Bengaluru: ಟ್ರಾನ್ಸ್‌ಫಾರ್ಮರ್‌ ಸ್ಫೋಟ: ಬೆಸ್ಕಾಂ ಸಿಬ್ಬಂದಿ ಬಂಧನ

Published : Mar 29, 2022, 07:20 AM IST
Bengaluru: ಟ್ರಾನ್ಸ್‌ಫಾರ್ಮರ್‌ ಸ್ಫೋಟ: ಬೆಸ್ಕಾಂ ಸಿಬ್ಬಂದಿ ಬಂಧನ

ಸಾರಾಂಶ

*   ಟ್ರಾನ್ಸ್‌ಫಾರ್ಮರ್‌ಗೆ ತಂದೆ, ಮಗಳು ಬಲಿ ಕೇಸ್‌ *   ಬೆಸ್ಕಾಂನ ಸಹಾಯಕ, ಕಿರಿಯ ಎಂಜಿನಿಯರ್‌ಗಳ ಬಂಧನ *   ಮೃತರ ಕುಟುಂಬಸ್ಥರು ನೀಡಿದ ದೂರು ಆಧರಿಸಿ ಕ್ರಮ  

ಬೆಂಗಳೂರು(ಮಾ.29):  ಇತ್ತೀಚಿಗೆ ನಗರದ ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್‌ ಸಮೀಪ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌(Transformer) ಸ್ಫೋಟಗೊಂಡು ತಂದೆ-ಮಗಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಬೆಸ್ಕಾಂ(BESCOM) ಅಂಜನಾನಗರ ವಿಭಾಗದ ಸಹಾಯಕ ಹಾಗೂ ಕಿರಿಯ ಎಂಜಿನಿಯರ್‌ಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು(Police) ಸೋಮವಾರ ಬಂಧಿಸಿದ್ದಾರೆ.

ಬೆಸ್ಕಾಂನ ಅಂಜನಾನಗರದ ಸಹಾಯಕ ಎಂಜಿನಿಯರ್‌ ದಿನೇಶ್‌ ಹಾಗೂ ಕಿರಿಯ ಎಂಜಿನಿಯರ್‌ ಮಹಾಂತೇಶ್‌ ಬಂಧಿತರು. ಮಾ.23ರಂದು ಮಂಗನಹಳ್ಳಿ ಕ್ರಾಸ್‌ ಸಮೀಪ ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ಶಿವರಾಜ್‌ ಹಾಗೂ ಅವರ ಪುತ್ರಿ ಚೈತನ್ಯ ಮೃತಪಟ್ಟಿದ್ದರು(Death). ಘಟನೆಗೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿತು. ಈ ಸಂಬಂಧ ಮೃತರ ಕುಟುಂಬದ ನೀಡಿದ ದೂರಿನ ಮೇರೆಗೆ ತನಿಖೆ(Investigation) ನಡೆಸಿದ ಪೊಲೀಸರು ಬೆಸ್ಕಾಂನ ಇಬ್ಬರು ಎಂಜಿನಿಯರ್‌ಗಳನ್ನು ಸೋಮವಾರ ಬಂಧಿಸಿದರು. ಬಳಿಕ ಸಂಜೆ ಠಾಣಾ ಜಾಮೀನು(Bail) ಮಂಜೂರು ಮಾಡಿ ಬಿಡುಗಡೆ ಮಾಡಿದ್ದಾರೆ.

Transformer Blast: ಬೇಜವಾಬ್ದಾರಿ ಬೆಸ್ಕಾಂ ವಿರುದ್ಧ ಸ್ಥಳೀಯರ ಆಕ್ರೋಶ

ತಿಂಗಳ ಹಿಂದಷ್ಟೆ ವರ್ಗ:

