ಶವವಾಗಿ ಪತ್ತೆಯಾದ ಕೇರಳದ ಯುವ ರೂಪದರ್ಶಿ: ಪತಿ ಪೊಲೀಸ್ ಕಸ್ಟಡಿಗೆ

By Anusha Kb  |  First Published May 13, 2022, 3:21 PM IST
  • ಕೇರಳದ ಯುವ ರೂಪದರ್ಶಿ ಶಹ್ನಾ ಸಜದ್‌ ನಿಗೂಢ ಸಾವು
  • ನೇಣು ಬಿಗಿದ ಸ್ಥಿತಿಯಲ್ಲಿ ಶಹ್ನಾ ಶವ ಪತ್ತೆ
  • ಕೊಲೆ ಶಂಕೆ, ಪತಿ ಪೊಲೀಸ್ ವಶಕ್ಕೆ
     

ಕೋಜಿಕೋಡ್: ದೇವರನಾಡು ಕೇರಳದ ಯುವ ರೂಪದರ್ಶಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. 21 ವರ್ಷದ ಶಹ್ನಾ ಸಜದ್‌ ಸಾವಿಗೀಡಾದ ರೂಪದರ್ಶಿ. ಕಾಸರಗೋಡು ಮೂಲದ ಈ ರೂಪದರ್ಶಿ ಕೊಜಿಕೋಡ್‌ನ (Kozhikode) ಪರಂಬಿಲ್‌ ಬಜಾರ್‌ನ (Parambil Bazaar) ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಆದರೆ ಇಂದು ಅವರು ಶವವಾಗಿ ಪತ್ತೆಯಾಗಿದ್ದಾರೆ. 

ಘಟನೆಯ ಬಳಿಕ ರೂಪದರ್ಶಿ ಶಹ್ನಾ ಪೋಷಕರು ತಮ್ಮ ಪುತ್ರಿ ಕೊಲೆ ಮಾಡಲಾಗಿದೆ ಎಂದು ದೂರಿದ ಹಿನ್ನೆಲೆಯಲ್ಲಿ  ಶಹ್ನಾ ಪತಿ ಸಜದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ಶಹ್ನಾ ಸಾವನ್ನಪ್ಪಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಶಹ್ನಾ ಪೋಷಕರು ಆರೋಪಿಸಿದ್ದಾರೆ. ಗುರುವಾರ ರಾತ್ರಿ 11.30ರ ಸುಮಾರಿಗೆ ಪರಂಬಿಲ್ ಬಜಾರ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕಿಟಕಿಯ ಗ್ರಿಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಹ್ನಾ ಪತ್ತೆಯಾಗಿದ್ದಾರೆ. 

Tap to resize

Latest Videos

Sofia Jirau : ಡೌನ್ ಸಿಂಡ್ರೋಮ್ ನಡುವೆಯೂ 'ವಿಕ್ಟೋರಿಯಾಸ್ ಸೀಕ್ರೆಟ್‌' ಸಂಸ್ಥೆಯ ಪ್ರಖ್ಯಾತ ಮಾಡೆಲ್

ಶಹ್ನಾ(Shahna) ಉದಯೋನ್ಮುಖ ನಟಿಯೂ (emerging actor) ಆಗಿದ್ದು, ತಮಿಳು ಸಿನಿಮಾ ಇಂಡಸ್ಟ್ರಿಗೆ (Tamil film industry) ಇತ್ತೀಚೆಗೆ ಸೇರಿದ್ದರು. ಒಂದೂವರೆ ವರ್ಷಗಳ ಹಿಂದೆ ಆಕೆ ಸಜದ್‌ನನ್ನು ವಿವಾಹವಾಗಿದ್ದಳು. ಆಕೆಗೆ ಹಲವು ಬಾರಿ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ಆಕೆಯ ಕುಟುಂಬ ಸದಸ್ಯರು ಹೇಳಿದ್ದಾರೆ. ಸ್ಥಳ ಮಹಜರು ವೇಳೆ ಸ್ಥಳೀಯರು ಕೂಡ ಈ ಜೋಡಿಯ ಮಧ್ಯೆ ಸಂಬಂಧ ಚೆನ್ನಾಗಿರಲಿಲ್ಲ. ಮುಚ್ಚಿದ ಬಾಗಿಲಿನ ಹಿಂದೆ ಇಬ್ಬರ ನಡುವೆ ಹಲವು ಬಾರಿ ಕಲಹ ನಡೆದಿದೆ ಸ್ಥಳೀಯರು ಪೊಲೀಸರಿಗೆ ಹೇಳಿದ್ದಾರೆ. 

