ರಾಯಚೂರು: ಬೈಕ್‌ಗೆ ಬಸ್ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

Published : Aug 08, 2022, 05:22 PM IST
ರಾಯಚೂರು:  ಬೈಕ್‌ಗೆ ಬಸ್ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

ಸಾರಾಂಶ

Raichur Accident: ಗೊರೇಬಾಳ ಗ್ರಾಮದ ಬಳಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.   

ರಾಯಚೂರು (ಆ. 08):  ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದ ಬಳಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರಿಬ್ಬರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮುಷ್ಟೂರು ಗ್ರಾಮದ ದುರಗಪ್ಪ ತಂ. ಬಸ್ಸಪ್ಪ (42), ಈರಣ್ಣ ತಂ. ಬಸ್ಸಪ್ಪ ಕಬ್ಬೇರ್ (38)  ಎಂದು ಗುರುತಿಸಲಾಗಿದೆ.ಮೃತರು ಶ್ರಾವಣ ಮಾಸದ 2ನೇ ಸೋಮವಾರದ ಅಂಗವಾಗಿ ಸುಕ್ಷೇತ್ರ ಮಾಡಶಿರವಾರ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ಗಂಗಾವತಿ ತಾಲೂಕಿನ ಮುಷ್ಟೂರು ಗ್ರಾಮಕ್ಕೆ ತೆರಳುತ್ತಿರುವಾಗ ಬೈಕ್ ಗೆ ಬಸ್ ಡಿಕ್ಕಿ ಹೊಡೆದು ‌ಇಬ್ಬರು ರಸ್ತೆಯಲ್ಲಿಯೇ ಪ್ರಾಣಬಿಟ್ಟಿದ್ದಾರೆ.

ಲಿಂಗಸೂಗೂರು- ಹೊಸಪೇಟೆ ಕೆ.ಎ.36 F 1153 ಬಸ್ ಸಿಂಧನೂರು ಮಾರ್ಗವಾಗಿ ಹೊಸಪೇಟೆಗೆ ತೆರಳುವ  ಬೈಕ್ ನಲ್ಲಿದ್ದ ಮೃತರು ಬಸ್ಸಿಗೆ ಓವರ್ ಟೇಕ್ ಮಾಡಲು ಹೋಗಿದ್ದ ವೇಳೆ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ. ಸದ್ಯ ಮಾಹಿತಿ ತಿಳಿದು ಸಿಂಧನೂರು ‌ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.  ಮೃತದೇಹಗಳನ್ನು ಸಿಂಧನೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಹುಬ್ಬಳ್ಳಿ: ತಾರೀಹಾಳ ದುರ್ಘಟನೆ; ಮಹಿಳೆ ಸಾವು:  ತಾರಿಹಾಳ ಕೈಗಾರಿಕಾ ಪ್ರದೇಶದ ಆಕ್ಸ್‌ನಿಂದ ಇನೊವೇಷನ್‌ ಪ್ರೈ.ಲಿ. ಕಂಪನಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತೀವ್ರ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾರಿಹಾಳದ ಚನ್ನವ್ವ ಹರಿಹಾಳ (42) ಎಂಬವರು ಭಾನುವಾರ ಮೃತಪಟ್ಟಿದ್ದಾರೆ. ಈ ಮೂಲಕ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ. ಮತ್ತಿಬ್ಬರ ಚಿಕಿತ್ಸೆ ಕಿಮ್ಸ್‌ನಲ್ಲಿ ಮುಂದುವರಿದಿದೆ. 

ಮಳೆ ಅಬ್ಬರದಿಂದ ತತ್ತರಿಸಿರುವ ಮಲೆನಾಡಿಗೆ ಮತ್ತೊಂದು ಶಾಕ್, 48ಗಂಟೆಯಲ್ಲಿ 8 ಅಪಘಾತ!

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಂಪನಿ ಮಾಲೀಕ ಗದಗ ಮೂಲದ ಮುಂಬೈ ಉದ್ಯಮಿ ಅಬ್ದುಲ್‌ ಶೇಖ್‌ ಅವರನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ಕಾರ್ಖಾನೆ ವ್ಯವಸ್ಥಾಪಕ ಮಂಜುನಾಥ ಹರಿಜನ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಕಂಪನಿಯ ಇನ್ನಿಬ್ಬರು ಪಾಟ್ನರ್ಸ್‌ಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹುಬ್ಬಳ್ಳಿ: ಗೂಡ್ಸ್ ವಾಹನಕ್ಕೆ ಡಿಕ್ಕಿ: ಸವಾರ ಸಾವು:  ಗೂಡ್ಸ್ ವಾಹನಕ್ಕೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಘಟನೆ ಶನಿವಾರ ತಡರಾತ್ರಿ ಇಲ್ಲಿನ ಶೆರೇವಾಡ ಗ್ರಾಮದ ಟೋಲ್‌ಗೇಟ್‌ ಬಳಿಯ ರಸ್ತೆಯಲ್ಲಿ ಸಂಭವಿಸಿದೆ. ಕುಂದಗೋಳ ಕಾಳಿದಾಸನಗರದ ಹನಮಂತಪ್ಪ ಸೋಮನ್ನವರ ಮೃತರು. ಶಿರಹಟ್ಟಿಯ ಹಾಲಪ್ಪ ಒಲಿ ಯಾವುದೇ ಮುನ್ಸೂಚನೆ ನೀಡದೆ ಗೂಡ್‌್ಸ ವಾಹನವನ್ನು ರಸ್ತೆ ಮೇಲೆ ನಿಲ್ಲಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!