ಆದರ್ಶ ನಗರ ಪೊಲೀಸ್‌ ಠಾಣೆಗೆ ಸಂತ್ರಸ್ಥೆಯ ಕರೆ ಬಂದಿದ್ದಾಗಿ ತಿಳಿಸಿದ್ದಾರೆ. ಸಂತ್ರಸ್ಥೆ ಆಕೆಯ ಹೇಳಿಕೆಯಲ್ಲಿ ಹೇಳಿರುವ ಪ್ರಕಾರ ಅಜಯ್‌ ಆಕೆಯ ಪರಿಚಯಸ್ಥನಾಗಿದ್ದು ಆತನ ಜೊತೆ ಭಾನುವಾರ ಹೋಟೆಲ್‌ ರೂಮೊಂದರಲ್ಲಿ ತಂಗಿದ್ದರು. ಈ ವೇಳೆ ಅಜಯ್‌ ಸ್ನೇಹಿತರೂ ಸಹ ಹೋಟೆಲ್‌ನಲ್ಲೇ ಇದ್ದರು. 

ಪಾರ್ಟಿಯ ನೆಪದಲ್ಲಿ ಸಂತ್ರಸ್ಥೆಗೆ ಅಜಯ್‌ ಮತ್ತವನ ಸ್ನೇಹಿತರು ಡ್ರಿಂಕ್ಸ್‌ ನೀಡಿದ್ದಾರೆ. ಆದರೆ ಅದರಲ್ಲಿ ಮತ್ತು ಬರುವ ಔಷಧಿ ಹಾಕಿದ್ದನ್ನು ತಿಳಿಯದ ಸಂತ್ರಸ್ಥೆ ಕುಡಿದಿದ್ದಾಳೆ. ಕುಡಿದು ಕೆಲ ನಿಮಿಷಗಳೊಳಗೆ ಆಕೆಗೆ ಪ್ರಜ್ಞೆ ತಪ್ಪಿದೆ. ಅದಾದ ನಂತರ ಆಕೆಯನ್ನು ಮೂವರೂ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ಥೆ ಘಟನೆಯನ್ನು ವಿವರಿಸಿದ್ದಾರೆ. ಮಹಿಳೆಯ ದೂರನ್ನು ಆಧರಿಸಿ ಭಾರತೀಯ ದಂಡ ಸಂಹಿತೆ ಕಾಯ್ದೆ 376D (Gang Rape), 377 (Unnatural Offences) 328 (ಮತ್ತು ಬರುವ ಅಥವಾ ವಿಷವನ್ನು ಹಾಕುವುದು) ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನಾ ಸ್ಥಳದಿಂದ ಎಲ್ಲಾ ಸಾಕ್ಷಿಗಳನ್ನೂ ವಶಕ್ಕೆ ಪಡೆದು, ಸಂತ್ರಸ್ಥೆಯ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದ್ದಾರೆ. ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. 

Tap to resize

Latest Videos

ಇದನ್ನೂ ಓದಿ: ಮದುವೆಯಾಗೊ ಹುಡುಗಿಗಿತ್ತು ಅಕ್ರಮ ಸಂಬಂಧ: ವೈದ್ಯನ ಕೊಲೆ ಪ್ರಕರಣಕ್ಕೆ ರೋಚಕ ತಿರುವು

ಬ್ಯೂಟಿ ಪಾರ್ಲರ್‌ ಮ್ಯಾನೇಜರ್‌ಗೆ ಗನ್‌ ತೋರಿಸಿ ಅತ್ಯಾಚಾರ:
ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಯುವಕನೊಬ್ಬ ಬ್ಯೂಟಿ ಪಾರ್ಲರ್‌ ಮ್ಯಾನೇಜರ್‌ಗೆ ಗನ್‌ ತೋರಿಸಿ ಬೆದರಿಸಿ ಅತ್ಯಾಚಾರ ಮಾಡಿದ್ದಾನೆ. ಜತೆಗೆ ದುಶ್ಕೃತ್ಯವನ್ನು ವಿಡಿಯೋ ಮಾಡಿ ನಂತರ ಆಕೆಯನ್ನು ಬ್ಲಾಕ್‌ಮೇಲ್‌ ಮಾಡಿದ್ದಾನೆ. ಆರೋಪಿಯನ್ನು ಅರ್ಹಾನ್‌ ಅಲಿಯಾಸ್‌ ಸಾಜಿದ್‌ ಎಂದು ಗುರುತಿಸಲಾಗಿದೆ. ಮೀರತ್‌ನ ಲಿಸಾಡಿ ಗೇಟ್‌ನ ನಿವಾಸಿ. 

ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬ್ಯೂಟಿ ಪಾರ್ಲರ್‌ನ ಆಚೆ ಯಾವೆಲ್ಲಾ ಸೇವೆಗಳನ್ನು ನೀಡಲಾಗುತ್ತದೆ ಎಂಬುದರ ಪಟ್ಟಿಯನ್ನು ಹಾಕಲಾಗಿತ್ತು. ಜತೆಗೆ ಮ್ಯಾನೇಜರ್‌ ಮೊಬೈಲ್‌ ನಂಬರ್‌ ಕೂಡ ಅದರಲ್ಲಿ ಹಾಕಲಾಗಿತ್ತು. ಆರೋಪಿ ಸಾಜಿದ್‌ ಹಲವಾರು ಬಾರಿ ಈ ನಂಬರ್‌ಗೆ ಕರೆ ಮಾಡಿದ್ದ. ಮತ್ತು ಪಾರ್ಲರ್‌ಗೆ ಕಸ್ಟಮರ್‌ಗಳನ್ನು ಕೂಡ ಕಳಿಸುತ್ತಿದ್ದ. 

ಇದನ್ನೂ ಓದಿ: ಅತ್ಯಾಚಾರ ಆರೋಪ, ನೇಪಾಳ ಕ್ರಿಕೆಟಿಗನಿಗೆ 7 ದಿನ ಪೊಲೀಸ್ ಕಸ್ಟಡಿ!

ಒಂದು ದಿನ ದಿಢೀರ್‌ ಎಂದು ಪಾರ್ಲರ್‌ಗೆ ಬಂದಿದ್ದ. ಪಾರ್ಲರ್‌ಗೆ ಬಂದವನೇ ಒಳಗಿನಿಂದ ಬಾಗಿಲು ಹಾಕಿ, ಮ್ಯಾನೇಜರ್‌ಗೆ ಗನ್‌ ತೋರಿಸಿ ಬೆದರಿಸಲಾರಂಭಿಸಿದ. ನಂತರ ಆಕೆಯನ್ನು ಅತ್ಯಾಚಾರ ಮಾಡಿ ಅದರ ವಿಡಿಯೋವನ್ನು ತೆಗೆದ. ಅದಾದ ನಂತರ ನಿರಂತರವಾಗಿ ಸೆಕ್ಸ್‌ಗೆ ಸಹಕರಿಸುವಂತೆ ಆಕೆಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ. ಈ ಎಲ್ಲಾ ವಿಚಾರಗಳನ್ನೂ ಆಕೆಯ ದೂರಿನಲ್ಲಿ ತಿಳಿಸಲಾಗಿದೆ. 

click me!