ಕೊಡಗಿನಲ್ಲಿ ಕಾರು- ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ: ಹಸುಗೂಸು ಸೇರಿ ಮಂಡ್ಯ ಮೂಲದ ಆರು ಮಂದಿ ಸಾವು

By Sathish Kumar KH  |  First Published Apr 14, 2023, 3:38 PM IST

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ದರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. 


ಕೊಡಗು/ ಸುಳ್ಯ (ಏ.14): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ದರ್ಘಟನೆಯಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯ 6 ಮಂದಿ ಸಾವನ್ನಪ್ಪಿದ್ದಾರೆ. 

ಕೊಡಗು ಜಿಲ್ಲೆಯ ಸಂಪಾಜೆ ಪೆಟ್ರೋಲ್ ಬಂಕ್ ಬಳಿ‌ ಇಂದು ಮಧ್ಯಾಹ್ನದ ವೇಳೆ ಕಾರು ಹಾಗೂ KSRTC ಬಸ್ ನಡುವೆ ಅಪಘಾತ ಸಂಭವಿಸಿದೆ. ಇನ್ನು ಎರಡವೂ ವಾಹನಗಳು ತೀವ್ರ ವೇಗವಾಗಿ ಬರುತ್ತಿದ್ದರಿಂದ ಅಪಘಾತದಿಂದ ಕಾರು ಸಂಪುರ್ಣ ನಜ್ಜುಗುಜ್ಜಾಗಿದೆ. ಇನ್ನು ಕಾರಿನಲ್ಲಿ ಒಟ್ಟು 8 ಜನರು ಪ್ರಯಾಣ ಮಾಡುತ್ತಿದ್ದು, ಅದರಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದಂತೆ ಐವರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಉಳಿದಂತೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಆದರೆ, ಮೃತರ ಹೆಸರು ಮತ್ತು ಯಾವ ಉದ್ದೇಶಕ್ಕೆ ಪ್ರಯಾಣ ಮಾಡುತ್ತಿದ್ದರು ಎಂಬುದು ತಿಳಿದುಬಂದಿಲ್ಲ.

Latest Videos

undefined

ಕಾಲೇಜು ಬಳಿ ನಿಲ್ಲಿಸದ ಬಸ್ ಡ್ರೈವರ್: ಚಲಿಸುತ್ತಿದ್ದ ಬಸ್‌ನಿಂದ ಇಳಿದು ವಿದ್ಯಾರ್ಥಿನಿ ಸಾವು!

ಮಂಡ್ಯ ಜಿಲ್ಲೆಯ ಆರು ಜನರು ಸಾವು: ಕಾರು ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು. ಕೆಎಎಸ್‌ಆರ್‌ಟಿಸಿ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಿಂದ ಕಾರಿನ ಮುಂಭಾಗ ಮತ್ತು ಮೇಲ್ಭಾಗ ಪೂರ್ಣವಾಗಿ ನಜ್ಜುಗುಜ್ಜಾಗಿ ಹೋಗಿದೆ. ಕಾರಿನಲ್ಲಿದ್ದವರು ಮೂಲತಃ ಮಂಡ್ಯ ಜಿಲ್ಲೆಯವರು ಆಗಿದ್ದು, ಒಟ್ಟು ಆರು ಮಂದಿ ಸಾವನ್ನಪ್ಪಿದರೆ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. 

