ವ್ಯಾಟ್ಸ್ಆ್ಯಪ್‌ಗೆ ಬಂತು ಲಿಂಕ್, ಕ್ಲಿಕ್ ಮಾಡಿದ ನಿವೃತ್ತ ಶಿಕ್ಷಕಿಯ ಖಾತೆಯಿಂದ 21 ಲಕ್ಷ ರೂಪಾಯಿ ಗುಳುಂ!

By Suvarna NewsFirst Published Aug 22, 2022, 5:42 PM IST
Highlights

ಸೈಬರ್ ಕ್ರೈಮ್ ಪ್ರಕರಣಗಳು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದ ಮಟ್ಟಿಗೆ ನಡೆಯುತ್ತಿದೆ. ಇದೀಗ ವ್ಯಾಟ್ಸ್ಆ್ಯಪ್‌ಗೆ ಲಿಂಕ್ ಕಳುಹಿಸಲಾಗುತ್ತದೆ. ಈ ಲಿಂಕ್ ಕ್ಲಿಕ್ ಮಾಡಿದರೆ ಕತೆ ಮುಗಿಯಿತು. ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಮೊತ್ತ ಕಳುವಾಗಿರುತ್ತದೆ. ಹೀಗೆ ಲಿಂಕ್ ಕ್ಲಿಕ್ ಮಾಡಿದ ನಿವೃತ್ತ ಶಿಕ್ಷಕಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಿಶಾಖಪಟ್ಟಣಂ(ಆ.22):  ವ್ಯಾಟ್ಸ್ಆ್ಯಪ್‌ಗೆ ಬರುವ ಅನಾಮಿಕರ ಲಿಂಕ್,  ಸಂದೇಶಗಳನ್ನು ಡಿಲೀಟ್ ಮಾಡಿದರೆ ಒಳಿತು. ಅಪ್ಪಿ ತಪ್ಪಿ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದರೆ, ಲಿಂಕ್ ಕ್ಲಿಕ್ ಮಾಡಿದರೆ ಕತೆ ಮಗೀತು. ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕ್ಷಣಾರ್ಧದಲ್ಲೇ ಕಳುವಾಗಿರುತ್ತದೆ. ಹೀಗೆ ನಿವೃತ್ತ ಶಿಕ್ಷಕಿಯೊಬ್ಬರು ತಮ್ಮ ವ್ಯಾಟ್ಸ್ಆ್ಯಪ್ ಖಾತೆಗೆ ಬಂದ ಲಿಂಕ್ ಒಂದನ್ನು ಕ್ಲಿಕ್ ಮಾಡಿದ್ದರೆ. ಇಷ್ಟೇ ನೋಡಿ. ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಯ 21 ಲಕ್ಷ ರೂಪಾಯಿ ವಿಥ್‌ಡ್ರಾ ಮಾಡಲಾಗಿದೆ ಅನ್ನೋ ಬ್ಯಾಂಕ್ ಮೆಸೇಜ್ ಬಂದಿದೆ. ಈ ಕುರಿತು ತಮ್ಮ ಬ್ಯಾಂಕ್ ಶಾಖೆಯಲ್ಲಿ ವಿಚಾರಿಸಿದಾಗಿ ಶಿಕ್ಷಕಿಗೆ ಆಘಾತವಾಗಿದೆ. ತಮ್ಮ ಖಾತೆಯಲ್ಲಿದ್ದ 21 ಲಕ್ಷ ರೂಪಾಯಿ ಕಳುವಾಗಿದೆ. ಈ ಘಟನೆ ನಡೆದಿರುವುದು ಆಂಧ್ರ ಪ್ರದೇಶದ ಮದನಪಲ್ಲೆ ಪಟ್ಟಣದ ರೆಡ್ಡಿಪ್ಪನಾಯ್ಡು ಕಾಲೋನಿಯಲ್ಲಿ ನಡೆದಿದೆ. ನಿವೃತ್ತ ಶಿಕ್ಷಕಿ ವರಲಕ್ಷ್ಮಿ ಇದೀಗ ತಮ್ಮ ಹಣವನ್ನು ಸೈಬರ್ ವಂಚಕರಿಂದ ವಾಪಸ್ ಕೊಡಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಇಷ್ಟೇ ಅಲ್ಲ ಇದೊಂದೆ ತನ್ನ ಆಧಾರ. ಹೇಗಾದರೂ ಮಾಡಿ ಮುಂದಿನ ಜೀವನಕ್ಕೆ ನೆರವಾಗಬೇಕು ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.

