Chitradurga: ಸರ್ಕಾರಿ ಕೆಲಸ‌ ನೇಮಕಕ್ಕೆ ಕ್ರಿಮಿನಲ್ ಕೇಸ್ ಅಡ್ಡಿ, ಯುವತಿ ಆತ್ಮಹತ್ಯೆ

By Govindaraj S  |  First Published Aug 22, 2022, 9:39 PM IST

ಸಿಟ್ಟು ಕಸಿದುಕೊಂಡು ಹೋಯ್ತು, ಸಮಾಧಾನ ಕೊಟ್ಟು ಹೋಯ್ತು ಎಂಬ ಮಾತೊಂದಿದೆ. ಎಂದೋ ಮಾಡಿಕೊಂಡಿದ್ದ ಕಲಹದಲ್ಲಿ ಆರೋಪಿಯಾಗಿದ್ದ ಮಹಿಳೆ ಸಾವಿಗೆ ಶರಣಾಗಿದ್ದಾಳೆ. ಸರಕಾರಿ ನೇಮಕಾತಿಗೆ ಆರೋಪಿಯಾಗಿರುವುದು ಅಡ್ಡವಾಗ್ತಿದೆ ಎಂಬುದೇ ಆ ಆತ್ಮಹತ್ಯೆಗೆ ಕಾರಣ. 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.22): ಸಿಟ್ಟು ಕಸಿದುಕೊಂಡು ಹೋಯ್ತು, ಸಮಾಧಾನ ಕೊಟ್ಟು ಹೋಯ್ತು ಎಂಬ ಮಾತೊಂದಿದೆ. ಎಂದೋ ಮಾಡಿಕೊಂಡಿದ್ದ ಕಲಹದಲ್ಲಿ ಆರೋಪಿಯಾಗಿದ್ದ ಮಹಿಳೆ ಸಾವಿಗೆ ಶರಣಾಗಿದ್ದಾಳೆ. ಸರಕಾರಿ ನೇಮಕಾತಿಗೆ ಆರೋಪಿಯಾಗಿರುವುದು ಅಡ್ಡವಾಗ್ತಿದೆ ಎಂಬುದೇ ಆ ಆತ್ಮಹತ್ಯೆಗೆ ಕಾರಣ. ಆ ಕುರಿತು ಡಿಟೇಲ್ಸ್ ಇಲ್ಲಿದೆ ನೋಡಿ. ಚಿತ್ರದಲ್ಲಿ ಕಾಣ್ತಿರೋ ಈ ಯುವತಿಯ ಹೆಸರು ಉಷಾ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ನಿವಾಸಿ. 

Latest Videos

undefined

ಉಷಾ ತಾಯಿ ಯಶೋಧಮ್ಮ ಅವರ ಕುಟುಂಬ ಹಾಗೂ ನಾಗರಾಜ ಎಂಬುವವರ ಕುಟುಂಬದ ನಡುವೆ ಜಮೀನಿನ ವಿಚಾರಕ್ಕೆ ಜಗಳ ನಡೆದಿತ್ತು. ಈ ಜಗಳ ಪರಶುರಾಂಪುರ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ 22 ವರ್ಷದ ಉಷಾ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಪ್ರಕರಣದದಲ್ಲಿ ಉಷಾ A3 ಆರೋಪಿಯಾಗಿದ್ದಳು. ಈ ನಡುವೆ ಉಷಾ ತುಮಕೂರು ನ್ಯಾಯಾಲಯದಲ್ಲಿ ಎಫ್‌ಡಿಎ ಹುದ್ದೆಗೂ ಆಯ್ಕೆಯಾಗಿದ್ದೂ, ಕೆಲಸಕ್ಕೆ ನೇಮಕಾತಿ ಸಂಬಂಧವಾಗಿ ನಾಗರಾಜ್ ಕುಟುಂಬಕ್ಕೆ ಉಷಾ ಕುಟುಂಬದವರು ರಾಜಿ ಆಗಲು ಮನವಿ ಮಾಡಿಕೊಂಡಿದ್ದರಂತೆ. 

