ಸ್ಮಾರ್ಟ್‌ಫೋನ್ ಬಳಕೆ ಮಾಡುವ ಪ್ರತಿಯೊಬ್ಬರು ಒಂದಲ್ಲ ಒಂದು ಸಾಮಾಜಿಕ ಮಾಧ್ಯಮ ಬಳಕೆ ಮಾಡುತ್ತಾರೆ.ಇದರಲ್ಲಿ ಇನ್‌ಸ್ಟಾಗ್ರಾಂ ಬಳಕೆ ಹೆಚ್ಚು.ಹೀಗೆ ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹೀರಾತು ಲಿಂಕ್ ಕ್ಲಿಕ್ ಮಾಡಿದ ಮಹಿಳೆ ಬರೋಬ್ಬರಿ 8.6 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ದೆಹಲಿ(ಏ.09): ಉದ್ಯೋಗ ಹುಡುಕುತ್ತಿದ್ದರೆ, ಎಲ್ಲಾ ಜಾಹೀರಾತುಗಳನ್ನು, ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಉದ್ಯೋಗ ಜಾಹೀರಾತನ್ನು ಕಣ್ಣಾಡಿಸದೇ ಇರುವುದಿಲ್ಲ. ತಮಗೆ ಸೂಕ್ತ ಎಂದೆನಿಸಿದರೆ ಪರಿಶೀಲನೆ ನಡೆಸಿ ಅರ್ಜಿ ಸಲ್ಲಿಸುವುದು ಸಾಮಾನ್ಯವಾಗಿದೆ. ಹೀಗೆ ಉದ್ಯೋಗ ಹುಡುಕಾಟದಲ್ಲಿದ್ದ ದೆಹಲಿ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ಉದ್ಯೋಗ ಜಾಹೀರಾತು ನೋಡಿದ್ದಾರೆ. ಬಳಿಕ ಲಿಂಕ್ ಕ್ಲಿಕ್ ಮಾಡಿ ಉದ್ಯೋಗಕ್ಕೆ ಅಪ್ಲೈ ಮಾಡಲು ಮುಂದಾಗಿದ್ದಾರೆ. ಆದರೆ ಮಹಿಳೆಗೆ ಉದ್ಯೋಗ ಸಿಗುವುದಕ್ಕಿಂತ ಖಾತೆಯಲ್ಲಿದ್ದ 8.6 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ದೆಹಲಿ ಮಹಿಳೆಯ ಪತಿ ಉದ್ಯೋಗದಲ್ಲಿದ್ದಾರೆ. ಇತ್ತ ಮಹಿಳೆಗೆ ತಾನೂ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ಬಳಿಕ ಹಲವು ಸಾಮಾಜಿಕ ಜಾಲತಾಣ, ಉದ್ಯೋಗ ತಾಣಗಳ ವೆಬ್‌ಸೈಟ್ ನಲ್ಲಿ ಅರ್ಜಿ ಹಾಕಿದ್ದಾರೆ. ಆದರೆ ಯಾವುದರಿಂದ ಪ್ರತಿಕ್ರಿಯೆ ಬಂದಿಲ್ಲ. ಹೀಗಿರುವಾಗಿ ಇನ್‌ಸ್ಟಾಗ್ರಾಂನಲ್ಲಿ ಉದ್ಯೋಗದ ಜಾಹೀರಾತು ನೋಡಿದ್ದಾರೆ. ಹೀಗಾಗಿ ಲಿಂಕ್ ಕ್ಲಿಕ್ ಮಾಡಿದ್ದಾರೆ. ಈ ವೇಳೆ ಹೆಸರು, ವಿದ್ಯಾಭ್ಯಾಸ, ಅನುಭವ ಸೇರಿದಂತೆ ಹಲವು ಮಾಹಿತಿಗಳನ್ನು ಭರ್ತಿ ಮಾಡುವಂತೆ ಕೋರಿತ್ತು. ಇದರಂತೆ ಮಾಹಿತಿಯನ್ನು ಭರ್ತಿ ಮಾಡಲಾಗಿತ್ತು.
undefined
ಕುರುಬನ ರಾಣಿಯ ಖಾತೆಗೆ ಸೈಬರ್ ಕಳ್ಳರ ಕನ್ನ, 1 ಲಕ್ಷ ಕಳೆದುಕೊಂಡ ನಟಿ ನಗ್ಮಾ!