ಶಿಕ್ಷಕಿ ವರಲಕ್ಷ್ಮಿ ಇತ್ತೀಚೆಗೆಷ್ಟೇ ನಿವೃತ್ತಿಯಾಗಿದ್ದರು. ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕಿಗೆ ವಿಮೆ, ಪಿಎಫ್ ಸೇರಿದಂತೆ ಇತರ ಎಲ್ಲಾ ಮೊತ್ತ ಸೇರಿದಂತೆ ಒಟ್ಟು 21 ಲಕ್ಷ ರೂಪಾಯಿ ಬಂದಿದೆ. ನಿವೃತ್ತಿ ಜೀವನದಲ್ಲಿ ಯಾರಲ್ಲೂ ಕೈಚಾದೇ ಜೀವನ ನಡೆಸಲು ಈ ಮೊತ್ತ ಸಾಕು. ತಮ್ಮ ದೈನಂದಿನ ಖರ್ಚು, ಆಸ್ಪತ್ರೆ ಖರ್ಚು ವೆಚ್ಚ ಎಲ್ಲವೂ ಇದರಿಂದಲೇ ನಡೆದು ಹೋಗಲಿದೆ. ಮುಂದಿನ ಜೀವನ ನೆಮ್ಮದಿಯಿಂದ ಮನೆಯಲ್ಲಿರಬೇಕು ಎಂದುಕೊಂಡಿದ್ದ ಶಿಕ್ಷಕಿಗೆ ಇದೀಗ ನೆಮ್ಮದಿಯೇ ಇಲ್ಲದಾಗಿದೆ. ನಿವೃತ್ತಿಯಾದ ಬಳಿಕ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದ ವರಲಕ್ಷ್ಮಿ ವ್ಯಾಟ್ಸ್ಆ್ಯಪ್‌ನಲ್ಲಿ ಲಿಂಕ್ ಒಂದು ಬಂದಿದೆ.

ನಿಮ್ಮ ಫೋನ್‌ಗಳಲ್ಲಿದ್ಯಾ ಸಾಲ ನೀಡುವ ಈ ಚೀನಾ ಆಪ್‌ಗಳು... ಹಾಗಿದ್ರೆ ಈಗ್ಲೇ ಡಿಲಿಟ್ ಮಾಡಿ

ಮನೆಯಲ್ಲಿದ್ದ  ವರಲಕ್ಷ್ಮೀ ಲಿಂಕ್ ಕ್ಲಿಕ್ ಮಾಡಿದ್ದಾರೆ. ಶಿಕ್ಷಕಿಯ ವ್ಯಾಟ್ಸ್ಆ್ಯಪ್ ಖಾತೆ ನಂಬರ್ ಬ್ಯಾಂಕ್ ಖಾತೆಗೂ ಲಿಂಕ್ ಆಗಿದೆ. ಇದರಿಂದ ಸೈಬರ್ ವಂಚಕರು ಸುಲಭವಾಗಿ ಶಿಕ್ಷಕಿಯ ಖಾತೆಯಲ್ಲಿದ್ದ 21 ಲಕ್ಷ ರೂಪಾಯಿ ಎಗರಿಸಿದ್ದಾರೆ. ಕ್ಲಿಕ್ ಮಾಡಿದ ಕೆಲವೇ ಕ್ಷಣಗಳಲ್ಲಿ ಶಿಕ್ಷಕಿಯ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶ ಬಂದಿದೆ. ನಿಮ್ಮ ಬ್ಯಾಂಕ್ ಖಾತೆಯ 21 ಲಕ್ಷ ರೂಪಾಯಿ ಹಣ ಹಿಂಪಡೆಯಲಾಗಿದೆ ಅನ್ನೋ ಸಂದೇಶ ಶಿಕ್ಷಕಿಯ ಅನುಮಾನ ಹೆಚ್ಚಿಸಿದೆ. ತಕ್ಷಣವೇ ತಮ್ಮ ಬ್ಯಾಂಕ್ ಶಾಖೆಗೆ ತೆರಳಿ ವಿಚಾರಿಸಿದ್ದಾರೆ. 

ಬ್ಯಾಂಕ್ ಸಿಬ್ಬಂದಿಗಳು ಪರಿಶೀಲಿಸಿದಾಗ 21 ಲಕ್ಷ ರೂಪಾಯಿ ಹಣ ಕಳುವಾಗಿರುವುದು ಪತ್ತೆಯಾಗಿದೆ. ಇದರಿಂದ ಶಿಕ್ಷಕಿ ಆಘಾತಕ್ಕೊಳಗಾಗಿದ್ದಾರೆ. ಸಿಬ್ಬಂದಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಚೇತರಿಸಿಕೊಂಡ ಶಿಕ್ಷಕಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇತ್ತೀಚಗೆ ಸಾಫ್ಟ್‌ವೇರ್ ಉದ್ಯೋಗಿಯ ಖಾತೆಯಿಂದ ಇದೇ ರೀತಿ 12 ಲಕ್ಷ ರೂಪಾಯಿ ಕಳುವು ಮಾಡಲಾಗಿತ್ತು. ಈ ಕುರಿತು ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ರೀತಿ ಹಲವು ಪ್ರಕರಣಗಳು ದಾಖಲಾಗಿದ್ದು, ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ.

Online Fraud; ಆನ್​ಲೈನ್​ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾದ್ರೆ ಹುಷಾರ್!
 

click me!