ತೀವ್ರ ಹಲ್ಲೆಯಿಂದ ಸತ್ತಿದ್ದಾನೆಂದು ಮಣ್ಣಿನಡಿ ಹೂತು ಹಾಕಿದ ವ್ಯಕ್ತಿಯನ್ನು ಬದುಕಿಸಿದ ಬೀದಿ ನಾಯಿ!

By Chethan Kumar  |  First Published Aug 2, 2024, 7:31 PM IST

ಬೀದಿ ನಾಯಿ ಕಚ್ಚಿ ಸಾವು, ಬೀದಿ ನಾಯಿ ದಾಳಿಗೆ ತೀವ್ರ ಗಾಯಗೊಂಡ ಘಟನೆಗಳು ವರಿದಿಯಾುತ್ತಲೇ ಇದೆ. ಆದರೆ ಇದೀಗ ಬೀದಿ ನಾಯಿಗಳು ಯುವಕನನ್ನು ಬದುಕಿಸಿದ ಘಟನೆ ವರದಿಯಾಗಿದೆ. ಮಣ್ಣಿನಡಿ ಹೂತು ಹಾಕಿದ್ದ ಯುವಕನ ಬೀದಿ ನಾಯಿ ಬದುಕಿಸಿದ್ದು ಹೇಗೆ?


ಆಗ್ರ(ಆ.02)  ಜಮೀನು ವಿವಾದಕ್ಕೆ ಅಪ್ಪ ಮಕ್ಕಳು, ಸಹೋದರರ ನಡುವೆ ಕೊಲೆಗಳೇ ನಡೆದು ಹೋಗಿದೆ. ಇದೀಗ ಇದೇ ರೀತಿಯ ಘಟನೆ ಇದೀಗ ಹಲವು ತಿರುವುಗಳನ್ನು ಪಡೆದುಕೊಂಡು ಅಚ್ಚರಿಗೆ ಕಾರಣವಾಗಿದೆ.  ಉತ್ತರ ಪ್ರದೇಶದ ಆಗ್ರಾದ ಯುವಕ ರೂಪ್ ಕಿಶೋರ್ ಮೇಲೆ ನಾಲ್ವರ ಗುಂಪು ಭೂ ವಿವಾದಕ್ಕೆ ತೀವ್ರವಾಗಿ ಹಲ್ಲೆ ಮಾಡಿದೆ. ಅಸ್ವಸ್ಥಗೊಂಡಿದ್ದ ರೂಪ್ ಕಿಶೋರ್ ಪ್ರಜ್ಞಾಹೀನನಾಗಿ ಕುಸಿದು ಬಿದ್ದಿದ್ದಾನೆ. ಕಿಶೋರ್ ಮೃತಪಟ್ಟಿದ್ದಾನೆ ಎಂದು ಆರೋಪಿಗಳು ದೂರದ ಜಮೀನಿನಲ್ಲಿ ಹೂತು ಹಾಕಿದೆ. ಆದರೆ ಬೀದಿ ನಾಯಿಗಳು ರೂಪ್ ಕಿಶೋರ್‌ಗೆ ಮರು ಜನ್ಮ ನೀಡಿದೆ.

ರೂಪ್ ಕಿಶೋರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಘಟನೆಯನ್ನು ಉಲ್ಲೇಖಿಸಿದ್ದಾನೆ. ಈ ದೂರಿನಲ್ಲಿರುವಂತೆ, ರೂಪ್ ಕಿಶೋರ್ ಭೂ ವಿವಾದದಿಂದ ಟಾರ್ಗೆಟ್ ಆಗಿದ್ದ. ಜಮೀನು ಬಿಟ್ಟುಕೊಡಲು ರೂಪ್ ಕಿಶೋರ್ ನಿರಾಕರಿಸಿದ್ದ. ಹೀಗಾಗಿ ಈತನ ಮನೆಗೆ ತೆರಳಿದ ನಾಲ್ವರ ಗುಂಪು, ರೂಪ್ ಕಿಶೋರ್‌ನನ್ನು ಹೊರಗಡೆ ಕರೆದಿದ್ದಾರೆ. ಹೊರಗಡೆ ಬಂದ ಕಿಶೋರ್‌ನನ್ನು ಕರೆದುಕೊಂಡು ಹೋಗಿದ್ದಾರೆ.

