* ರವಿ ಲಮಾಣಿ ಬಂಧಿತ ಆರೋಪಿ
* ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದಲ್ಲಿ ಬಂಧನ
* ರೆಸಾರ್ಟ್‌ನಲ್ಲಿ ರೂಮ್ ಅಟೆಂಡರ್ ಆಗಿದ್ದ ಆರೋಪಿ ರವಿ
ಪಣಜಿ/ಗದಗ(ಮೇ.13): ಉತ್ತರ ಗೋವಾದಲ್ಲಿರುವ(Goa) ಅರಂಬೋಳ್ ರೆಸಾರ್ಟ್‌ನಲ್ಲಿ ರಷ್ಯಾ(Russia) ಮೂಲದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ(Rape) ಎಸಗಿದ್ದ ಆರೋಪಿಯನ್ನು ಕರ್ನಾಟಕದ(Karnataka) ಗದಗ ಜಿಲ್ಲೆ ಮಜ್ಜೂರ ತಾಂಡಾದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ.
ಮೇ. 6ರಂದು ಈ ಲೈಂಗಿಕ ದೌರ್ಜನ್ಯ ಪ್ರಕರಣ(Sexual Harassment Case) ನಡೆದಿದ್ದು, ಸಂತ್ರಸ್ತೆಯ(Victim) ತಾಯಿ ಮೇ. 9ರಂದ ದೂರು ನೀಡಿದ್ದರು. ಮೇ 10ರಂದು ಪೆರ್ನೇಮ್ ಪೊಲೀಸರು(Police) ಆರೋಪಿ(Accused) ರವಿ ಲಮಾಣಿ(28)ಯನ್ನು ಗದಗ(Gadag) ಜಿಲ್ಲೆಯ ಶಿರಹಟ್ಟಿ ತಾಲೂಕಿನ ಆತನ ಹುಟ್ಟೂರು ಮಜ್ಜೂರ ತಾಂಡಾದಲ್ಲಿ ಬಂಧಿಸಿದ್ದಾರೆ(Arrest).
ಗರ್ಭಿಣಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಅತ್ಯಾಚಾರ!
‘ರೆಸಾರ್ಟ್‌ನಲ್ಲಿ ರೂಮ್ ಅಟೆಂಡರ್ ಆಗಿದ್ದ ಆರೋಪಿ ರವಿ, ಸಂತ್ರಸ್ತೆಯ ತಾಯಿ ಮನೆಗೆ ಅಗತ್ಯ ವಸ್ತುಗಳನ್ನು ತರಲು ಹತ್ತಿರದ ಅರಂಬೋಳ್ ಮಾರುಕಟ್ಟೆಗೆ ಹೋಗಿದ್ದಾಗ ರೂಮ್‌ಗೆ ನುಗ್ಗಿದ್ದ. ಈ ವೇಳೆ, ರೆಸಾರ್ಟ್‌ನ ಈಜುಕೊಳ ಮತ್ತು ಕೊಠಡಿಯ ಒಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನಂತರ ಆರೋಪಿ ತವರೂರಿಗೆ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದ್ದಾರೆ.
ಗೃಹ ಸಚಿವರ ತವರು ಕ್ಷೇತ್ರದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಯತ್ನ!
ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ(Home minister araga jnanendra ) ಅವರ ಸ್ವಕ್ಷೇತ್ರವಾದ ಅರಗ ಗ್ರಾಮದಲ್ಲಿಯೇ (Araga Village) ಅಮಾನುಷ ಘಟನೆ ವರದಿಯಾಗಿದೆ. ದಲಿತ ಮಹಿಳೆಯ (Dalit Women) ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ (Rape Attempt) ಆರೋಪದಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.
ತೀರ್ಥಹಳ್ಳಿಯಲ್ಲಿ ಆಸ್ಪತ್ರೆಗೆ ಹೋಗಿ ಬರುತ್ತಿದ್ದಾಗ ದಂಪತಿಗಳನ್ನು ಅಡ್ಡಗಟ್ಟಿ ಕೃತ್ಯ ಎಸಗಲು ಪ್ರಯತ್ನಿಸಲಾಗಿದೆ. ದಲಿತ ಮಹಿಳೆಯನ್ನು ಬೆತ್ತಲು ಮಾಡಿ ಅತ್ಯಾಚಾರಕ್ಕೆ ಪ್ರಯತ್ನ ಮಾಡಲಾಗಿದ್ದರೆ, ಪತಿಯ ಮೇಲೆ ನಾಲ್ವರಿಂದ ಹಲ್ಲೆಯಾಗಿದೆ.
Crime News: ಅತ್ಯಾಚಾರ ಮಾಡಿ ಕೊಲೆ, ನಂತರ ಶವದ ಜೊತೆ ಸಂಭೋಗ: ಆರೋಪಿ ಬಂಧನ
ಪತ್ನಿ ಮೇಲೆ ಅತ್ಯಾಚಾರವಾಗುತ್ತಿರುವುದನ್ನು ಕಂಡು ಪತಿ ರಕ್ಷಣೆ ಮಾಡುವಂತೆ ಕೂಗಿಕೊಂಡಿದ್ದಾರೆ. ಈ ವೇಳೆ ಅಕ್ಕಪಕ್ಕದ ಸ್ಥಳೀಯರು ಬಂದು ರಕ್ಷಣೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡು ಮೂರನೇ ಪ್ರಕರಣ ಇದಾಗಿದೆ. ಈ ವಿಚಾರದಲ್ಲಿ ತೀರ್ಥಹಳ್ಳಿ ತಾಲ್ಲೂಕು ದೇವರಗುಡಿ ನಿವಾಸಿಗಳಾದ ಸಂಪತ್ ಬಿನ್ ಉಮೇಶ್‌ಗೌಡ, ಆದರ್ಶ ಬಿನ್ ಪುಟ್ಟಪ್ಪಗೌಡ, ಇನ್ನಿಬ್ಬರು ಅಪರಿಚಿತರ ವಿರುದ್ಧ ದೂರು ದಾಖಲಾಗಿದೆ. ಗೃಹ ಸಚಿವರ ಸೂಚನೆಯಂತೆ ತೀರ್ಥಹಳ್ಳಿ ಪೋಲಿಸರಿಂದ ಎಫ್ಐಆರ್ ದಾಖಲು ಮಾಡಲಾಗಿದೆ.
ಸದ್ಯ ಮಹಿಳೆಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಿ ತನಿಖೆ ನಡೆಸಲು ಮುಂದಾದ ಪೋಲಿಸರು. ಕಲಂ 341, 323, 376, 354(A), 354(B), 506 ಸಹಿತ 34 ಐಪಿಸಿ ಹಾಗೂ ಕಲಂ 3 (1) (w) (i) (ii), 3 (2) (va) The SC & ST (POA) Act ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.