ಬಟ್ಟ ಬಯಲಿನಲ್ಲಿ ಮಹಿಳೆಯ ಸೀರೆ ಹಿಡಿದೆಳೆದ ಪರಪುರುಷ: ಮನನೊಂದು ಆತ್ಮಹತ್ಯೆಗೆ ಶರಣಾದ ಗೃಹಿಣಿ

By Sathish Kumar KH  |  First Published Oct 29, 2023, 4:45 PM IST

ಮನೆಯ ಮುಂದೆ ನೀರು ಹರಿಸುವ ವಿಚಾರಕ್ಕೆ ನಡೆದ ಜಗಳಲ್ಲಿ ಎಲ್ಲರ ಮುಂದೆಯೇ ಪರ ಪುರುಷನೊಬ್ಬ ಸೀರೆ ಹಿಡಿದು ಎಳೆದಿದ್ದಕ್ಕೆ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 


ಯಾದಗಿರಿ (ಅ.29): ಮನೆಯ ಮುಂದೆ ನೀರನ್ನು ಹರಿಸುವ ವಿಚಾರಕ್ಕೆ ಅಕ್ಕ ಪಕ್ಕದ ಮನೆಯವರ ನಡುವೆ ಜಗಳ ನಡೆದಿದೆ. ಈ ವೇಳೆ ಪರ ಪುರುಷನೊಬ್ಬ ತನ್ನ ಸೀರೆಯನ್ನು ಹಿಡಿದು ಎಳೆದಿದ್ದರಿಂದ ಮನನೊಂದ ಗೃಹಿಣಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವ್ಯಕ್ತಿಯೊಬ್ಬ ಮಹಿಳೆಯ ಸೀರೆ ಹಿಡಿದು ಏಳೆದಾಡಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಚಕನೂರ್ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರು ಹಾಗೂ ಮಹಿಳೆಯ ಮನೆಯವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಶವವನ್ನು ಯಾದಗಿರಿ ಜಿಲ್ಲೆಯ ಹುಣಸಗಿ ಪೊಲೀಸ್ ಠಾಣೆಯ ಮುಂದೆ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು, ಸೀರೆ ಎಳೆದ ವ್ಯಕ್ತಿಯನ್ನು ಬಂಧನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Latest Videos

undefined

ಹಾಡಹಗಲೇ ಪೊಲೀಸ್‌ ಮನೆಗೆ ಕನ್ನ ಹಾಕಲು ಬಂದ ಕಳ್ಳರು, ತಪ್ಪಿಸಿಕೊಂಡು ಹೋಗಲಾಗದೇ ಜೈಲು ಸೇರಿದ್ರು

ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವು: ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ವಿಜಯಲಕ್ಷ್ಮೀ (30) ಆಗಿದ್ದಾಳೆ. ಕುಡಿಯುವ ನೀರಿಗಾಗಿ ಜಗಳ ಮಾಡಿದ ಘಟನೆ ಕಳೆದ ಎಂಟು ದಿನಗಳ ಹಿಂದೆ (ಅ.21ರಂದು) ನಡೆದಿದೆ.  ಇದೇ ದಿನ ಸಂಜೆ ವೇಳೆ ಗೃಹಿಣಿ ವಿಜಯಲಕ್ಷ್ಮೀ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿರಂತರ ಚಿಕಿತ್ಸೆ ನೀಡಿದಾಗ್ಯೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಗಿನ ಜಾವ ವಿಜಯಲಕ್ಷ್ಮೀ ಮೃತಪಟ್ಟಿದ್ದಾಳೆ. ಇನ್ನು ಶವವನ್ನು ಪೊಲೀಸ್ ಠಾಣೆ ಮುಂದಿಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದು, ಪೊಲೀಸರು ಮನವೊಲಿಕೆ ಯತ್ನ ಮುಂದುವರೆಸಿದ್ದಾರೆ.

ಕಿಲ್ಲರ್ ಬಿಎಂಟಿಸಿಗೆ ಇಬ್ಬರು ಬಲಿ, ಹೆಂಡತಿ ಸೀಮಂತ ಸಂಭ್ರಮದಲ್ಲಿದ್ದ ಗಂಡನ ಬಲಿ ಪಡೆದ ಬಸ್‌!

ಕಸ ಸಂಗ್ರಹ, ನೀರು ಹರಿಸುವುದಕ್ಕೆ ಜಗಳ: ಅಕ್ಕ ಪಕ್ಕದ ಮನೆಯವರಿಗೆ ಆಗಾಗ್ಗೆ ಕಸ ಗುಡಿಸುವುದು, ಕೊಳಚೆ ನೀರು ಹರಿಸುವ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಮನೆ ಮುಂದೆ ನೀರು ಬಿಟ್ಟ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ದೊಡ್ಡ ಜಗಳ ಆಗಿತ್ತು. ಆ ಜಗಳದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಸೇರೆ ಹಿಡಿದು ಎಳೆದಾಡಿದ್ದಾನಂತೆ. ಸೀರೆ ಹಿಡಿದು ಎಳೆದಾಡಿದ್ದಕ್ಕೆ ಮನನೊಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡು ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಇನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದವರನ್ನ ಬಂಧಿಸುವಂತೆ ಆಗ್ರಹಿಸಿ ಮಹಿಳೆ ಕುಟುಂಬಸ್ಥರ ಪ್ರತಿಭಟನೆ ಮಾಡುತ್ತಿದ್ದಾರೆ. ಕಚಕನೂರ್ ಗ್ರಾಮದ ಆರೋಪಿಗಳಾದ ಇಂದ್ರಮ್ಮ, ಹಣಮಂತರಾಯ, ಪುಷ್ಪಾ ಹಾಗೂ ಶಶಿಕಲಾ ಅವರನ್ನ ಬಂಧಿಸುವಂತೆ ಆಗ್ರಹ ಮಾಡುತ್ತಿದ್ದಾರೆ.

click me!