
ವಾಷಿಂಗ್ ಟನ್(ಫೆ. 09) ಇವ ಅಂತಿಂಥ ಖತರ್ ನಾಕ್ ಕಿಲಾಡಿ ಅಲ್ಲ. ನ್ಯಾಯಾಧೀಶೆಗೆ ಲವ್ ಯು ಎಂದಿದ್ದಾನೆ. ವಿಡಿಯೋ ಸಂವಾದದ ವಿಚಾರಣೆ ವೇಳೆ ತನ್ನ ಮನಸಿನ ಭಾವನೆಯನ್ನು ಮುಲಾಜಿಲ್ಲದೆ ಹೇಳಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನೆ ಅಂದ್ರೂ ಈತನ ಎದೆಗಾರಿಕೆ ಮೆಚ್ಚಿಕೊಳ್ಳಲೇಬೇಕು.
ದರೋಡೆ ಪ್ರಕರಣದಲ್ಲಿ ಬಂಧಿಯಾಗಿ ಶಿಕ್ಷೆಗೆ ಗುರಿಯಾಗಿರುವನಿಗೆ ಶಿಕ್ಷೆ ಪ್ರಮಾಣ ಪ್ರಕಟ ಮಾಡುವ ವಿಚಾರಣೆ ಫ್ಲೋರಿಡಾ ಕೋರ್ಟ್ ನಲ್ಲಿ ನಡೆಯುತ್ತಿತ್ತು. ವಿಚಾರಣೆಗೆ ಹಾಜರಾದಾಗ ಥಟ್ಟನೆ ' ನೀವು ಬಹಳ ಸುಂದರವಾಗಿ ಇದ್ದೀರಾ.. ನಾನು ನಿಮ್ಮನ್ನು ಪ್ರೀತಿ ಮಾಡುತ್ತೇನೆ' ಎಂದು ಹೇಳಿದ್ದಾನೆ.
ರಂಗೀಲಾ ನಟಿ ಲವ್ ನಲ್ಲಿ ಬಿದ್ದದ್ದ ವರ್ಮಾ... ಹಳೆಯ ಕತೆ
ಇದಕ್ಕೆ ನಯವಾಗಿ ಉತ್ತರಿಸಿದ ನ್ಯಾಯಾಧೀಶೆ.. ಧನ್ಯವಾದ.... ಆದರೆ ಇದು ಆ ಸಮಯ ಅಲ್ಲ ಎಂದು ಹೇಳಿ ಆರೋಪಿಯ ಫೈಲ್ ಗಳನ್ನು ನೋಡಿದ್ದಾರೆ.
ಆರೋಪಿ ಡೆಮೆಟ್ರಿಸ್ ಲೂಯಿಸ್ ಶಿಕ್ಷೆಗೆ ಗುರಿಯಾದವ. ಲವ್ ಪ್ರಪೋಸ್ ಮಾಡಿದವ. ನ್ಯಾಯಾಧೀಶೆ ತಬಿತಾ ಇದು ಯಾವುದನ್ನು ತಲೆಗೆ ಹಾಕಿಕೊಳ್ಳದೆ ತಮ್ಮ ಕೆಲಸ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಪ್ರೇಮಿಗಳ ದಿನ ಹತ್ತಿರ ಬರುತ್ತಿರುವಾಗ ಇಂಥದ್ದೊಂದು ವಿಡಿಯೋ ವೈರಲ್ ಆಗುತ್ತ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