ಚಿಕ್ಕಮಗಳೂರು: ಅಕ್ರಮ ಗೋಹತ್ಯೆ ತಡೆಗೆ 'ಯೋಗಿ' ಮಾಡೆಲ್: ಮೂಲಭೂತ ಸೌಕರ್ಯ ಕಟ್

By Manjunath Nayak  |  First Published Aug 8, 2022, 5:42 PM IST

Yogi Model Against Cow Slaughter: ಗೋ‌ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ‌ ವಿರುದ್ಧ ಕ್ರಮಕ್ಕೆ ನಗರಸಭೆ ಅಧಿಕಾರಿಗಳು ಹೊಸ‌ ಪ್ಲಾನ್  ಮಾಡಿದ್ದಾರೆ
 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಆ. 08): ಗೋಹತ್ಯೆ ನಿಷೇಧದ ನಡೆವೆಯೂ ಕಾಫಿನಾಡಲ್ಲಿ ಎಗ್ಗಿಲ್ಲದೆ ಗೋ‌ಮಾಂಸ ಮಾರಾಟ ಮಾಡಲಾಗುತ್ತಿದೆ‌‌. ನಗರಸಭೆ ಅಧಿಕಾರಿಗಳು ನಿರಂತರ ದಾಳಿ ನಡೆವೆಯೂ ಗೋ‌ಮಾಂಸ ಮಾರಾಟ ಮುಂದುವರೆದಿದೆ. ಗೋ‌ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ‌ ವಿರುದ್ಧ ಕ್ರಮಕ್ಕೆ ನಗರಸಭೆ ಅಧಿಕಾರಿಗಳು ಹೊಸ‌ ಪ್ಲಾನ್  ಮಾಡಿದ್ದಾರೆ. ಮೂಲಭೂತ ಸೌಕರ್ಯಗಳ ಕಟ್ ಮಾಡಿ ಗೋ ಹಂತಕರಿಗೆ ನಡುಕ ಹುಟ್ಟಿಸಿದ್ದಾರೆ. 

Tap to resize

Latest Videos

ಗೋಹತ್ಯೆ ಕೇಂದ್ರದ  ಕರೆಂಟ್ , ನೀರು ಕಟ್: ಕಾಫಿನಾಡು ಚಿಕ್ಕಮಗಳೂರು ಹೇಳಿ ಕೇಳಿ ಮಲೆನಾಡು. ಬೀಡಾಡಿ ಹಸುಗಳು ಸೇರಿದಂತೆ ಮಲೆನಾಡು ವಿಶೇಷ ತಳಿಯ ಹಸುಗಳು ಹೆಚ್ಚು. ಇದನ್ನೇ ಬಂಡವಾಳ ಮಾಡಿಕೊಂಡ ಗೋಮಾಂಸ ದಂಧೆಕೋರರು ಸರ್ಕಾರ ಹಾಗೂ ಪೊಲೀಸರಿಗೆ ಸೆಡ್ಡು ಹೊಡೆದಿದ್ದರು. 

ಆದರೆ ಕಳೆದ ನಾಲ್ಕು ತಿಂಗಳಿಂದ ದಿಟ್ಟ ಹೆಜ್ಜೆ ಇಟ್ಟಿರುವ ನಗರಸಭೆ ಹಾಗೂ ಪೊಲೀಸರು ದಂಧೆಕೋರರ ಉಸಿರುಗಟ್ಟಿಸಿದ್ದಾರೆ. ಹೌದು ಎಷ್ಟರ ಮಟ್ಟಿಗೆ ಅಂದರೇ ಗೋಮಾಂಸ ದಂಧೆ ನಡೆಸಿದರೆ ಅವರ ಮನೆ, ಆಸ್ತಿ, ಕರೆಂಟ್ ವಾಟರ್ ಎಲ್ಲವೂ ಜಪ್ತಿ. 

ಈ ಸಲ ಬಕ್ರೀದ್‌ನಲ್ಲಿ ಗೋಹತ್ಯೆ ಭಾರೀ ಇಳಿಕೆ: ಸಚಿವ ಚೌಹಾಣ್‌

ಎಸ್ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ದಂಧೆಕೋರರ ಎದೆಯಲ್ಲಿ ನಡುಕ ಹುಟ್ಟಿಸಿರುವ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತ ಮಾಡುವ ಮೂಲಕ ಆಸ್ತಿ ಮುಟ್ಟುಗೊಲು ಹಾಕಿದ್ದಾರೆ. ಅಷ್ಟೇ ಅಲ್ಲ ಅವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಪಾಠ ಕಲಿಸಲು ನಿರ್ಧರಿಸಿದ್ದಾರೆ.

