ಜಿಲ್ಲೆಯ ಶಿರಹಟ್ಟಿ ಬಳಿಯ ಹೊಳಲಾಪುರ ಕ್ರಾಸ್ ಪತ್ತಿರ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್ ಏರಿ ಮನೆಗೆ ತೆರಳುತ್ತಿದ್ದ ಇಬ್ಬರು ಸರಕಾರಿ ನೌಕರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗದಗ (ಜು.14): ಜಿಲ್ಲೆಯ ಶಿರಹಟ್ಟಿ ಬಳಿಯ ಹೊಳಲಾಪುರ ಕ್ರಾಸ್ ಪತ್ತಿರ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್ ಏರಿ ಮನೆಗೆ ತೆರಳುತ್ತಿದ್ದ ಇಬ್ಬರು ಸರಕಾರಿ ನೌಕರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂದುಳಿದ ಕಲ್ಯಾಣ ಇಲಾಖೆಯ ಶಿರಹಟ್ಟಿ ತಾಲೂಕು ಅಧಿಕಾರಿಯಾಗಿದ್ದ ಅಶೋಕ್ ಪಾಟೀಲ (59) ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕರಾಗಿದ್ದ ವಿರುಪಾಕ್ಷಪ್ಪ ಬೂದಿಹಾಳ (46) ಮೃತ ಪಟ್ಟವರು ಅಂತಾ ಗುರುತಿಸಲಾಗಿದೆ.
ಕರ್ತವ್ಯ ಮುಗಿಸಿ ಶಿರಹಟ್ಟಿಯಿಂದ ಲಕ್ಷ್ಮೇಶ್ವರಕ್ಕೆ ಇಬ್ಬರು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಅಂತಾ ಪೊಲೀಸ್ ಮೂಲಗಳು ತಿಳಿಸಿವೆ. ಬೊಲೆರೊ ಕ್ಯಾರಿಯರ್ ವಾಹನದಲ್ಲಿ ಶಿರಹಟ್ಟಿ ಕಡೆಗೆ ದಿನಸಿ ಪದಾರ್ಥ ತುಂಬಿಕೊಂಡು ತೆರಳುತ್ತಿತ್ತು. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಬುಲೆರೊ ವಾಹನ ಚಾಲಕ ನಾಪತ್ತೆಯಾಗಿದ್ದಾನೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಶಿರಹಟ್ಟಿ ಪೊಲೀಸರು ತನಿಖೆ ನಡೆಸಿದ್ದಾರೆ.
undefined
ಬೆಂಗಳೂರಲ್ಲಿ ಬಿಬಿಎಂಪಿ ಟಿಪ್ಪರ್ ಲಾರಿಗೆ ಮತ್ತೊಂದು ಬಲಿ: ಅಪಘಾತದಲ್ಲಿ ಮಹಿಳೆ ಸಾವು
ಮೂವರು ಕಾರ್ಮಿಕರು ಸಾವು: ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಾಲೂಕಿನ ಕರ್ಕಿಯ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ತಾಲೂಕಿನ ಕರ್ಕಿ ನಿವಾಸಿಗಳಾದ ಶ್ರೀಧರ ನಾಯ್, ಜೀವನ್ ಕುಮಾರ, ವಿನಾಯಕ್ ಮೃತ ಕಾರ್ಮಿಕರು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೋಕಿಕೆರೆ ಗೇಟ್ ಬಳಿ ಭಾನುವಾರ ಬೆಳಗ್ಗೆ ಬೊಲೆರೊ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಓರ್ವ ಗಂಭೀರ ಗಾಯಗೊಂಡಿದ್ದಾರೆ.
ಹೊನ್ನಾವರದಿಂದ ತುಮಕೂರಿಗೆ ಬೊಲೆರೊ ವಾಹನ ತೆರಳುತ್ತಿತ್ತು. ವಾಹನವು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೋಕಿಕೆರೆ ಗೇಟ್ ಬಳಿ ತಲುಪುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಬೊಲೆರೊ ವಾಹನ ಹುಣಸೆ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತ ಕಾರ್ಮಿಕರು ತುಮಕೂರು ಗ್ಯಾಸ್ ಪೈಪ್‌ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಕ್ಕೆ ಬೊಲೆರೊ ಡಿಕ್ಕಿ: ಬೊಲೆರೊ ವಾಹನವೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಅಜ್ಜಂಪುರ ರಸ್ತೆಯ ಬೋಕಿಕೆರೆ ಕ್ರಾಸ್ ಬಳಿ ಶನಿವಾರ ತಡರಾತ್ರಿ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಶ್ರೀಧರ ನಾಯ್ಕ(29), ಜೀವನ್‌ಕುಮಾರ್(21), ವಿನಾಯಕ(30) ಮೃತರು.
ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ
ಪ್ರಮೋದ್ ನಾಯ್ಕ(43) ಗಾಯಗೊಂಡಿದ್ದು, ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಾಲ್ವರು ಆಕ್ಸಿಜನ್ ಪೈಪ್‌ಲೈನ್ ಕೆಲಸಗಾರರಾಗಿದ್ದು, ತುಮಕೂರಿನಲ್ಲಿ ಆಕ್ಸಿಜನ್ ಪೈಪ್‌ಲೈನ್ ಕೆಲಸವಿದ್ದ ಕಾರಣ ಹೊನ್ನಾವರದಿಂದ ಹೊಸದುರ್ಗ ಮಾರ್ಗವಾಗಿ ತುಮಕೂರಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅತಿ ವೇಗದ ಚಾಲನೆ ಹಾಗೂ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.