ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ| ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದಲ್ಲಿ ನಡೆದ ಘಟನೆ| ಕ್ಷುಲ್ಲಕ ವಿಚಾರಕ್ಕೆ ಕಳೆದ ಕೆಲವು ದಿನಗಳ ಹಿಂದೆ ಜಗಳ ಮಾಡಿಕೊಂಡ ಘಟನೆ ಸದ್ದಿ ಪೊಲೀಸರಿಗೆ ತಿಳಿಸಿದ ಮೃತ ಯುವಕ ಪೋಷಕರು|
ಕೆ.ಆರ್. ನಗರ(ಜೂ.29): ಗೆಳೆಯರ ನಡುವೆ ನಡೆದ ಕಲಹದಿಂದ ಬೇಸತ್ತ ಯುವಕನೊಬ್ಬ ನೇಣು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್. ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಮೂಲೆಪೆಟ್ಲು ಗ್ರಾಮದ ಕೆಂಪೇಗೌಡ ಎಂಬವರ ಪುತ್ರ ಬಾಲರಾಜ್(25) ಆತ್ಮಹತ್ಯೆ ಮಾಡಿಕೊಂಡವರು.
ಗ್ರಾಮದ ಸಮೀಪದಲ್ಲಿರುವ ದಂಡಮ್ಮ ದೇವಾಲಯದ ಮುಂಭಾಗದ ಮರದಲ್ಲಿ ಭಾನುವಾರ ಬೆಳಗ್ಗೆ ವ್ಯಕ್ತಿಯೊಬ್ಬನ ಶವ ನೇತಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಆತನ ಪೋಷಕರಿಗೆ ವಿಚಾರ ಮುಟ್ಟಿಸಿದಾಗ ಮೃತನ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಪೋಲೀಸರಿಗೆ ದೂರು ನೀಡಿದ್ದಾರೆ.
ಫೇಲ್ ಆಗುತ್ತೇನೆಂದು ವಿದ್ಯಾರ್ಥಿನಿ ಆತ್ಮಹತ್ಯೆ..!
ಸ್ಥಳಕ್ಕೆ ಭೇಟಿ ನೀಡಿದ ಎಸ್ಐಗಳಾದ ವಿ. ಚೇತನ್, ಮಾದಪ್ಪ ಮತ್ತು ಸಿಬ್ಬಂದಿ ಮೃತದೇಹವನ್ನು ಕೆಳಗಿಳಿಸಿ ಪಟ್ಟಣದ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಯ ಮಾಡಿಸಿದ ನಂತರ ವಾರಸುದಾರರಿಗೆ ಒಪ್ಪಿಸಿದರು. ಘಟನೆ ಸಂಬಂಧ ಮೃತ ಬಾಲರಾಜನ ತಂದೆ ಕೆ.ಆರ್. ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಗ್ರಾಮದವರಾದ ಪುರುಷೋತ್ತಮ, ಭಾಸ್ಕರ, ನಯನ್, ಸ್ವಾಮಿ, ಕಾಶಿ, ಸಚಿನ್ಹಾಗೂ ತನ್ನ ಮಗ ಬಾಲರಾಜ್ನಡುವೆ ಕ್ಷುಲ್ಲಕ ವಿಚಾರಕ್ಕೆ ಕಳೆದ ಕೆಲವು ದಿನಗಳ ಹಿಂದೆ ಜಗಳವಾಗಿದ್ದ ಘಟನೆಯನ್ನು ತಿಳಿಸಿದ್ದಾರೆ.
ಇದರ ಜತೆಗೆ ಸ್ನೇಹಿತರು ನಡೆಸಿದ ದುಷ್ಕೃತ್ಯದ ಪ್ರೇರಣೆಯಿಂದ ನನ್ನ ಮಗ ಆತ್ಮಹತ್ಯೆಗೆ ಶರಣಾಗಿದ್ದು, ಆತನ ಸಾವಿಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.