ಮದ್ರಸಾ, ಆಲಿಘರ್‌ ಮುಸ್ಲಿಂ ವಿವಿ ಸ್ಫೋಟಿಸಲು ಕರೆ: Yati Narsinghanand ವಿರುದ್ಧ ಕೇಸ್‌ ದಾಖಲು

Published : Sep 19, 2022, 12:54 PM IST
ಮದ್ರಸಾ, ಆಲಿಘರ್‌ ಮುಸ್ಲಿಂ ವಿವಿ ಸ್ಫೋಟಿಸಲು ಕರೆ: Yati Narsinghanand ವಿರುದ್ಧ ಕೇಸ್‌ ದಾಖಲು

ಸಾರಾಂಶ

ಮದರಸಾಗಳನ್ನು ಮತ್ತು ಉತ್ತರ ಪ್ರದೇಶದ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸುವಂತೆ ಕರೆ ನೀಡಿದ ಹೇಳಿಕೆಗಾಗಿ ಯತಿ ನರಸಿಂಹಾನಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಯತಿ ನರಸಿಂಹಾನಂದ ಸರಸ್ವತಿ ಅವರು ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ವಿವಾದಾತ್ಮಕ ಭಾಷಣ (Controversial Speech) ಮಾಡುವಲ್ಲಿ ಕುಖ್ಯಾತಿ ಪಡೆದಿರುವ ಯತಿಗಳ ವಿರುದ್ಧ ಮತ್ತೊಂದು ಕೇಸ್‌ (Case) ದಾಖಲಾಗಿದೆ. "ಗನ್ ಪೌಡರ್" (Gun Powder) ಬಳಸಿ ಮದರಸಾಗಳನ್ನು ಮತ್ತು ಉತ್ತರ ಪ್ರದೇಶದ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸುವಂತೆ (Blast) ಕರೆ ನೀಡಿದ ಹೇಳಿಕೆಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾನುವಾರ, ಯತಿ ನರಸಿಂಹಾನಂದ ಅವರು ಆಲಿಘರ್‌ನಲ್ಲಿ ಹಿಂದೂ ಮಹಾಸಭಾದ (Hindu Mahasabha) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಉತ್ತರ ಪ್ರದೇಶ ಸರ್ಕಾರದಿಂದ ಮಾನ್ಯತೆ ಪಡೆಯದ ಮದರಸಾಗಳ ಕುರಿತು ನಡೆಯುತ್ತಿರುವ ಸಮೀಕ್ಷೆಯ ಕುರಿತು ಮಾತನಾಡಿದ ಯತಿ ನರಸಿಂಹಾನಂದ ಅವರು ಮದರಸಾದಂತಹ ಸಂಸ್ಥೆ ಇರಬಾರದು. ಚೀನಾ ಮಾಡುವಂತೆ ಎಲ್ಲಾ ಮದರಸಾಗಳನ್ನು ಗನ್‌ಪೌಡರ್‌ನಿಂದ ಸ್ಫೋಟಿಸಬೇಕು. ಎಲ್ಲಾ ಮದರಸಾಗಳ ವಿದ್ಯಾರ್ಥಿಗಳನ್ನು ಶಿಬಿರಗಳಿಗೆ ಕಳುಹಿಸಬೇಕು, ಇದರಿಂದ ಅವರ ಮೆದುಳಿನಿಂದ ಕುರಾನ್ ಎಂಬ ವೈರಸ್ ಅನ್ನು ತೆಗೆದುಹಾಕಬೇಕು ಎಂದು ಯತಿ ನರಸಿಂಹಾನಂದರು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.

