ಪಿಎಸ್‌ಐ ಅನುಮಾನಾಸ್ಪದ ಸಾವು; ಯಾದಗಿರಿ ಶಾಸಕ, ಪುತ್ರನ ವಿರುದ್ಧ ಕುಟುಂಬ, ಸಂಘಟನೆಗಳು ಗಂಭೀರ ಆರೋಪ!

By Ravi Janekal  |  First Published Aug 3, 2024, 10:23 AM IST

ಸೈಬರ್ ಕ್ರೈಂ ಠಾಣೆಯ ಪಿಎಸ್‌ಐ ಪರಶುರಾಮ(34) ಅನುಮಾನಸ್ಪಾದವಾಗಿ ಸಾವನ್ನಪ್ಪಿದ ಘಟನೆ ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್‌, ಪುತ್ರಅವರ ಪುತ್ರ ಪಂಪನಗೌಡ  ಕಾರಣ ಎಂದು ಸಂಘಟನೆಗಳು, ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.


ಯಾದಗಿರಿ (ಅ.2): ಸೈಬರ್ ಕ್ರೈಂ ಠಾಣೆಯ ಪಿಎಸ್‌ಐ ಪರಶುರಾಮ(34) ಅನುಮಾನಸ್ಪಾದವಾಗಿ ಸಾವನ್ನಪ್ಪಿದ ಘಟನೆ ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್‌, ಪುತ್ರಅವರ ಪುತ್ರ ಪಂಪನಗೌಡ  ಕಾರಣ ಎಂದು ಸಂಘಟನೆಗಳು, ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಯಾದಗಿರಿ ನಗರ ಠಾಣೆಯಿಂದ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆಯಾಗಿದ್ದ ಪರಶುರಾಮ. ವರ್ಗಾವಣೆಯಾದ ಎರಡೇ ದಿನದಲ್ಲಿ ನಿನ್ನೆ ಮನೆಯಲ್ಲಿ ಸಾವನ್ನಪ್ಪಿರುವ ಪಿಎಸ್‌ಐ. ಕಳೆದ ಮೂರು ವರ್ಷಗಳಿಂದ ಯಾದಗಿರಿ ನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪರಶುರಾಮ. ಪೋಸ್ಟಿಂಗ್‌ಗಾಗಿ ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರಡ್ಡಿ ಪಾಟೀಲ್ ಲಕ್ಷ ಲಕ್ಷ ಬೇಡಿಕೆ ಇಟ್ಟಿದ್ದರು ಇದರಿಂದ ಒತ್ತಡಕ್ಕೊಳಗಾಗಿ ಮೃತರಾಗಿದ್ದಾರೆ. ಈ ಸಾವಿಗೆ ಯಾದಗಿರಿ ಶಾಸಕರೇ ಕಾರಣ ಎಂದು ಸಂಘಟನೆಗಳು, ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. 

Tap to resize

Latest Videos

ಸಿಎಂ ಸಿದ್ದರಾಮಯ್ಯ ದಲಿತರ ಚರ್ಮದಿಂದ ಚಪ್ಪಲಿ ಮಾಡ್ಕೊಂಡು ಮೆರೆಯುತ್ತಿದ್ದಾರೆ: ಛಲವಾದಿ ನಾರಾಯಣಸ್ವಾಮಿ

ಮೃತಪಟ್ಟು 15 ಗಂಟೆಯಾದ್ರೂ ಕೇಸ್ ದಾಖಲಿಸಿಕೊಳ್ಳದ ಪೊಲೀಸರು!

