16 ವರ್ಷದ ಯುವಕನ ಗುದನಾಳಕ್ಕೆ ಸ್ನೇಹಿತ ಏರ್ ಕಂಪ್ರೆಸರ್ ಪೈಪ್ ತುರುಕಿದ್ದು ಯುವಕ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ
ಅಹಮದಾಬಾದ್ (ಜು. 16): ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವರದಿಯಾದ ಭೀಕರ ಘಟನೆಯಲ್ಲಿ, 16 ವರ್ಷದ ಯುವಕನ ಗುದನಾಳಕ್ಕೆ ಆತನ ಸ್ನೇಹಿತ ಏರ್ ಕಂಪ್ರೆಸರ್ ಪೈಪ್ ತುರುಕಿದ್ದು ಯುವಕ ಸಾವನ್ನಪ್ಪಿದ್ದಾನೆ. ತಾಲೂಕಿನ ಕಡಿಯಲ್ಲಿರುವ ಅಲೋಕ್ ಇಂಡಸ್ಟ್ರೀಸ್ ಆವರಣದಲ್ಲಿ ಗುರುವಾರ ಈ ಘಟನೆ ನಡೆದಿದೆ. ಮೋಜಿಗಾಗಿ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿದ್ದಾನೆ. ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವಕ ಛತ್ರಲ್-ಕಡಿ ಹೆದ್ದಾರಿಯಲ್ಲಿರುವ ಲೇಬರ್ ಕಂಪನಿಯ ನಿವಾಸಿ ಎಂದು ತಿಳಿದು ಬಂದಿದೆ.
ಏರ್ ಕಂಪ್ರೆಸರನ್ನು ಬಲವಂತವಾಗಿ ಗುದನಾಳಕ್ಕೆ ಹಾಕಿದ್ದರಿಂದ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಯುವಕನನ್ನು ಆಸ್ಪತ್ರೆ ಸಾಗಿಸಲಾಯಿತಾದರೂ ಕೊನೆಯುಸಿರೆಳೆದಿದ್ದಾನೆ. ಆರೋಪಿಯನ್ನು ಕುಲದೀಪ್ ವಿಜಯಭಾಯ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಆರೋಪಿ ವಿರುದ್ಧ ಐಪಿಸಿಯ ಸೆಕ್ಷನ್ 304 ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಗುದನಾಳದಲ್ಲಿ ಹಠಾತ್ ಗಾಳಿಯ ಸ್ಫೋಟದಿಂದಾಗಿ ಆಂತರಿಕ ಗಾಯಗಳಿಂದ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಯುವಕ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯವನಾಗಿದ್ದು, ಅಲೋಕ್ ಇಂಡಸ್ಟ್ರೀಸ್‌ನಲ್ಲಿ ಮರಗೆಲಸ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಧೂಳು ತೆಗೆದುಹಾಕಲು ಏರ್ ಸಕ್ಷನ್ ಪಂಪ್ ಬಳಕೆ: ಇನ್ನು ಈ ಬೆನ್ನಲ್ಲೇ ಗುತ್ತಿಗೆದಾರ ತ್ರಿಲೋಚನ್ ಗೌತಮ್ ಮಾತನಾಡಿದ್ದು "ಕಾರ್ಮಿಕರು ಊಟಕ್ಕೆ ಹೋಗುವ ಮೊದಲು ತಮ್ಮ ಬಟ್ಟೆಯಿಂದ ಮರಗೆಲಸದ ಧೂಳನ್ನು ತೆಗೆದುಹಾಕಲು ಏರ್ ಸಕ್ಷನ್ ಪಂಪ್ ಬಳಸುತ್ತಾರೆ" ಎಂದು ತಿಳಿಸಿದ್ದಾರೆ. "ಮೃತ ಯುವಕ ಮತ್ತು ಆರೋಪಿ ಕುಲದೀಪ್ ಒಬ್ಬರನ್ನೊಬ್ಬರು ಚುಡಾಯಿಸುವುದನ್ನು ನೋಡಿದ್ದೆ ಮತ್ತು ಅದನ್ನು ನಿಲ್ಲಿಸಿ ಊಟಕ್ಕೆ ಹೋಗುವಂತೆ ಕೇಳಿಕೊಂಡಿದ್ದೆ" ಎಂದು ಗೌತಮ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪುರುಷರು ಮನೆಯಲ್ಲಿ ಒಬ್ಬರೇ ಇದ್ದಾಗ ಹೀಗೆಲ್ಲಾ ಮಾಡುತ್ತಾರಂತೆ !
ಕೆಲ ಸಮಯದ ಬಳಿಕ ಕುಲದೀಪ್ ಗೌತಮ್ ಬಳಿ ಓಡಿ ಬಂದು ಹುಡುಗನಿಗೆ ಪ್ರಜ್ಞೆ ತಪ್ಪಿದೆ ಎಂದು ಹೇಳಿದ್ದಾನೆ. "ತಮ್ಮ ಗುದನಾಳಕ್ಕೆ ಕಂಪ್ರೆಸರ್ ಪೈಪನ್ನು ಸೇರಿಸುವ ಮೂಲಕ ಒಬ್ಬರನ್ನೊಬ್ಬರು ಚುಡಾಯಿಸುತ್ತಿದ್ದರು ಎಂದು ಕುಲದೀಪ್ ನನಗೆ ಹೇಳಿದರು, ಮೊದಲು ಯವಕ ಕುಲದೀಪ್‌ನ ಗುದನಾಳಕ್ಕೆ ಪೈಪ್ ಸೇರಿಸಲು ಪ್ರಯತ್ನಿಸಿದ್ದ, ನಂತರ ಕುಲದೀಪ್ ಯುವಕನ ಗುದನಾಳಕ್ಕೆ ಪೈಪ್ ಸೇರಿಸಿದ, ಬಳಿಕ ಯುವಕ ಪ್ರಜ್ಞೆ ತಪ್ಪಿದ್ದಾನೆ" ಎಂದು ಗುತ್ತಿಗೆದಾರ ತ್ರಿಲೋಚನ್ ಗೌತಮ್ ತಿಳಿಸಿದ್ದಾರೆ