ಇಂಗಳದಾಳ್ ಗ್ರಾ.ಪಂ ವ್ಯಾಪ್ತಿಯಲ್ಲಿ ಚೆಕ್ ಡ್ಯಾಂ ಗೋಲ್ ಮಾಲ್; ಸೂಕ್ತ ತನಿಖೆಗೆ ಶಾಸಕ ತಿಪ್ಪಾರೆಡ್ಡಿ ಆಗ್ರಹ

ಆದ್ರೆ ಅವರ ಮಾತಿಗೆ ಸೊಪ್ಪು ಹಾಕದ ನಾಗರಾಜು ಕುಟುಂಬ ಉಷಾಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ,ಕಳಿಸಿದ್ದರೆಂಬುದು  ಉಷಾ ಕುಟುಂಬಸ್ಥರ ಆರೋಪವಾಗಿದೆ. ಅಲ್ಲದೇ ಈ ನಡುವೆ ಈ ವಿಚಾರವಾಗಿ ಪೊಲೀಸರಿಗೆ ಚಾರ್ಜ್‌ಶೀಟ್‌ನಲ್ಲಿ ಹೆಸರು ಕೈ ಬಿಡಲು ಮನವಿ ಮಾಡಿಕೊಂಡರೂ ಪ್ರಯೋಜನವಾಗದ ಹಿನ್ನಲೆಯೆಲ್ಲಿ ಪೊಲೀಸ್ ವೆರಿಫಿಕೇಶನ್ ವೇಳೆ ತನ್ನ ಸರಕಾರಿ ಕೆಲಸಕ್ಕೆ ಈ ಕೇಸ್ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಮಮನೊಂದ ಉಷಾ, ನನ್ನ ಸಾವಿಗೆ ಯಾರೂ ಕಾರಣರಲ್ಲ. 

ಈ ವ್ಯವಸ್ಥೆಯೇ ಕಾರಣ. ನಾನು ಕೆಲಸಕ್ಕೋಸ್ಕರ ಸಾಯ್ತಾ ಇರೋದು. ಬ್ಲಡೀ ಸಿಸ್ಟಮ್ ಅಂತ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಸರ್ಕಾರಿ ಕೆಲಸ‌ಸಿಕ್ರೆ ಸಾಕೆನ್ನುವ ಈ ಕಾಲದಲ್ಲಿ ಸರ್ಕಾರಿ ಕೆಲಸ ಮನೆ ಬಾಗಿಲಿಗೆ ಬಂದರೂ ಅದ್ನು ಪಡೆದುಕೊಳ್ಳುವ ಭಾಗ್ಯವಿಲ್ಲವಾಯ್ತೆಂಬ ಹಿನ್ನೆಲೆಯಲ್ಲಿ ಮನನೊಂದ ಉಷಾ ಆತ್ಮಹತ್ಯೆ ಗೆ ಶರಣಾಗಿದ್ದೂ, ಅಮಾಯಕ ಹೆಣ್ಮಗಳ ಸಾವಿಗೆ ಪರೋಕ್ಷವಾಗಿ ಶಾಮೀಲಾಗಿರುವವರ ವಿರುದ್ಧ ಸೂಕ್ತ‌ ತನಿಖೆ ನಡೆಸಿ ಕಾನೂನು ಕ್ರಮ ಕೈಗಪಲೊಳ್ಳಬೇಕೆಂದು ಮೃತಳ‌ ಸಂಬಂಧಿಗಳು ಆಗ್ರಹಿಸಿದ್ದಾರೆ. 

ಚಿತ್ರದುರ್ಗ: ಅಪ್ರಾಪ್ತರ ಕೈಗೆ ವಾಹನ ಕೊಡೋ ಮುನ್ನ ಎಚ್ಚರ, ಮಾಲೀಕರಿಗೂ ಬೀಳಲಿದೆ ಭಾರೀ ದಂಡ..!

ಒಟ್ಟಾರೆ ಪೊಲೀಸ್ ವೆರಿಫಿಕೇಶನ್ ವೇಳೆ ಸರಕಾರಿ ಕೆಲಸಕ್ಕೆ ಕೇಸ್ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದರಲ್ಲೂ  ಅಮಾಯಕರನ್ನು ಪೇಚಿಗೆ‌ಸಿಲುಕಿಸುವ ಸಿಸ್ಟಂ ವಿರುದ್ಧ ಹೋರಾಟ ನಡೆಸುವ ಬದಲಾಗಿ ಬ್ಲಡೀ ಸಿಸ್ಟಮ್ ಅಂತ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರೋದು ವಿಪರ್ಯಾಸ.

click me!