ಮದರಸಾಗಳಂತೆ ಆಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯವನ್ನು (Aligarh Muslim University) (ಎಎಂಯು) ಸಹ ಸ್ಫೋಟಿಸಬೇಕು ಮತ್ತು ಅದರ ವಿದ್ಯಾರ್ಥಿಗಳನ್ನು ಬಂಧನ ಕೇಂದ್ರಗಳಿಗೆ ಕಳುಹಿಸಬೇಕು ಮತ್ತು ಅವರ ಬ್ರೈನ್‌ಗೆ ಚಿಕಿತ್ಸೆ ನೀಡಬೇಕು ಎಂದೂ ಯತಿ ನರಸಿಂಹಾನಂದ ಅವರು ಹೇಳಿದರು. ಇನ್ನು, ಯತಿ ನರಸಿಂಹಾನಂದ ಅವರು ದ್ವೇಷಪೂರಿತ ಭಾಷಣದ ಆರೋಪಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಹರಿದ್ವಾರ ದ್ವೇಷ ಭಾಷಣ (Hate Speech) ಪ್ರಕರಣದಲ್ಲಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಬಳಿಕ ಇವರನ್ನು ಬಿಡುಗಡೆ ಮಾಡಲಾಗಿತ್ತು.

ಇದನ್ನು ಓದಿ: ಮುಸ್ಲಿಂ ವ್ಯಕ್ತಿ ಪಿಎಂ ಆದ್ರೆ ಶೇ.50ರಷ್ಟು ಹಿಂದೂಗಳ ಮತಾಂತರ, ಯತಿ ನರಸಿಂಹಾನಂದರ ವಿವಾದ!

ಇನ್ನೊಂದೆಡೆ, ಮಹಾತ್ಮಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಸಹ ಯತಿ ನರಸಿಂಹಾನಂದ್ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ, ಯತಿ ನರಸಿಂಹಾನಂದರು "ಒಂದು ಕೋಟಿ ಹಿಂದೂಗಳ ಹತ್ಯೆಗೆ ಮಹಾತ್ಮ ಗಾಂಧಿ ಕಾರಣ" ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡುವುದನ್ನು ಕೇಳಬಹುದಾಗಿತ್ತು.

ಇದನ್ನೂ ಓದಿ: Haridwar Hate Speech: ಯತಿ ನರಸಿಂಹಾನಂದರನ್ನೂ ಬಂಧಿಸಿದ ಪೊಲೀಸರು!

ರಾಹುಲ್ ಗಾಂಧಿ ವಿರುದ್ಧವೂ ಯತಿ ನರಸಿಂಹಾನಂದ್ ವಾಗ್ದಾಳಿ
ಇನ್ನು, ಆಲಿಘರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯತಿ ನರಸಿಂಹಾನಂದ್ ಅವರು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) "ತಮಾಷೆ" ಎಂದು ಕರೆದರು. "ರಾಹುಲ್ ಗಾಂಧಿ ಜಿಹಾದಿಗಳೊಂದಿಗೆ (Jihadis) ಇದ್ದಾರೆ, ಅವರು ಉತ್ತರ ಪ್ರದೇಶದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಮತ್ತು ಕೇರಳಕ್ಕೆ ಹೋಗಿ ವಯನಾಡಿನಿಂದ ಸ್ಪರ್ಧಿಸಿದರು" ಎಂದೂ ಹೇಳಿದ್ದಾರೆ. ಹಾಗೂ, "ರಾಹುಲ್ ಗಾಂಧಿ ಭಾರತವನ್ನು ಒಗ್ಗೂಡಿಸಲು ಬಯಸಿದರೆ, ಅವರು ಮಹಾತ್ಮ ಗಾಂಧಿಯವರು ನಿರ್ಮಿಸಿದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೋಗಬೇಕು. ಮೊದಲು ಪಾಕಿಸ್ತಾನ, ಬಾಂಗ್ಲಾದೇಶವನ್ನು ಭಾರತದೊಂದಿಗೆ ಸಂಪರ್ಕಿಸಬೇಕು. ಇದನ್ನು ಮಾಡುವ ಮೂಲಕ ಉಳಿದವರೆಲ್ಲರೂ ಅವರೊಂದಿಗೆ ಸೇರುತ್ತಾರೆ" ಎಂದೂ ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