Latest Videos

undefined

ಸರ್ಕಾರಿ ದಾಖಲೆಗಳಲ್ಲಿ ಮೃತ, ಬದುಕಿದ್ದೇನೆಂದು ಸಾಬೀತುಪಡಿಸಲು ಈತ ಮಾಡಿದ ಕೆಲಸಕ್ಕೆ ಪೊಲೀಸರೇ ಶಾಕ್

ದೂರದಲ್ಲಿ ನಿರ್ಜನ ಜಮೀನಿಗೆ ಕರೆದುಕೊಂಡ ಹೋದ ಗುಂಪು ತೀವ್ರವಾಗಿ ಥಳಿಸಿದೆ. ಯುವಕರ ಗುಂಪಿನ ದಾಳಿಯಂದ ಅಸ್ವಸ್ಥಗೊಂಡ ರೂಪ್ ಕಿಶೋರ್ ಪ್ರಜ್ಞಾಹೀನನಾಗಿ ಕುಸಿದು ಬಿದಿದ್ದಾನೆ. ಇತ್ತ ನಾಲ್ವರು ಯುವಕರ ಗುಂಪು ಕೆಲ ಹೊತ್ತು ನೋಡಿದ್ದಾರೆ. ಆದರೆ ರೂಪ್ ಕಿಶೋರ್ ದೇಹ ಸ್ಪಂದಿಸುತ್ತಿರಲಿಲ್ಲ. ಈತನ ಸತ್ತಿದ್ದಾನೆಂದು ಈ ಗುಂಪು ಜಮೀನಿನಲ್ಲಿ ಇದ್ದ ಸಣ್ಣ ಗುಂಡಿಯನ್ನು ಮತ್ತಷ್ಟು ತೋಡಿ ರೂಪ್ ಕಿಶೋರ್‌ನನ್ನು ಹೂತು ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಥಳಿಸಿ ರಕ್ತ ಚೆಲ್ಲಿದ ಕಾರಣ ಬೀದಿ ನಾಯಿಗಳು ಮಣ್ಣು ಮುಚ್ಚಿದ್ದ ಗುಂಡಿಯನ್ನೋ ತೋಡಿದೆ. ಕೆಲ ನಾಯಿಗಳು ಕೈ ಕಾಲುಗಳಿಂದ ಮಣ್ಣು ತೋಡಿದೆ. ಬಳಿಕ ಕಾಲಿನ ಭಾಗಕ್ಕೆ ಕಚ್ಚಿದೆ. ಈ ವೇಳೆ ಪ್ರಜ್ಞಾಹೀನನಾಗಿದ್ದ ರೂಪ್ ಕಿಶೋರ್‌ಗೆ ಎಚ್ಚರವಾಗಿದೆ. ಸಾವರಿಸಿಕೊಂಡು ಎದ್ದಿದ್ದಾನೆ. ಬಳಿಕ ತೆವಳುತ್ತಾ, ಕೆಲ ದೂರು ಸಾಗಿದ್ದಾನೆ. ಆ ವೇಳೆ ಗ್ರಾಮಸ್ಥರು ಈತನ ಗಮನಿಸಿ ಆಸ್ಪತ್ರೆ ದಾಖಲಿಸಿದ್ದಾರೆ. 

24 ವರ್ಷದ ರೂಪ್ ಕಿಶೋರ್ ತಾಯಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮಗನನ್ನು ಕಿಡ್ನಾಪ್ ಮಾಡಿ ಥಳಿಸಿದ್ದಾರೆ. ಬಳಿಕ ಸತ್ತಿದ್ದಾನೆಂದು ಮಣ್ಣಿನಡಿ ಹೂತು ಹಾಕಿದ್ದಾರೆ. ಬೀದಿ ನಾಯಿಗಳಿಂದ ಮಗ ಬದುಕಿದ್ದಾನೆ. ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು. ಇಷ್ಟೇ ಅಲ್ಲ ನಮಗೆ ಜೀವ ಭಯ ಇದೆ. ರಕ್ಷಣೆ ನೀಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

ನಾನಿನ್ನು ಬದುಕಿದ್ದೇನೆ, ಎಸ್‌ಸಿ ಎಸ್‌ಟಿ ಮೀಸಲಾತಿ ಮುಸ್ಲಿಮರಿಗೆ ನೀಡುವ ಕಾಂಗ್ರೆಸ್ ಅಜೆಂಡಾ ವಿರುದ್ಧ ಮೋದಿ ಕಿಡಿ!
 

click me!