Energy Drink: ಯಾದಗಿರಿಯಲ್ಲಿ ಆಘಾತಕಾರಿ ಘಟನೆ: ಎನರ್ಜಿ ಡ್ರಿಂಕ್ ಚಟಕ್ಕೆ 18 ವರ್ಷದ ಯುವಕ ಬಲಿ?

Published : Jun 13, 2026, 05:47 PM IST
Youth Death News

ಸಾರಾಂಶ

Energy Drink: ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿ 18 ವರ್ಷದ ಯುವಕನ ಸಾವಿನ ಬಳಿಕ ಎನರ್ಜಿ ಡ್ರಿಂಕ್ ಸೇವನೆ ಕುರಿತು ಚರ್ಚೆ ಜೋರಾಗಿದೆ. ಅತಿಯಾದ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.

ಯಾದಗಿರಿ (ಜೂ.13): ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಎನರ್ಜಿ ಡ್ರಿಂಕ್‌ಗಳ ಅತಿಯಾದ ಸೇವನೆಯಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೃತ ಯುವಕನನ್ನು ಬಾಲಪ್ಪ (18) ಎಂದು ಗುರುತಿಸಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಪ್ಪಗೆ (Sting) ಎನರ್ಜಿ ಡ್ರಿಂಕ್‌ಗಳ ಸೇವನೆಯ ಚಟ ಬೆಳೆದಿತ್ತು ಎನ್ನಲಾಗಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರು ಎಷ್ಟೇ ಮನವಿ ಮಾಡಿದರೂ ಆತ ಈ ಚಟವನ್ನು ಬಿಡಲು ಸಿದ್ಧನಾಗಿರಲಿಲ್ಲ ಎಂದು ತಿಳಿದುಬಂದಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಬಾಲಪ್ಪ ಪ್ರತಿದಿನ ಮೂರುರಿಂದ ನಾಲ್ಕು ಬಾಟಲಿ ಎನರ್ಜಿ ಡ್ರಿಂಕ್ ಸೇವಿಸುತ್ತಿದ್ದನಂತೆ. ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಿಡ್ನಿ ವೈಫಲ್ಯ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸಾವಿಗೆ ನಿಖರ ಕಾರಣ ವೈದ್ಯಕೀಯ ವರದಿ ಬಳಿಕವೇ ಸ್ಪಷ್ಟವಾಗಬೇಕಿದೆ.

ಸಾರ್ವಜನಿಕರಿಗೆ ಕರೆ

ಚಿಕಿತ್ಸೆ ಫಲಕಾರಿಯಾಗದೆ ಬಾಲಪ್ಪ ಕೊನೆಯುಸಿರೆಳೆದಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ನಾರಾಯಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಬಳಿಕ ಗ್ರಾಮದಲ್ಲಿ ಜಾಗೃತಿ ಮೂಡಿದ್ದು, ಯುವಕರು ಹಾಗೂ ಗ್ರಾಮಸ್ಥರು ಎನರ್ಜಿ ಡ್ರಿಂಕ್‌ಗಳ ಅತಿಯಾದ ಸೇವನೆಯ ವಿರುದ್ಧ ಶಪಥ ಮಾಡಿದ್ದಾರೆ. ಕೆಲ ಯುವಕರು ಸಂಕೇತಾತ್ಮಕವಾಗಿ ಎನರ್ಜಿ ಡ್ರಿಂಕ್‌ಗಳನ್ನು ರಸ್ತೆಗೆ ಸುರಿದು, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಈ ಘಟನೆ ಯುವಜನರಲ್ಲಿ ಹೆಚ್ಚುತ್ತಿರುವ ಎನರ್ಜಿ ಡ್ರಿಂಕ್ ಚಟದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಆರೋಗ್ಯ ತಜ್ಞರ ಸಲಹೆಯಂತೆ ಯಾವುದೇ ಪಾನೀಯವನ್ನು ಮಿತಿಮೀರಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂಬ ಎಚ್ಚರಿಕೆಯೂ ಕೇಳಿಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Darshan-Pavithra Gowda: ದರ್ಶನ್ ಕೈಯಲ್ಲಿ ಪುಸ್ತಕ, ಪವಿತ್ರಾ ಕೈಯಲ್ಲಿ ಪೆನ್ನು; ಜೈಲಿನಲ್ಲೇ ಶುರುವಾಯ್ತು ಹೊಸ ಕಥೆ 'ಪವಿತ್ರ ದರ್ಶನ'..!
Darshan-Pavithra Gowda: ಮದುವೆ ವಾರ್ಷಿಕೋತ್ಸವದಂದೇ ದರ್ಶನ್ ಬ್ಯಾಡ್ ಟೈಂ ಶುರು? ಆ ಕಾರಣಕ್ಕೇ ದರ್ಸನ್ ಪವಿತ್ರಾ ಗೌಡ ಹಿಂದೆ ಬೀಳಬೇಕಾಯ್ತಾ?