ಪಿಎಸ್‌ಐ ಪರಶುರಾಮ ಅನುಮಾನಾಸ್ಪದವಾಗಿ ಮೃತಪಟ್ಟು 15 ಗಂಟೆಯೇ ಕಳೆದರೂ ಕೇಸ್ ದಾಖಲಿಸಿಕೊಳ್ಳದ ಪೊಲೀಸರು. ಪೊಲೀಸರ ನಡೆಯೇ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ಯಾಕೆ ಕೇಸ್ ದಾಖಲಿಸಿಕೊಳ್ತಿಲ್ಲ? ಕೇಸ್ ದಾಖಲಿಸದಿರಲು ಯಾರ ಒತ್ತಡ ಇದೆ? ಪೊಲೀಸರ ವಿಳಂಬ ನೀತಿಗೆ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆಗೆ ಮುಂದಾದ ಸಂಘಟನೆಗಳು. ಯಿಮ್ಸ್ ಆಸ್ಪತ್ರೆ ಎದುರಿರುವ ರಾಷ್ಟ್ರೀಯ ಹೆದ್ದಾರಿ 150 ತಡೆದು ಪ್ರತಿಭಟನೆ. ಪ್ರತಿಭಟನೆಯಲ್ಲಿ ಪಿಎಸ್‌ಐ ಪತ್ನಿ ಶ್ವೇತಾ, ಮಗ ಅರುಣ್, ಮಾವ, ತಂದೆ ಭಾಗಿಯಾಗಿದ್ದಾರೆ.

ಭ್ರಷ್ಟಾಚಾರದಲ್ಲಿ ಬಿಜೆಪಿ ಎತ್ತಿದ ಕೈ, ಮುಡಾದಲ್ಲಿ ಹಗರಣ‌ ಮಾಡಿದ್ದೇ ಅವರು: ಸಚಿವ ದರ್ಶನಾಪುರ

ನನ್ನ ಗಂಡನ ಸಾವಿಗೆ ನ್ಯಾಯ ಬೇಕು: ಪತ್ನಿ ಕಣ್ಣೀರು

ಪ್ರತಿಭಟನೆಯಲ್ಲಿ ಭಾಗಿಯಾದ ಪಿಎಸ್‌ಐ ಪರಶುರಾಮ ಪತ್ನಿ ಶ್ವೇತಾ ಪ್ರತಿಭಟನೆಯಲ್ಲಿ ಭಾಗಿಯಾಗಿ ಗಂಡನ ಸಾವಿಗೆ ನ್ಯಾಯ ಒದಗಿಸುವಂತೆ ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಶ್ವೇತಾ, 'ಶಾಸಕ ಚೆನ್ನಾರೆಡ್ಡಿ ಪಾಟೀಲ್, ಅವರ ಪುತ್ರ ಪಂಪನಗೌಡ ತಪ್ಪು ಮಾಡಿದ್ದಾರೆ ಇದು ಇಡೀ ಯಾದಗಿರಿ ಜನರಿಗೆ ಗೊತ್ತಿದೆ. ಗಂಡನ ಪೋಸ್ಟಿಂಗ್‌ಗಾಗಿ ಲಕ್ಷಗಟ್ಟಲೇ ದುಡ್ಡು ಕೇಳಿದ್ದಾರೆ. ದುಡ್ಡು ಕೊಡದ್ದಕ್ಕೆ ಪೋಸ್ಟಿಂಗ್ ಕೊಟ್ಟಿಲ್ಲ. ನನಗು ಮಗು ಇದೆ. ಈಗ ಇವರ ಕಿರುಕುಳಕ್ಕೆ ಸತ್ತಿದ್ದಾನೆ. ನಾನು ಹೇಗೆ ಜೀವನ ಮಾಡಬೇಕು? ಪೊಲೀಸ್ ಇಲಾಖೆಯಲ್ಲೇ ಇಷ್ಟು ಮೋಸ ಆದ್ರೂ ಎಲ್ಲರೂ ಎಂಎಲ್‌ಎಗೆ ಸಪೋರ್ಟ್ ಮಾಡ್ತಿದ್ದಾರೆ. ಇದು ನನಗೆ ತುಂಬಾ ನೋವು ಉಂಟುಮಾಡಿದೆ. ಇವತ್ತು ನನ್ನ ಗಂಡ, ನಾಳೆ ಇನ್ನೊಬ್ಬರು. ದಯವಿಟ್ಟು ಶಾಸಕ ಹಾಗೂ ಪುತ್ರನ ವಿರುದ್ಧ ಕೇಸ್ ದಾಖಲಿಸಿ. ಕೇಸ್ ದಾಖಲಿಸುವವರೆಗೆ ನಾನು ಅನ್ನ ನೀರು ಮುಟ್ಟುವುದಿಲ್ಲ ಎಂದ ಮೃತ ಪಿಎಸ್‌ಐ ಪತ್ನಿ ಆಗ್ರಹಿಸಿದರು.

click me!