ನಗರಸಭೆಯಿಂದ ಮುಂದುವರೆದ ದಾಳಿ‌: ಚಿಕ್ಕಮಗಳೂರು ನಗರದಲ್ಲಿ ಅಕ್ರಮ ಗೋಹತ್ಯೆ ಕೇಂದ್ರಗಳ ಮೇಲೆ ನಗರಸಭೆ ದಾಳಿ ಮಾಡುತ್ತಿದೆ. ಈ ಹಿಂದೆ ಮೂರಕ್ಕೂ ಹೆಚ್ಚು ಅಕ್ರಮ ಗೋಹತ್ಯೆ ಕೇಂದ್ರಗಳ ಮೇಲೆ ಬುಲ್ಡೋಜರ್ ಪ್ರಯೋಗ ಕೂಡ ಮಾಡಿದ್ದರು. ಜೊತೆಗೆ 20ಕ್ಕೂ ಹೆಚ್ಚು ಅಕ್ರಮ ಗೋಹತ್ಯೆ ಮನೆಗಳ ಮೇಲೆ ದಾಳಿ ಮಾಡಿ ಮನೆಯ ಗೋಡೆಗಳಿಗೆ ನೋಟೀಸ್ ಕೂಡ ಅಂಟಿಸಿದ್ದರು. 

ಆದರೂ, ಗೋಹತ್ಯೆ ನಿಲ್ಲಿಸದ ಹಿನ್ನೆಲೆ ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಪೊಲೀಸರು ನಗರದ ತಮಿಳು ಕಾಲೋನಿಯಲ್ಲಿ ಯಶ್ ಪಾಲ್ ಎಂಬುವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಅಕ್ರಮ ಗೋಮಾಂಸವನ್ನ ವಶಪಡಿಸಿಕೊಂಡಿದ್ದಾರೆ. 

ಕಾಯ್ದೆ ಬಂದ್ರೂ ಉಡುಪಿಯಲ್ಲಿ ನಿಲ್ಲದ ಗೋಹತ್ಯೆ, 1 ತಿಂಗ್ಳಲ್ಲೇ 4 ಪ್ರಕರಣಗಳು ಉದಾಹರಣೆ!

ಆದರೆ,  ಮನೆಯ ಮಾಲೀಕ ಯಶ್ ಪಾಲ್ ನಾಪತ್ತೆಯಾಗಿರುವ ಹಿನ್ನೆಲೆ ನಗರಸಭೆ ಅಧ್ಯಕ್ಷರ ಸೂಚನೆ ಮೇರೆಗೆ ಅವರ ಮನೆಯ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಿದ್ದಾರೆ. ಮನೆಯ ನೀರಿನ ಸಂಪರ್ಕವನ್ನ ಕಡಿತಗೊಳಿಸಲು ನೀರಿನ ಸಂಪರ್ಕ ಇರಲಿಲ್ಲ. ಹಾಗಾಗಿ, ವಿದ್ಯುತ್ ಸಂಪರ್ಕವನ್ನಷ್ಟೆ ಕಡಿತಗೊಳಿಸಿದ್ದಾರೆ. 

ನಾಪತ್ತೆಯಾಗಿರುವ ಯಶ್ ಪಾಲ್ ಶರಣಾಗದಿದ್ದರೆ ಮನೆಯನ್ನೇ ನಗರಸಭೆ ಆಸ್ತಿ ಎಂದು ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಒಟ್ಟಿನಲ್ಲಿ ಇಷ್ಟು ವರ್ಷಗಳ ಕಾಲ ಗೋಮಾಂಸ ದಂಧೆಕೋರರು ಬನ್ನಿ ನೋಡೋಣ ನಾವು ನೀವು  ಅಂತಿದ್ರು, ಆದರೆ ಕಾಲ ಬದಲಾದಂತೆ ನಗರ ಸಭೆ ಹಾಗೂ ಅಧಿಕಾರಿಗಳು ದಿಟ್ಟ ಹೆಜ್ಜೆ ಇಟ್ಟು ದಂಧೆಕೋರರ ಮಟ್ಟ ಹಾಕಲು ಎದೆಗಾರಿಕೆ ತೋರಿಸಿರುವುದು ಕಾಫಿನಾಡಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. 

click me!