Yadagiri: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ, ಓರ್ವ ಸಾವು

By Gowthami K  |  First Published Apr 9, 2023, 2:07 PM IST

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಓರ್ವ  ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಯಾದಗಿರಿಯಲ್ಲಿ ನಡೆದಿದೆ.


ಯಾದಗಿರಿ (ಏ.9): ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಓರ್ವ  ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಯಾದಗಿರಿಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯವಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬೆಂಗಳೂರಿನಿಂದ ಹುಮನಬಾದ್ ಗೆ ಹೋಗ್ತಾಯಿದ್ದ ಬಸ್ ಎಂದು ತಿಳಿದುಬಂದಿದೆ. ಬಸ್ ನಲ್ಲಿ ಸಿಲುಕಿದವರನ್ನ ಪ್ರಯಾಣಿಕರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಮೃತರ‌ ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುರಪುರದಲ್ಲಿ ಮುಂದುವರೆದ ನಿಷೇಧಾಜ್ಞೆ: ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಕೊಡೇಕಲ್ ಗ್ರಾಮದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ ವಿಧಿಸಿದ್ದ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದೆ.  ಏಪ್ರಿಲ್ 12 ರ ರಾತ್ರಿ 8 ಗಂಟೆಯವರೆಗೂ 144 ಸೆಕ್ಷನ್ ವಿಸ್ತರಣೆ ಮಾಡಿ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಆದೇಶಿಸಿದ್ದಾರೆ. ಬಿಜೆಪಿ ಶಾಸಕ ರಾಜೂಗೌಡ ಸ್ವಗ್ರಾಮ ಕೊಡೇಕಲ್ ನಲ್ಲಿ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದ ಜೊತೆಗೆ ಮಾರಕಾಸ್ತ್ರಗಳಿಂದಲೂ ದಾಳಿ ನಡೆದಿತ್ತು. ಪರಸ್ಪರ ದಾಳಿಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಏಪ್ರಿಲ್ 8 ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದ ಜಿಲ್ಲಾಧಿಕಾರಿ ಸ್ನೇಹಲ್.ಆರ್. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐದು ಪ್ರಕರಣ ದಾಖಲಾಗಿದ್ದು, 25 ಆರೋಪಿಗಳ ಬಂಧನವಾಗಿದೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ಜೊತೆಗೆ ಇನ್ನುಳಿದ ಆರೋಪಿಗಳ ಪತ್ತೆಗಾಗಿ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದೆ.

Tap to resize

Latest Videos

undefined

ಯಾದಗಿರಿಯಲ್ಲಿ ಜೋರಾದ  ಕುರುಡು ಕಾಂಚಾಣದ ಸದ್ದು!
ಯಾದಗಿರಿಯಲ್ಲಿ ದಾಖಲೆ ಇಲ್ಲದೆ ಅಕ್ರಮ ಹಣ ಸಾಗಾಟ ನಡೆಸಿದ್ದು, 34 ಲಕ್ಷ ರೂ. ಅಕ್ರಮ ಹಣವನ್ನು ಯಾದಗಿರಿ ಪೋಲಿಸರು ಸೀಜ್ ಮಾಡಿದ್ದಾರೆ.  ಯಾದಗಿರಿ ನಗರದ ಮುದ್ನಾಳ್ ಕ್ರಾಸ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಹಣ ಜಪ್ತಿ ಮಾಡಲಾಗಿದೆ. ಯಾದಗಿರಿ ನಗರದಿಂದ ಕಲಬುರಗಿ ಕಡೆಗೆ ಹೋಗುತಿದ್ದ ಎಟಿಎಂ ಬುಲೆರೋ  ವಾಹನದಲ್ಲಿ ತಪಾಸಣೆ ಮಾಡುವಾಗ ಹಣ ಪತ್ತೆಯಾಗಿದೆ.

ಬಿಜೆಪಿ-ಕಾಂಗ್ರೆಸ್ ನಡುವೆ ಮಾರಾಮಾರಿ, 18 ಮಂದಿ ಅರೆಸ್ಟ್, ಸುರಪುರ ಮತಕ್ಷೇತ್ರ ಬೂದಿ

ದಾಖಲೆ ಇಲ್ಲದ  34 ಲಕ್ಷ ರೂ. ಹಣದೊಂದಿಗೆ  ಶರಣಪ್ಪ ವಾಲಿ ಎಂಬಾತರ ಸಿಕ್ಕಿಬಿದ್ದಿದ್ದಾನೆ. ಪ್ರಮುಖ ಆರೋಪಿ ಶರಣಪ್ಪ ವಾಲಿ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಶಿರಹಟ್ಟಿ ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಆತಂಕ, ಬೆಂಬಲಿಗರನ್ನ ಕಂಡು

click me!