ತಿಂಗಳ ಹಿಂದಷ್ಟೇ ಬೆಸ್ಕಾಂನ ಅಂಜನಾನಗರದ ವಿಭಾಗಕ್ಕೆ ಸಹಾಯಕ ಎಂಜಿನಿಯರ್‌ ದಿನೇಶ್‌ ವರ್ಗವಾಗಿ ಬಂದಿದ್ದರು. ಟ್ರಾನ್ಸ್‌ಫಾರ್ಮರ್‌ ನಿರ್ವಹಣೆ ಜವಾಬ್ದಾರಿಯು ಬೆಸ್ಕಾಂ ಅಧಿಕಾರಿಗಳಿಗೆ ಇದೆ. ಮಂಗನಹಳ್ಳಿ ಕ್ರಾಸ್‌ ಸಮೀಪ ಟ್ರಾನ್ಸ್‌ ಫಾರ್ಮರ್‌ನಲ್ಲಿ ತಾಂತ್ರಿಕ ದೋಷದ ಬಗ್ಗೆ ಘಟನೆಗೂ ಎರಡು ದಿನಗಳ ಮುಂಚಿತವಾಗಿಯೇ ಬೆಸ್ಕಾಂ ಸಹಾಯವಾಣಿ ಕರೆ ಮಾಡಿದ್ದಾಗಿ ಹೇಳಿದ್ದಾರೆ. ಅಲ್ಲದೆ ಸ್ಫೋಟದ(Explosion) ನಡೆದ ದಿನ ಸಹ ಟ್ರಾನ್ಸ್‌ ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಬೆಸ್ಕಾಂಗೆ ಕರೆ ಮಾಡಿದ್ದರು. ಹೀಗಿದ್ದರೂ ಬೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಸಕಾಲಕ್ಕೆ ಬೆಸ್ಕಾಂ ಎಚ್ಚೆತ್ತುಕೊಂಡಿದ್ದರೆ ಎರಡು ಅಮಾಯಕ ಜೀವಗಳು ಉಳಿಯುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಅಧಿಕಾರಿಗಳಿಗೆ ತಿಳಿಸದ ಬೆಸ್ಕಾಂ ಹೆಲ್ಪ್‌ಲೈನ್‌ ಸಿಬ್ಬಂದಿ!

ಮಂಗನಹಳ್ಳಿ ಕ್ರಾಸ್‌ ಸಮೀಪದ ಟ್ರಾನ್ಸ್‌ಫಾರ್ಮರ್‌ ಸ್ಫೋಟದ ದುರ್ಘಟನೆಯಲ್ಲಿ ತಂದೆ-ಮಗಳ ಸಾವಿಗೆ ಬೆಸ್ಕಾಂ ಸಹಾಯವಾಣಿ (1912) ಸಿಬ್ಬಂದಿ ಬೇಜವಾಬ್ದಾರಿತನ ಸಹ ಪ್ರಮುಖವಾಗಿದೆ ಎಂಬ ಸಂಗತಿ ಜ್ಞಾನಭಾರತಿ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಿಶ್ಚಿತಾರ್ಥಕ್ಕೆ ಚೌಲ್ಟ್ರಿ ಬುಕ್‌ ಮಾಡಿ ವಾಪಸ್ಸಾಗುವಾಗ ಟ್ರಾನ್ಸ್‌ಫಾರ್ಮರ್‌ ಸ್ಫೋಟಕ್ಕೆ ತಂದೆ ಮಗಳು ಬಲಿ!

ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ(Fire) ಹೊತ್ತಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು, ಬೆಸ್ಕಾಂ ಸಹಾಯವಾಣಿ ಕೇಂದ್ರಕ್ಕೆ (1912) ಕರೆ ಮಾಡಿ ತಿಳಿಸಿದ್ದಾರೆ. ಆದರೆ ಸಹಾಯವಾಣಿ ಸಿಬ್ಬಂದಿ, ಈ ಅವಘಡದ ವಿಚಾರವನ್ನು ಅಂಜನಾನಗರದ ಬೆಸ್ಕಾಂ ಸಿಬ್ಬಂದಿಗೆ ರವಾನಿಸದೆ ನಿರ್ಲಕ್ಷ್ಯತನ ತೋರಿದ್ದಾರೆ. ಹೀಗಾಗಿ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ಬಹಳ ಹೊತ್ತಿನ ಬಳಿಕ ಬೆಸ್ಕಾಂ ಅಧಿಕಾರಿಗಳಿಗೆ ಸ್ಫೋಟದ ವಿಚಾರ ತಿಳಿದಿದೆ. ಈಗ ಅಂದು ಸಹಾಯವಾಣಿ ಕೇಂದ್ರದಲ್ಲಿ ಕರ್ತವ್ಯನಿರ್ವಹಿಸಿದ ಸಿಬ್ಬಂದಿ ಪತ್ತೆಗೆ ಕೂಡಾ ತನಿಖೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಕ್ಕೆ ತಂದೆ ಬಲಿ!

ಬೆಂಗಳೂರು: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು  (Transformer Explodes)ಸ್ಕೂಟರ್‌ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಕಿದ ಪರಿಣಾಮ ತಂದೆ ಮೃತಪಟ್ಟು (Death), ಮಗಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ (Bengaluru) ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್‌ ಸಮೀಪ ಮಾ.24 ರಂದು ನಡೆದಿತ್ತು.

ಮಂಗನಹಳ್ಳಿ ನಿವಾಸಿ ಶಿವರಾಜ್‌ (55), ಪುತ್ರಿ ಚೈತನ್ಯ (19) ಸಾವನ್ನಪ್ಪಿದ್ದರು. ನಿಶ್ಚಿತಾರ್ಥಕ್ಕೆ ಕಲ್ಯಾಣ ಮಂಟಪ ಬುಕ್‌ ಮಾಡಿ ಮಗಳ ಜತೆ ಶಿವರಾಜ್‌ ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ರಕ್ಷಿಸಿ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!