ಮಗಳ ನಿಶ್ಚಿತಾರ್ಥದ ಊಟಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಕಡಿದರು!

By Suvarna NewsFirst Published Sep 19, 2022, 11:32 AM IST
Highlights

ಹಸು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದಾಗಲೂ ಕೆಲ ಜನರು ಹಸುವನ್ನು ಹೇಗೆ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಸ್ಟೋರಿ ಉದಾಹರಣೆ.

ಚಿಕ್ಕಮಗಳೂರು, (ಸೆಪ್ಟೆಂಬರ್. 19):  ಹಸುವಿಗೆ ತಾಯಿಯ ಸ್ಥಾನ ನೀಡಲಾಗಿದೆ. ಹಸುವನ್ನು ಹೊಡೆಯುವವನನ್ನು ತಾಯಿಯನ್ನು ಹೊಡೆಯುವ ಅದೇ ಪಾಪದ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಆದ್ರೆ, ಇಲ್ಲೊಂದು ಕುಟುಂಬ ಮಗಳ ನಿಶ್ಚಿತಾರ್ಥದ ಊಟಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಕಡಿದು ವಿಕೃತಿ ಮೆರೆದಿದೆ.

ಹೌದು.. ನಿಶ್ಚಿತಾರ್ಥಕ್ಕೆಂದು ಬರುವ ಬಂಧುಗಳಿಗೆ ಉತ್ತಮ ಊಟದ ಏರ್ಪಾಟು ಮಾಡುವುದು ಸಹಜ. ಒಂದೊಂದು ಕಡೆ ಒಂದೊಂದು ರೀತಿಯ ಆಹಾರವನ್ನು ತಯಾರಿಸುತ್ತಾರೆ. ಆದರೆ ಮನೆಯಲ್ಲಿ ಸಾಕಿಕೊಂಡು ಬಂದ ಹಸುವನ್ನೇ ಕೊಂದು ಊಟ ತಯಾರಿ ಮಾಡಿದಂತಹ ಅಮಾನವೀಯ ಘಟನೆಯೊಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಈಚಿಕೆರೆ ಗ್ರಾಮದ ರೋಷನ್ ಎಂಬುವರ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮದ ಊಟಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಬಲಿ ಕೊಟ್ಟಿದ್ದಾರೆ.  ಮಗಳ ನಿಶ್ಚಿತಾರ್ಥಕ್ಕೆ ಬಂದವರಿಗೆ ಮನೆಯಲ್ಲಿ ಸಾಕಿದ್ದ ಹಸುವಿನ ಮಾಂಸ ಬಡಿಸಲಾಗುತ್ತಿದೆ ಎಂಬ ವಿಷಯ ತಿಳಿದ  ಎನ್.ಆರ್.ಪುರ ಪೊಲೀಸರು ದಾಳಿ ಮಾಡಿದ್ದಾರೆ.

Cover Story : ಬರೀ ಪೇಪರ್ ನಲ್ಲಿ ಉಳಿದ ಗೋಹತ್ಯೆ ನಿಷೇಧ ಕಾಯ್ದೆ?

, ಹಸುವನ್ನ ಕಡಿದು ಮಾಂಸ ಬೇರ್ಪಡಿಸುವಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಅಲ್ಲದೇ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ  ತಲೆಮರೆಸಿಕೊಂಡಿರುವ ಇನ್ನೂ ಮೂವರು ಅರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಈಗಾಗಲೇ ರಾಜ್ಯದಲ್ಲಿ ಜಾರಿಗೊಂಡಿದೆ. ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಪ್ರಕಾರ, ಕರ್ನಾಟಕದಲ್ಲಿ ಯಾವುದೇ ವ್ಯಕ್ತಿ ಜಾನುವಾರ ಹತ್ಯೆ ಮಾಡಲು ಅಥವ ಹತ್ಯೆ ನಡೆಸುವವರಿಗೆ ಮಾರಾಟ ಮಾಡಲು ಅವಕಾಶವಿಲ್ಲ.

ಕಾಯ್ದೆ ಜಾರಿಯ ಪರಿಣಾಮವಾಗಿ ರಾಜ್ಯ ಹಾಗೂ ಇತರ ರಾಜ್ಯಕ್ಕೆ ಜಾನುವಾರ ಸಾಗಾಣಿಕೆಯ ಮೇಲೂ ನಿರ್ಬಂಧ ಬಿದ್ದಿದೆ. ಆದರೆ ಕೃಷಿ ಹಾಗೂ ಪಶುಸಂಗೋಪನೆ ಕಾರಣಕ್ಕಾಗಿ ಸಾಗಣಿಕೆ ಮಾಡಲು ಅವಕಾಶ ನೀಡಲಾಗಿದೆ. ಹೀಗಿದ್ದರೂ ಅಕ್ರಮ ಗೋಸಾಗಾಟ ಹಾಗೂ ಹತ್ಯೆ ಪ್ರಕರಣಳು ರಾಜ್ಯದಲ್ಲಿ ನಡೆಯುತ್ತಿರುವುದು ವಿಪರ್ಯಾಸ.

click me!