ಕೆಲ ಹೊತ್ತಲ್ಲೇ ರಾಹುಲ್ ಅನ್ನೋ ವ್ಯಕ್ತಿ ಕರೆ ಮಾಡಿದ್ದಾರೆ. ಮೊದಲ ಪ್ರತಿಕ್ರಿಯೆಯಿಂದ ಸಂತಸಗೊಂಡ ಮಹಿಳೆ ಉದ್ಯೋಗ ಕುರಿತು ಮಾಹಿತಿ ಕೇಳಿದ್ದಾರೆ. ಈ ವೇಳೆ ಉದ್ಯೋಗ ಗಿಟ್ಟಿಸಿಕೊಳ್ಳಲು ನೋಂದಣಿ ಮೌಲ್ಯ 750 ರೂಪಾಯಿ ಪಾವತಿಸುವಂತೆ ಹೇಳಿದ್ದಾನೆ. 750 ರೂಪಾಯಿಯಲ್ಲಿ ಏನಿದೆ ಎಂದು ಮಹಿಳೆ ಪಾವತಿ ಮಾಡಿದ್ದಾಳೆ. ಈ ವೇಳೆ ಏರ್‌ಲೈನ್ ಜಾಬ್ ಇಂಡಿಯಾ ಅನ್ನೋ ಹೆಸರಿನಲ್ಲಿ ಉದ್ಯೋಗ ನೀಡುವ ಭರವಸೆಯನ್ನು ನೀಡಲಾಗಿದೆ.
ಮರುದಿನ ಮತ್ತೆ ಕರೆ ಮಾಡಿ ಕೆಲ ಪ್ರಕ್ರಿಯೆ ಮುಗಿಸಲು ಹೇಳಿದ್ದಾನೆ. ಇದಕ್ಕಾಗಿ ಒಂದೆರೆಡು ಅಪ್ಲೇಕೇಶನ್ ಕಳುಹಿಸಿದ್ದಾನೆ. ಏರ್‌ಲೈನ್‌ನಲ್ಲಿ ಉತ್ತಮ ವೇತನದ ಸಂಭ್ರಮದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಕಳುಹಿಸಿದ್ದಾರೆ. ಬಳಿಕ 20 ರೂಪಾಯಿಯನ್ನು ಏರ್‌ಪೋರ್ಟ್ ಸೆಕ್ಯೂರಿಟಿ ಹಣವಾಗಿ ಪಾವತಿಸುವಂತೆ ಹೇಳಿದ್ದಾನೆ. ಹೀಗೆ ಒಂದೊಂದು ಪ್ರಕ್ರಿಯೆದ ಆಸೆ ತೋರಿಸಿ, ಹಲವು ನಕಲಿ ಅರ್ಜಿಗಳನ್ನು ಸೃಷ್ಟಿಸಿ ಪ್ರತಿ ಬಾರಿ ಒಂದಿಷ್ಟು ಹಣ ಪೀಕಿದ್ದಾನೆ. ಗೇಟ್‌ಪಾಸ್, ವಿಮೆ, ಕಚೇರಿಯ ವೆಲ್‌ಕಮ್ ಕಿಟ್ ಸೇರಿದಂತೆ ಹಲವು ಹೆಸರಿನಲ್ಲಿ ತನ್ನ ಖಾತೆಗೆ ಹಣ ಜಮೆ ಆಗುವಂತೆ ಮಾಡಿದ್ದಾನೆ. ಬರೋಬ್ಬರಿ 8 ಲಕ್ಷ ರೂಪಾಯಿ ಖಾತೆಯಿಂದ ವರ್ಗಾವಣೆ ಆಗಿದೆ.
ಬ್ಯೂಸಿನೆಸ್ ಹೆಸ್ರಲ್ಲಿ ಕ್ರಿಕೆಟಿಗ ದೀಪಕ್ ಚಹಾರ್ ಪತ್ನಿಗೆ 10 ಲಕ್ಷ ರೂ ವಂಚನೆ, ಕಂಗಾಲಾದ ಜಯಾ!
ಅಷ್ಟರಲ್ಲೇ ಮಹಿಳೆಗೆ ತಾನು ಮೋಸ ಹೋಗಿರುವುದಾಗಿ ಅರಿವಾಗಿದೆ. ಪತಿಯ ಜೊತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕೆಲ ತಿಂಗಳ ಹಿಂದೆ ದೂರು ನೀಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿದ ಪೊಲೀಸರು ಚಾಣಾಕ್ಷ ರೀತಿಯಲ್ಲಿ ಕಿಲಾಡಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ವೇಳೆ ಈತ ಇದೇ ರೀತಿ ಸುಮಾರು 60 ಲಕ್ಷ ರೂಪಾಯಿ ಹಣ ಅಮಾಯಕರಿಂದ ಪಡೆದಿರುವುದು ಬೆಳಕಿಗೆ ಬಂದಿದೆ. ಮಹಾ ವಂಚನೆ ಜಾಲ ಇದೀಗ ಬಯಲಾಗಿದೆ.