20 ಸಾವಿರ ರೂ ಸಾಲದ ಅಸಲು ಬಡ್ಡಿ ಕಿತ್ತುಕೊಂಡು ಲೋನ್ ಆ್ಯಪ್ ಕಿರುಕುಳ, ಮಹಿಳೆ ಆತ್ಮಹತ್ಯೆ!

Published : Jul 14, 2022, 11:53 AM IST
20 ಸಾವಿರ ರೂ ಸಾಲದ ಅಸಲು ಬಡ್ಡಿ ಕಿತ್ತುಕೊಂಡು ಲೋನ್ ಆ್ಯಪ್ ಕಿರುಕುಳ, ಮಹಿಳೆ ಆತ್ಮಹತ್ಯೆ!

ಸಾರಾಂಶ

ಆ್ಯಪ್ ಮೂಲಕ ಸಾಲ ಪಡೆಯುವ ಮುನ್ನ ಎಚ್ಚರಿಕೆ ಅಗತ್ಯ ಸಾಲ, ಅಸಲು, ಬಡ್ಡಿ ಎಲ್ಲವನ್ನೂ ತೀರಿಸಿದರೂ ಕಿರುಕುಳ ಲೋನ್ ಆ್ಯಪ್ ಪ್ರತಿನಿದಿ ಕಿರುಕುಳಕ್ಕೆ ಗೃಹಣಿ ಆತ್ಯಹತ್ಯೆ

ಗುಂಟೂರು(ಜು.14): ಭಾರತದಲ್ಲಿ ಲೋನ್ ಆ್ಯಪ್ ಹಾವಳಿ ಹೆಚ್ಚಾಗುತ್ತಿದೆ. ಅಮಾಯಕರು ಇಂತಹ ಲೋನ್ ಆ್ಯಪ್ ಮೂಲಕ ಸಾಲ ಪಡೆದು ಸಾವಿಗೆ ಶರಣಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇದೀಗ 24 ಹರೆಯ ಮಹಿಳೆ ಇದೇ ಲೋನ್ ಆ್ಯಪ್ ಕಿರುಕುಳಕ್ಕೆ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನ ಪ್ರತ್ಯುಷಾ ಲೋನ್ ಆ್ಯಪ್ ಮೂಲಕ 20,000 ರೂಪಾಯಿ ಸಾಲ ಪಡೆದುಕೊಂಡಿದ್ದಾರೆ. ಅಸಲು, ಬಡ್ಡಿ ಸೇರಿ ಪ್ರತ್ಯುಷಾಳಿಂದ ಲೋನ್ ಆ್ಯಪ್ ಪ್ರತಿನಿಧಿ ಹಣ ವಸೂಲಿ ಮಾಡಿದ್ದಾರೆ. ಆದರೆ ಇನ್ನೂ ಸಾಲ ಕಟ್ಟಿಲ್ಲ ಎಂದು ಕಿರುಕುಳ ನೀಡಲು ಆರಂಭಿಸಿದ್ದಾರೆ. ನೋಟಿಸ್ ನೀಡಿದ ಬಳಿಕ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆದರಿಸಿದ್ದಾರೆ. ಜೊತೆಗೆ ಅಶ್ಲೀಲ ಸಂದೇಶ ಕಳುಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಾಗೆ ಬೆದರಿಸಿದ್ದಾರೆ. ಕಿರುಕುಳಕ್ಕೆ  ಬೇಸತ್ತ ಪ್ರತ್ಯುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮದುವೆಯಾದ ಪ್ರತ್ಯುಷಾ ಆರ್ಥಿಕ ಸಂಕಷ್ಟ ಎದುರಿಸಿದ್ದರು. ಹೀಗಾಗಿ ಲೋನ್ ಆ್ಯಪ್ ಮೂಲಕ 20,000 ರೂಪಾಯಿ ಸಾಲ ಪಡೆದುಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಿಕೊಂಡು ಬಂದಿದ್ದಾರೆ.  ಸಂಪೂರ್ಣ ಹಣ ಪಾವತಿ ಮಾಡಿದ್ದಾರೆ. ಆದರೆ  ಲೋನ್ ಆ್ಯಪ್ ಪ್ರತಿನಿದಿ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ. ಬಾಕಿ ಉಳಿದ ಅಲ್ಪ ಹಣ ಮರುಪಾವತಿಸಲು ಕಾಲಾವಕಾಶ ಕೋರಿದ್ದಾರೆ. ಆದರೆ ಇದಕ್ಕೆ ಒಪ್ಪದ ಪ್ರತಿನಿದಿ ಮಹಿಳೆಯ ಅಶ್ಲೀಲ ಚಿತ್ರಗಳನ್ನು ಗ್ರಾಫಿಕ್ಸ್ ಮೂಲಕ ತಯಾರಿಸಿದ್ದಾರೆ. ಬಳಿಕ ಈ ಚಿತ್ರಗಳನ್ನು ವ್ಯಾಟ್ಸ್ಆ್ಯಪ್ ಮೂಲಕ ಮಹಿಳೆಗೆ ಕಳುಹಿಸಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾರೆ. ಇಷ್ಟೇ ಅಲ್ಲ ಗಂಡ ಹಾಗೂ ಕುಟುಂಬಕ್ಕೆ ಈ ಚಿತ್ರಗಳನ್ನು ಕಳುಹಿಸುವುದಾಗಿ ಬೆದರಿಸಿದ್ದಾರೆ. 

ಲೋನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವರೇ ಎಚ್ಚರ, ಯಾಮಾರಿದ್ರೆ ನಿಮ್ಮ ಜೀವಕ್ಕೆ ಆಪತ್ತು!

ಪ್ರತಿನಿದಿಯ ಕಿರುಕುಳಕ್ಕೆ ಬೇಸತ್ತ ಮಹಿಳೆ ಪೋಷಕರಿಗೆ ವಿಡಿಯೋ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಸಾಲ ಪಡೆದುಕೊಂಡು ಸರಿಯಾಗಿ ಮರುಪಾವತಿ ಮಾಡಿದ್ದೇನೆ. ಸಾಲದ ನಡುವೆ ಬಡ್ಡಿ ದರ ಏರಿಸುತ್ತಲೇ ಹೋಗಿದ್ದಾರೆ. ಕೊನೆಯ ಕಂತು ಎಂದು ಹೇಳಿ ಎರಡು ಮೂರು ಬಾರಿ ಹೆಚ್ಚಿಗೆ ಹಣ ಪಾವತಿ ಮಾಡಿದ್ದೇನೆ. ಆದರೆ ಇನ್ನೂ ಸಂಪೂರ್ಣ ಸಾಲ ಮರುಪಾವತಿಯಾಗಿಲ್ಲ ಎಂದು ಕಿರುಕುಳು ನೀಡಿದ್ದಾರೆ. ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಬೆದರಿಸಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋ ಸಂದೇಶ ಕಳುಹಿಸಿದ್ದಾರೆ. 

ಆ್ಯಪ್‌ ಲೋನ್‌: ಬೆಂಗ್ಳೂರಿನ ಮೂವರ ಬಂಧನ!

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲೋನ್ ಆ್ಯಪ್ ಹಾಗೂ ಕಂಪನಿ ಪ್ರತಿನಿಧಿ ಕಿರುಕುಳ ನೀಡಿರುವುದನ್ನು ಖಚಿತಪಡಿಸಿದ್ದಾರೆ. ವ್ಯಾಟ್ಸ್ಆ್ಯಪ್‌ಗೆ ಬೆದರಿಕೆ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಇನ್ನು ಸಾಲ ಸಂಪೂರ್ಣವಾಗಿ ಮರುಪಾವತಿ ಮಾಡಲಾಗಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

ಮಗಳನ್ನು ಕಳೆದುಕೊಂಡ ಪೋಷಕರು ಅಳಲು ಮುಗಿಲುಮುಟ್ಟಿದೆ. ಸಾಲ ಪಡೆದುಕೊಂಡ ಕುರಿತು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಇತ್ತೀಚೆಗೆ ಹೆಚ್ಚು ನೊಂದವರಂತೆ ಕಾಣುತ್ತಿದ್ದಳು. ಪದೇ ಪದೇ ಕೇಳಿದರೂ ಮಗಳು ಯಾವ ಮಾಹಿತಿಯನ್ನು ಹೇಳಿಲ್ಲ. ಇದೀಗ ವಿಡಿಯೋ ಮೂಲಕ ಕ್ಷಮಿಸಿ ಎಂದು ಸಂದೇಶ ಕಳುಹಿಸಿದ್ದಾರೆ. ಮಗಳನ್ನು ಕಳೆದುಕೊಂಡ ನಾವು ಹೇಗೆ ಸಹಿಸಿಕೊಳ್ಳಲಿ. ಲೋನ್ ಆ್ಯಪ್ ಪ್ರತಿನಿಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಅದೆಷ್ಟು ಮಹಿಳೆಯರು ಈ ರೀತಿ ನೊಂದುಕೊಂಡಿದ್ದಾರೆ, ಯಾರಿಗೆಲ್ಲಾ ಈ ರೀತಿ ಸಮಸ್ಯೆ ನೀಡಿದ್ದಾರೆ ಎಂದು ಬಹಿರಂಗವಾಗಲಿ ಎಂದು ಪೋಷಕರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!