ಮಳವಳ್ಳಿ ಭೀಮನಹಳ್ಳಿ ಗ್ರಾಮದವರು: ಈ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. ಇನ್ನು ಮೃತರನ್ನು ಭೀಮನಹಳ್ಳಿಯ ಮಹದೇವ, ಶೀಲಾ, ಎಸ್‌ಎಸ್‌ ಗೌಡ, ಜಿಎನ್.ಗೌಡ ಮೃತರು ಎಂದು ತಿಳಿದುಬಂದಿದೆ. ಮೃತ ಮಕ್ಕಳಲ್ಲಿ ಒಂದು ಮಗು 3 ವರ್ಷದ್ದು ಹಾಗೂ ಇನ್ನೊಂದು ಮಗು 6 ತಿಂಗಳ ಹಸುಗೂಸು ಎಂದು ತಿಳಿದುಬಂದಿದೆ. ಇನ್ನು ತೀವ್ರ ಗಾಯಗೊಂಡ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರನ್ನೂ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಹೂವಿನ ಹಡಗಲಿಯಲ್ಲಿ ಬಸ್‌ನಿಂದ ಬಿದ್ದು ವಿದ್ಯಾರ್ಥಿನಿ ಸಾವು:  ಬಸ್ಸಿನಿಂದ ಇಳಿಯುವಾಗ ಜಾರಿ ಬಿದ್ದು ತೀವ್ರ ಗಾಯಗೊಂಡಿದ್ದ ತಾಲೂಕಿನ ಹುಲಿಗುಡ್ಡದ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾಳೆ. ಶ್ವೇತಾ ಎಲ್‌. ಶಾಂತಪ್ಪ (Shwetha L Shantappa)ನವರ ಮೃತಪಟ್ಟವಿದ್ಯಾರ್ಥಿನಿ. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿ (Govt engineering collage)ನಲ್ಲಿ ಇ ಆ್ಯಂಡ್‌ ಸಿ ವಿಭಾಗದಲ್ಲಿ ಪ್ರಥಮ ವರ್ಷ ಅಭ್ಯಾಸ ಮಾಡುತ್ತಿದ್ದಳು. ಇನ್ನು ಕಾಲೇಜು ಹತ್ತಿರ ನಿಲುಗಡೆ ಇಲ್ಲದಿದ್ದರೂ ಇಳಿಯಲು ಯತ್ನಿಸಿದ ಕಾರಣ ಆಯತಪ್ಪಿ ಬಿದ್ದು ತೀವ್ರ ಗಾಯಗೊಂಡಿದ್ದಳು. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ. ಈ ಕುರಿತು ಹೂವಿನಹಡಗಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ಕುಟುಂಬಕ್ಕೆ ವಿಮಾ ಪರಿಹಾರ ನೀಡಲು ವಿಳಂಬ, ಕುಮಟಾ ಸಾರಿಗೆ ಬಸ್ ಜಪ್ತಿ!

15 ಸಾವಿರ ರೂ. ತಾತ್ಕಾಲಿಕ ಪರಿಹಾರ:  ಶ್ವೇತಾಗೆ ತಂದೆ ಇಲ್ಲ, ಅಂಗವಿಕಲ ತಾಯಿಯನ್ನು ಪಾಲನೆ ಮಾಡುವ ಜವಾಬ್ದಾರಿ ಹೊತ್ತಿದ್ದಳು. ಈ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಜತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎಬಿವಿಪಿ ನಗರ ಘಟಕ ಒತ್ತಾಯಿಸಿ ರಸ್ತೆ ತಡೆ ನಡೆಸಿತು. ಪಟ್ಟಣದಿಂದ 5 ಕಿಮೀ ದೂರದ ಸರ್ಕಾರಿ ಎಂಜಿಯರಿಂಗ್‌ ಕಾಲೇಜಿಗೆ ವಿದ್ಯಾರ್ಥಿಗಳು ಹೋಗಲು ಬಸ್ಸಿನ ಸೌಕರ್ಯ ಇಲ್ಲ. ಇಲ್ಲಿನ ಸಾರಿಗೆ ಘಟಕದಿಂದ ಸರಿಯಾಗಿ ಬಸ್‌ ಸೌಕರ್ಯದ ಜತೆಗೆ, ವಿವಿಧ ಘಟಕಗಳಿಂದ ಸಂಚರಿಸುವ ಪ್ರತಿ ಬಸ್‌ ಕಾಲೇಜು ಬಳಿ ನಿಲುಗಡೆ ಮಾಡಬೇಕು. ಎಂಜಿನಿಯರಿಂಗ್‌ ಕಾಲೇಜು ಬಳಿ ಬಸ್‌ ನಿಲುಗಡೆ ನಾಮಫಲಕ ಅಳವಡಿಸಬೇಕು. ಇನ್ನು ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ತಾತ್ಕಾಲಿಕವಾಗಿ 15 ಸಾವಿರ ರೂ. ಪರಿಹಾರ ಕೊಡುತ್ತೇವೆ. ಜತೆಗೆ ಉಳಿದ ಪರಿಹಾರವನ್ನು ಆನಂತರದಲ್ಲಿ ನೀಡಲಾಗುತ್ತದೆ ಎಂದು ಹೂವಿನಹಡಗಲಿ ಸಾರಿಗೆ ಘಟಕಾಧಿಕಾರಿ ವೆಂಕಟಚಲಪತಿ ತಿಳಿಸಿದರು. 

click me!