4 ತಿಂಗಳ ಹಿಂದೆ ನಟರಾಜ್ ಅವರ ಪತ್ನಿ ಲಲಿತಮ್ಮ ಮೃತಪಟ್ಟಿದ್ದರು. ಆದರೆ ತಾಯಿ ಮೃತಪಟ್ಟ ಕೊರಗಿನಿಂದ ನವ್ಯ ಹಾಗೂ ಪ್ರಭು ಹೊರ ಬಂದಿರಲಿಲ್ಲ. ತಾಯಿ ಮೃತಪಟ್ಟಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಗುರುವಾರ ರಾತ್ರಿ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಮಾರ್ಗವಾಗಿ ಚಿಂತಾಮಣಿ ಮೂಲಕ ಕೋಲಾರಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲಿಗೆ ಇಬ್ಬರೂ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿಡ್ಲಘಟ್ಟ(ಆ.03): ತಾಯಿ ನಿಧನರಾದ ಕೊರಗಿನಿಂದ ಹೊರಬರಲಾಗದೆ ಯುವತಿ ಹಾಗೂ ಆಕೆಯ ಕಿರಿಯ ಸಹೋದರ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಪಟ್ಟಣದ ರೈಲು ನಿಲ್ದಾಣದಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ಗುರುವಾರ ರಾತ್ರಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಇಲ್ಲಿಯ ಪ್ರೇಮ ನಗರದ ನಿವಾಸಿ ನಟರಾಜ್ ಎಂಬುವವರ ಪುತ್ರಿ ಶಿಲ್ಪ ಅಲಿಯಾಸ್ ನವ್ಯ (23) ಹಾಗೂ ಆಕೆಯ ಸಹೋದರ ಪ್ರಭು (20) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು ಶುಕ್ರವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್: ಚಿಕ್ಕಪ್ಪನಿಂದಲೇ ಅಣ್ಣನ ಮಗನ ಬರ್ಬರ ಕೊಲೆ!
4 ತಿಂಗಳ ಹಿಂದೆ ನಟರಾಜ್ ಅವರ ಪತ್ನಿ ಲಲಿತಮ್ಮ ಮೃತಪಟ್ಟಿದ್ದರು. ಆದರೆ ತಾಯಿ ಮೃತಪಟ್ಟ ಕೊರಗಿನಿಂದ ನವ್ಯ ಹಾಗೂ ಪ್ರಭು ಹೊರ ಬಂದಿರಲಿಲ್ಲ. ತಾಯಿ ಮೃತಪಟ್ಟಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಗುರುವಾರ ರಾತ್ರಿ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಮಾರ್ಗವಾಗಿ ಚಿಂತಾಮಣಿ ಮೂಲಕ ಕೋಲಾರಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲಿಗೆ ಇಬ್ಬರೂ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಬೆಂಗಳೂರಿನ ಬೈಯಪ್ಪನ ಹಳ್ಳಿ ರೈಲ್ವೆ ಠಾಣೆ ಪೊಲೀಸರು ಪರಿಶೀಲಿಸಿದ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿಗೆ ಸಾಗಿಸಿದರು.