
ಬೆಂಗಳೂರು(ಮಾ.25): ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಹಿಳಾ(Women) ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ಕೆಂಪಾಪುರದ ನಿಖಿಲಾ(37) ಆತ್ಮಹತ್ಯೆ ಮಾಡಿಕೊಂಡವರು. ಸಾಫ್ಟ್‌ವೇರ್ ಎಂಜಿನಿಯರ್(Software Engineer) ಆಗಿರುವ ನಿಖಿಲಾ 10 ವರ್ಷದ ಹಿಂದೆ ಅರ್ಜುನ್ ಎಂಬುವವರನ್ನು ವಿವಾಹವಾಗಿದ್ದರು. ಅರ್ಜುನ್ ಕಾರ್ಯ ನಿಮಿತ್ತ ಬುಧವಾರ ಮೈಸೂರಿಗೆ(Mysuru) ಹೋಗಿದ್ದರು. ಹೀಗಾಗಿ ನಿಖಿಲಾ ಒಬ್ಬರೇ ಮನೆಯಲ್ಲಿದ್ದರು. ಬುಧವಾರ ರಾತ್ರಿ ನಿಖಿಲಾ ಅವರ ತಂದೆ ಕರೆ ಮಾಡಿದ್ದಾರೆ. ಆದರೆ, ನಿಖಿಲಾ ಕರೆ ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಂಡು ಸಂಬಂಧಿಕರೊಬ್ಬರಿಗೆ ಮನೆ ಬಳಿ ಹೋಗಿ ನೋಡುವಂತೆ ಸೂಚಿಸಿದ್ದಾರೆ. ಈ ವೇಳೆ ಸಂಬಂಧಿಕರು ಮನೆ ಬಳಿ ಬಂದು ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Suicide Cased: ಕಾಪಿ ಹೊಡೆದಾಗ ಸಿಕ್ಕಿಬಿದ್ದ 8ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ
ನಿಖಿಲಾ ಮತ್ತು ಅರ್ಜುನ್ ದಂಪತಿ ಅನೋನ್ಯವಾಗಿದ್ದರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಮರಣ ಪತ್ರ(Death Note) ಸಿಕ್ಕಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು(Police) ಹೇಳಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ರಾಯಿಟರ್ಸ್ ಪತ್ರಕರ್ತೆ, ಕ್ಯಾಮರಾ ಇಡ್ತಿದ್ದ ಗಂಡ!
ಬೆಂಗಳೂರು: ರಾಯಿಟರ್ಸ್ (Reuters)ಸುದ್ದಿ ಸಂಸ್ಥೆಯ ಪತ್ರಕರ್ತೆ(Journalist) ನೇಣು (Hang)ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅನುಮಾನಾಸ್ಪದ ರೀತಿ ಸಾವು (Death) ಕಂಡಿದ್ದು ಪೊಲೀಸರು (Bengaluru Police) ಎಲ್ಲ ಕೋನಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ
ರಾಯಿಟರ್ಸ್ ಸುದ್ದಿ ಸಂಸ್ಥೆಯ ಶ್ರುತಿ (35) ಸಾವನ್ನಪ್ಪಿದ್ದಾರೆ. ಶ್ರುತಿ ಅವರನ್ನು ಪತಿ ಅನೀಶ್ ಕೊಯಾಡನ್ ಕೊಲೆ ಮಾಡಿದ್ದಾನೆ ಎಂದು ಶ್ರುತಿ ಸಹೋದರ ನಿಶಾಂತ್ ನಾರಾಯಣನ್ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2017 ರಲ್ಲಿ ಶ್ರು ಹಾಗೂ ಅನೀಶ್ ಮದುವೆಯಾಗಿತ್ತು. ಬೆಂಗಳೂರಿಗೆ ಮರಳಿದ್ದ ದಂಪತಿ ವೈಟ್ ಫೀಲ್ಡ್ ಸಮೀಪದ ನಲ್ಲೂರಹಳ್ಳಿ ರಸ್ತೆಯಲ್ಲಿರುವ ಎಸ್. ವಿ. ಮೈಪೇರ್ ಅಪಾರ್ಟ್ ಮೆಂಟ್ನಲ್ಲಿ ವಾಸವಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅನೀಶ್ ಹಾಗೂ ಶ್ರುತಿ ನಡುವಿನ ಸಂಬಂಧ ಹಳಸಿತ್ತು. ಸಂಬಳದ ಹಣವನ್ನು ತವರು ಮನೆಗೆ ನೀಡುತ್ತೀಯಾ ಎಂದು ಪತ್ನಿ ಮೇಲೆ ಗಂಡ ಕೂಗಾಡುತ್ತಿದ್ದ ಎಂದು ಸಹೋದರ ಆರೋಪಿಸಿದ್ದಾನೆ.
ಶ್ರುತಿ ಶವವಾಗಿ ಪತ್ತೆಯಾದ ದಿನ ಆಕೆಯ ಪತಿ ಅನೀಶ್ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಎಂಬಲ್ಲಿಗೆ ತೆರಳಿದ್ದ. ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ತಾಯಿ ಮನೆಯಿಂದ ಕರೆ ಮಾಡಿದರೂ ಉತ್ತರ ಸಿಗದ ಹಿನ್ನೆಲೆಯಲ್ಲಿ ಬಂದು ನೋಡಿದಾಗ ವಿಚಾರ ಗೊತ್ತಾಗಿದೆ.
Woman Suicide: ರಾಮನಗರ, ಕಂದಮ್ಮಗಳ ಮುಖವೂ ಕಾಣಲಿಲ್ಲವೇ.. ಗಂಡ ಪ್ರಸಾದ ತರಲಿಲ್ಲವೆಂದು ಸುಸೈಡ್!
ಬೆಂಗಳೂರಿನಲ್ಲಿ ಶೃತಿಯ ಸಹೋದರ ಇಂಜಿನಿಯರ್ ಆಗಿರುವ ನಿಶಾಂತ್ ಕೂಡಲೇ ಆಕೆಯ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿಯನ್ನು ಫೋನ್‌ನಲ್ಲಿ ಸಂಪರ್ಕಿಸಿ ಆಕೆಯ ಕೊಠಡಿಯನ್ನು ಪರಿಶೀಲಿಸಿದ್ದಾರೆ. ಆದರೆ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ಬಾಲ್ಕನಿಯಿಂದ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸಹೋದರಿ ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಬೆಂಗಳೂರಿನಲ್ಲೇ ಇರುವ ಶ್ರುತಿ ಸಹೋದರ ನಿಶಾಂತ್ ತಕ್ಷಣ ಸಹೋದರಿ ವಾಸವಿದ್ದ ಜಾಗಕ್ಕೆ ಬಂದಿದ್ದ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನೀಶ್ ಪ್ರತಿನಿತ್ಯ ತಂಗಿಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಶ್ರುತಿಯ ಸಹೋದರ ನಿಶಾಂತ್ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