Gadag: ಬಗರ್‌ಹುಕುಂ ತೆರವಿಗೆ ಮಹಿಳೆ ಬಲಿ..!

Published : Mar 08, 2022, 12:18 PM IST
Gadag: ಬಗರ್‌ಹುಕುಂ ತೆರವಿಗೆ ಮಹಿಳೆ ಬಲಿ..!

ಸಾರಾಂಶ

*  ಗದಗದ ಕೆಲೂರಲ್ಲಿ ವಿಷ ಸೇವಿಸಿ ಮಹಿಳೆ ಸಾವು *  ವಿಷ ಸೇವಿಸಿದ್ದ ಇನ್ನೋರ್ವ ಮಹಿಳೆ ಚೇತರಿಕೆ *  ಜಮೀನು ತೆರವಿಗೆ ಗ್ರಾಮಸ್ಥರ ವಿರೋಧ  

ಗದಗ(ಮಾ.08):  ಅತಿಕ್ರಮಿಸಿಕೊಂಡಿರುವ ಬಗರ್‌ ಹುಕುಂ ಜಮೀನನ್ನು ಅರಣ್ಯ ಇಲಾಖೆ(Forest Department) ತೆರವು ಮಾಡುವುದನ್ನು ವಿರೋಧಿಸಿ ಇಬ್ಬರು ಮಹಿಳೆಯರು(Women) ವಿಷ ಸೇವಿಸಿದ್ದು, ಒಬ್ಬಾಕೆ ಸಾವನ್ನಪ್ಪಿರುವ ಘಟನೆ ಗದಗ(Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಕೆಲೂರಿನಲ್ಲಿ ಸೋಮವಾರ ನಡೆದಿದೆ.

ಕೆಲೂರಿನ ನಿರ್ಮಲಾ ಪಾಟೀಲ ಮೃತಪಟ್ಟ ಮಹಿಳೆ. ಜಮೀನು(Land) ಕಳೆದುಕೊಳ್ಳುವ ಆತಂಕದಲ್ಲಿ ನಿರ್ಮಲಾ ಪಾಟೀಲ ಮತ್ತು ಸರೋಜಾ ಪಾಟೀಲ ಕ್ರಿಮಿನಾಶಕ(Poison) ಸೇವಿಸಿದ್ದರು. ತಕ್ಷಣ ಅವರನ್ನು ಸ್ಥಳೀಯರು ಖಾಸಗಿ ವಾಹನದಲ್ಲಿ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿರ್ಮಲಾ ಪಾಟೀಲ ಸಂಜೆಯ ಹೊತ್ತಿಗೆ ಮೃತಪಟಿದ್ದಾರೆ. ಸರೋಜಾ ಆರೋಗ್ಯ ಸುಧಾರಿಸಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ACB Raid: ತಹಸೀಲ್ದಾರ ಕಚೇರಿಯಲ್ಲಿ ಎಸಿಬಿ ದಾಳಿ: ಲಂಚ ಸಮೇತ ಟೈಪಿಸ್ಟ್‌ ಬಲೆಗೆ

ಕಪ್ಪತ್ತಗುಡ್ಡವನ್ನು(Kappatagudda) ವನ್ಯಧಾಮವನ್ನಾಗಿ ರಾಜ್ಯ ಸರ್ಕಾರ(Governmet of Karnataka) 2016-17ರಲ್ಲಿ ಘೋಷಿಸಿದ ಬಳಿಕ ಕಪ್ಪತ್ತಗುಡ್ಡ ಒಟ್ಟು ವಿಸ್ತೀರ್ಣದ ಆಧಾರದಲ್ಲಿ ಸರ್ವೇ ಮಾಡಲಾಗಿದೆ. ಸಮೀಕ್ಷೆ ನಂತರ ಅರಣ್ಯ ಭೂಮಿ ಒತ್ತುವರಿ ಆಗಿರುವುದು ಪತ್ತೆಯಾಗಿದೆ. ಹೀಗಾಗಿ, ಜನವರಿಯಲ್ಲಿಯೇ ಕೆಲೂರು ಗ್ರಾಮಸ್ಥರಿಗೆ ದಾಖಲೆ ಸಮೇತ ಒತ್ತುವರಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಇದನ್ನು ಒಪ್ಪದ ಗ್ರಾಮಸ್ಥರು, ನಮ್ಮ ಹಿರಿಯರ ಕಾಲದಿಂದಲೂ ನಾವೇ ಸಾಗುವಳಿ ಮಾಡುತ್ತಿದ್ದೇವೆ ಎಂದು ವಾಗ್ವಾದ ಮಾಡಿದ್ದರು.

ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಮುಂಡರಗಿ ಪೊಲೀಸರ(Police) ಸಹಾಯದಿಂದ ಜಮೀನಿಗೆ ತೆರಳಿ ಟ್ರಂಚ್‌ ಹೊಡೆಯಲು ಮುಂದಾಗಿದ್ದಾರೆ. ಈ ವೇಳೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರು, ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಆದರೂ ಅಧಿಕಾರಿಗಳು ಟ್ರೆಂಚ್‌ ಹಾಕುವುದನ್ನು ನಿಲ್ಲಿಸಿಲ್ಲ. ಇದರಿಂದ ಆಕ್ರೋಶಗೊಂಡ ಸರೋಜವ್ವ ಪಾಟೀಲ, ನಿರ್ಮಲಾ ಪಾಟೀಲ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳ ನಡೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಆಸ್ಪತ್ರೆ ಸಿಬ್ಬಂದಿ ಯಡವಟ್ಟಿಗೆ 10 ನಿಮಿಷದಲ್ಲೇ ಹೋಯ್ತು ಸೋಂಕಿತೆ ಪ್ರಾಣ

ಗದಗ: ಗದಗದ ಜೀಮ್ಸ್ ನಲ್ಲಿ ಸಿಬ್ಬಂದಿ‌ ಎಡವಟ್ಟಿಗೆ ಸೋಂಕಿತ ಮಹಿಳೆ ಬಲಿಯಾಗಿದ್ದಾರೆ. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನಗರದ ಅಂಬೇಡ್ಕರ್ ಬಡಾವಣೆಯ 52 ವರ್ಷದ ಕೋವಿಡ್ ಸೋಂಕಿತೆ ಸಾವಿಗೀಡಾದ ಘಟನೆ ಕಳೆದ ವರ್ಷ ಮೇ.19 ರಂದು ನಡೆದಿತ್ತು. 

Gadag: ದಶಕವಾ​ದ್ರೂ ಪ್ರವಾಹ ಸಂತ್ರ​ಸ್ತ​ರಿಗೆ ಹಂಚಿಕೆ​ಯಾ​ಗದ ಆಸರೆ ಮನೆ​ಗ​ಳು..!

ಜೀಮ್ಸ್ ಆಸ್ಪತ್ರೆಯಲ್ಲಿ ಇಂದು 4.30ರ ಸುಮಾರಿಗೆ ಸೋಂಕಿತ ಮಹಿಳೆಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆದು ಬೇರೆ ವೆಂಟಿಲೇಟರ್ ಅಳವಡಿಸುವಾಗ ದುರಂತವಾಗಿದೆ.  ಚೆನ್ನಾಗಿದ್ದ ವೆಂಟಿಲೇಟರ್ ತೆಗೆದು ಮತ್ತೊಂದು ವೆಂಟಿಲೇಟರ್ ಅಳವಡಿಸಲು ಮುಂದಾಗಿದ್ದ ವೇಳೆ 10 ನಿಮಿಷದಲ್ಲಿಯೇ ಮಹಿಳೆ ನರಳಿ ಪ್ರಾಣ ಬಿಟ್ಟಿದ್ದರು.

ವೆಂಟಿಲೇಟರ್ ಬದಲು ಮಾಡುವ ಮುನ್ನ ಪರ್ಯಾಯ ಆಕ್ಸಿಜನ್ ವ್ಯವಸ್ಥೆ ಮಾಡುವಂತೆ ಕುಟುಂಬ ಕೇಳಿಕೊಂಡಿತ್ತು.  ಆದರೆ ಕುಟುಂಬಸ್ಥರ ಮನವಿಗೆ ಕಿವಿಗೊಡದ ಅಸ್ಪತ್ರೆ ಸಿಬ್ಬಂದಿ ವೆಂಟಿಲೇಟರ್ ಬದಲಾವಣೆ ಮಾಡಲು ಮುಂದಾಗಿದ್ದರು.ವೆಂಟಿಲೇಟರ್ ತೆರವುಗೊಳಿಸಿ ಕೆವಲ 10 ನಿಮಿಷದಲ್ಲಿ ಮಹಿಳೆ ಸಾವಿಗೀಡಾಗಿದ್ದಾರೆ. ಕುಟುಂಬಸ್ಥರ ಕಣ್ಣ ಮುಂದೆಯೇ ಸೋಂಕಿತೇ ನರಳಿ ಪ್ರಾಣ ಬಿಟ್ಟಿದ್ದರು. ಕಣ್ಣು ಮುಂದೆಯೇ ಅಕ್ಕನ ಜೀವ ಹೋಗಿದ್ದನ್ನು ಸಹೋದರ ಕಣ್ಣಾರೆ ಕಂಡಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಅಲ್ಲದೇ ಜೀಮ್ಸ್ ಆಸ್ಪತ್ರೆ ಸಿಬ್ಬಂದಿ  ನಿರ್ಲಕ್ಷ್ಯದಿಂದ ಈ ರೀತಿ ದುರಂತವಾಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