 

ಕಳೆದ ವರ್ಷ ಸೆಲ್ಫಿ ಹುಚ್ಚಿಗೆ ಹಾಂಗ್ ಕಾಂಗ್ ಮಾಡೆಲ್ ವೊಬ್ಬರು ಬಲಿಯಾದ ಘಟನೆ ನಡೆದಿತ್ತು. 32 ವರ್ಷದ ಸೋಫಿಯಾ ಚೆಯುಂಗ್ ಸೆಲ್ಫಿ ತೆಗೆದುಕೊಳ್ಳುವಾಗ ಪ್ರಾಣ ಕಳೆದು ಕೊಂಡಿದ್ದರು. ಸೆಲ್ಫಿ ತೆಗೆಯಲು ಹೋಗಿ 2021ರ ಜುಲೈ 10ರಂದು ಹಾಂಕಾಂಗ್‌ನಲ್ಲಿ 16 ಅಡಿ ಎತ್ತರದ  ಬಂಡೆಯಿಂದ ಅವರು ಜಾರಿ ಬಿದ್ದಿದ್ದರು ಕೂಡಲೇ ಸ್ನೇಹಿತರು  ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಗಲೇ ಅವರು ಜೀವ ಕಳೆದುಕೊಂಡಿದ್ದಾರೆ ಎಂದು ಡಾಕ್ಟರ್‌ ಘೋಷಿಸಿದರು. ತನ್ನ ಫ್ರೆಂಡ್ಸ್‌ ಜೊತೆಗೆ ಹಾಂಗ್ ಕಾಂಗ್‌ನ ಹಾ ಪಾಕ್ ಲೈ ನೇಚರ್ ಪಾರ್ಕ್‌ಗೆ ಹೋಗಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ. ಸೋಫಿಯಾ ಚೆಯುಂಗ್ ತನ್ನ ಮೂವರು ಸ್ನೇಹಿತರೊಂದಿಗೆ ಹಾ ಪಾಕ್ ಲೈ ಪಾರ್ಕ್‌ಗೆ ಹೋಗಿದ್ದರು.

ವಾಸ್ತವವಾಗಿ, ಸೋಫಿಯಾ ಜಲಪಾತದ ಮೇಲ್ಭಾಗದಲ್ಲಿದ್ದರು ಮತ್ತು ಅಲ್ಲಿಂದ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅಪಘಾತದ ನಂತರ, ಸ್ನೇಹಿತರು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ರೂಪದರ್ಶಿ ಕೈಲೀ ಜೆನ್ನರ್ ರಕ್ತಸಿಕ್ತ nude photoಗೆ ನೆಟ್ಟಿಜನ್ಸ್ ಫುಲ್ ಗರಂ!

ಆಂಧ್ರಪ್ರದೇಶದ ವಿಶಾಖಪಟ್ಟಣಂ (Visakhapatnam) ಜಿಲ್ಲೆಯಲ್ಲಿ ಮದುವೆಯಾಗಿ ಗಂಡನ ಮನೆ ಸೇರಬೇಕಾದ ವಧುವೊಬ್ಬಳು ಮಂಟಪದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಆಘಾತಕಾರಿ ಘಟನೆ ನಡೆದಿದೆ.  ವಧು ಮುಹೂರ್ತದ ಸಮಯಕ್ಕೆ ಸರಿಯಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಬುಧವಾರ ಘೋಷಿಸಿದ್ದಾರೆ. ಸೃಜನಾ ಮೃತಪಟ್ಟ ವಧು. ಆಕೆಯ ಸಾವಿನ ಸುದ್ದಿ ಹೊರಬಿದ್ದ ನಂತರ, ವಧು ಹಾಗೂ ವರ ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳನ್ನು ದಾಖಲಿಸಿಕೊಂಡಿದ್ದು, ಆಕೆಯ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸಲು ಪ್ರೇರೇಪಿಸಿದ್ದಾರೆ.  ಕಳೆದ ಮೂರು ದಿನಗಳಿಂದ ಮದುವೆ ಸಮಾರಂಭಗಳು ಮತ್ತು ತೀವ್ರವಾದ ಫೋಟೋ ಶೂಟ್‌ಗಳಿಂದಾಗಿ ಆಯಾಸದಿಂದ ಅವಳು ಸಾವನ್ನಪ್ಪಿರಬಹುದು ಎಂದು ಕುಟುಂಬ ಭಾವಿಸಿದೆ. ಆದರೆ ಆಕೆ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದಾಗ ಕುಟುಂಬದವರಿಗೆ ಶಾಕ್ ಕಾದಿತ್ತು. 

click me!