ದಾವಣಗೆರೆ: ಸ್ನಾನ ಮಾಡಲು ಹೋಗಿ ತುಂಗಾಭದ್ರ ನದಿಯಲ್ಲಿ ಕೊಚ್ಚಿಹೋದ ಯುವಕ

By Suvarna News  |  First Published Jul 16, 2022, 6:02 PM IST

Youth drowns in Tungabhadra: ಸ್ನಾನ ಮಾಡಲು ಹೋಗಿ ತುಂಗಾಭದ್ರ ನದಿಯಲ್ಲಿ  ಯುವಕ ಕೊಚ್ಚಿ ಹೋಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 


ದಾವಣಗೆರೆ (ಜು. 16): ಸ್ನಾನ ಮಾಡಲು ಹೋಗಿ ತುಂಗಾಭದ್ರ ನದಿಯಲ್ಲಿ (Tungabhadra River) ಯುವಕ ಕೊಚ್ಚಿ ಹೋಗಿದ್ದಾನೆ.  ದಾವಣಗೆರೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಬಳಿ ತುಂಗಾಭದ್ರ ನದಿ ತುಂಬಿ ಹರಿಯುತ್ತಿದೆ.  ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ತಾಂಡದ ಪರಮೇಶ್ ನಾಯ್ಕ್(35) ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ.  ಪರಮೇಶ್ ನಾಯ್ಕ್ ಕುಟುಂಬ ಸಮೇತರಾಗಿ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಬಂದಿದ್ದರು.  ನದಿ ಪಾತ್ರಕ್ಕೆ ಯಾರು ಹೋಗಬಾರದು ಎಂದು ಸೂಚನೆ ನೀಡಿದರೂ ಯುವಕ ದುಸ್ಸಾಹಸಕ್ಕೆ ಕೈ ಹಾಕಿದ್ದ.  
 
ನದಿಯಲ್ಲಿ ಇಳಿದು ಸ್ನಾನ ಮಾಡುವಾಗ ನೀರಿನ ರಭಸಕ್ಕೆ  ಯುವಕ ಕೊಚ್ವಿಹೋಗಿದ್ದಾನೆ.  ಸ್ಥಳಕ್ಕೆ ಮಲೆಬೆನ್ನೂರು ಠಾಣೆ ಪೊಲೀಸರು, ಹರಿಹರ ತಾಹಶೀಲ್ದಾರ್ ಭೇಟಿ ನೀಡಿದ್ದಾರೆ.  ಮುಳುಗು ತಜ್ಞರ ತಂಡದಿಂದ ಪರಮೇಶ್ ನಾಯ್ಕ್‌ಗಾಗಿ ಹುಡುಕಾಟ ನಡೆಯುತ್ತಿದೆ. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗೆ ನಿಂತಿದ್ದ ಕುರಿಗಳ ಮೇಲೆ ಹರಿದ ರೈಲು: ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗೆ ನಿಂತಿದ್ದ ಕುರಿಗಳ ಮೇಲೆ ರೈಲು ಹರಿದಿದೆ. ಮಳೆಯಿಂದಾಗಿ ಬ್ರಿಡ್ಜ್ ಕೆಳಗೆ ಆಸರೆಗೆ ನಿಂತಿದ್ದ 40ಕ್ಕು ಅಧಿಕ ಕುರಿಗಳ ಸಾವನ್ನಪ್ಪಿವೆ.  ವಿಜಯಪುರ ಜಿಲ್ಲೆ ಕೂಡಗಿ ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ.  ಮಳೆಯಿಂದಾಗಿ ಆಸರೆಗೆಂದದು ಬ್ರಿಡ್ಜ್ ಕೆಳಗಿನ ರೈಲ್ವೇ ಟ್ರಾಕ್ ಮೇಲೆ  ಕುರಿಗಳು ನಿಂತಿದ್ದವು.   

Tap to resize

Latest Videos

ಇದನ್ನೂ ಓದಿಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಇಬ್ಬರು ಸಾವು

ಈ ವೇಳೆ ವೇಗವಾಗಿ ರೈಲು ಬಂದಿದ್ದು,  ರೈಲು ಹಳಿ ನಡುವೆ ಕುರಿಗಳು ಸಿಕ್ಕಿಹಾಕಿಕೊಂಡಿವೆ. ಸ್ಥಳದಲ್ಲೆ 40ಕ್ಕು ಅಧಿಕ ಕುರಿಗಳ ಸಾವನ್ನಪ್ಪಿದ್ದು  ಪರಿಹಾರಕ್ಕಾಗಿ ಸ್ಥಳದಲ್ಲಿ ಕುರಿಗಾಯಿ ಕಣ್ಣೀರು ಹಾಕಿದ್ದಾರೆ. 

click me!