ಟೀನೇಜ್‌ ಲವ್‌ಗೆ ರೇಪ್‌ ಬಣ್ಣ: ಜೈಲು ಪಾಲಾದ ಇನಿಯನ ವಾಪಸ್ ಪಡೆಯಲು ಬೈಕ್ ಕದ್ದ ಯುವತಿ

By Suvarna News  |  First Published Jul 14, 2022, 1:00 PM IST

ಮಹಾರಾಷ್ಟ್ರದ ಮುಂಬೈನಲ್ಲಿ ವಿಚಿತ್ರ ಸಿನಿಮಾ ಶೈಲಿಯ ಘಟನೆಯೊಂದು ನಡೆದಿದೆ. ಆಗ ಆಕೆಯ ವಯಸ್ಸು 18 ಆತನ ವಯಸ್ಸಿನ್ನು 23 ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ತಿಳಿದ ಯುವತಿಯ ಪೋಷಕರು ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗಟ್ಟಿದರು.


ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ವಿಚಿತ್ರ ಸಿನಿಮಾ ಶೈಲಿಯ ಘಟನೆಯೊಂದು ನಡೆದಿದೆ. ಆಗ ಆಕೆಯ ವಯಸ್ಸು 18 ಆತನ ವಯಸ್ಸಿನ್ನು 23 ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ತಿಳಿದ ಯುವತಿಯ ಪೋಷಕರು ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗಟ್ಟಿದರು. ಪರಿಣಾಮ ಯುವಕ ಯುವತಿ ದೂರಾದರು. ಆದರೆ ಯುವಕನ ಮೇಲೆ ಯುವತಿಯ ಪ್ರೇಮ ಮುಂದುವರೆದಿತ್ತು. ಆದರೆ ಆಕೆಯಿಂದಾಗಿ ಜೈಲು ಶಿಕ್ಷೆ ಅನುಭವಿಸಿದ ಯುವಕ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಬಯಸಿದ್ದ. ಆದರೆ ಹೇಗಾದರೂ ಆತನನ್ನು ಮತ್ತೆ ಪಡೆಯಲೇ ಬೇಕು ಎಂದು ಹಠಕ್ಕೆ ಬಿದ್ದ ಯುವತಿ ಮಾಡಿದ್ದು ಕಳ್ಳತನ. 

ಮುಂಬೈನ ವಿಕ್ರೋಲಿಯ 21 ವರ್ಷದ ಯುವತಿಯೊಬ್ಬಳನ್ನು ತನ್ನ 26 ವರ್ಷದ ಮಾಜಿ ಗೆಳೆಯನ ಬೈಕ್‌ ಕದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ದೂರಾದ ತನ್ನ ಗೆಳೆಯನ ವಾಪಸ್‌ ಪಡೆಯುವ ಸಲುವಾಗಿ ಆತನ ಬೈಕ್ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಯುವತಿ ತಿಳಿಸಿದ್ದಾಳೆ. 

Tap to resize

Latest Videos

ಅದು ಮೂರು ವರ್ಷದ ಹಿಂದಿನ ಕತೆ. ಯುವತಿಗಿನ್ನೂ 18 ವರ್ಷ ಯುವಕನಿಗೆ 23 ವರ್ಷ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಇದು ತಿಳಿದ ಯುವತಿಯ ಪೋಷಕರು ಈ ಯುವಕನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು. ಪರಿಣಾಮ ಆತ ಜೈಲು ಸೇರಿದ್ದ. ಹಲವು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ಆತ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿದ್ದು, ತನ್ನ ಮುರಿದು ಹೋದ ಬದುಕನ್ನು ಮತ್ತೆ ಕಟ್ಟಲು ಪ್ರಯತ್ನಿಸುತ್ತಿದ್ದ. ಆದರೆ ಆತ ಬಿಡುಗಡೆಯಾದ ವಿಚಾರ ತಿಳಿದ ಯುವತಿ ಮತ್ತೆ ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಳು. ಅಲ್ಲದೇ ಸಂಬಂಧವನ್ನು ಮತ್ತೆ ಮುಂದುವರೆಸಲು ಆಕೆ ಬಯಸಿದ್ದಳು. ಆದರೆ ಆತ ಆಕೆಯನ್ನು ಮತ್ತೆ ಹತ್ತಿರ ಸೇರಿಸಿಕೊಳ್ಳಲು ಬಯಸಿಲ್ಲ. ಜೊತೆಗೆ ತನ್ನ ವಾಸ್ತವ್ಯವನ್ನು ಕೂಡ ಸ್ಥಳಾಂತರಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಹೇಳಿದ್ದಾರೆ. 

ಆಫೀಸ್‌ ಹುಡುಗೀನಾ ಪ್ರೀತಿಸ್ತಿದ್ದೇನೆ, ಆಕೆ ಹೊಸದಾಗಿ ಜಾಯಿನ್ ಆದವನನ್ನು ಲವ್ ಮಾಡ್ತಿದ್ದಾಳೆ, ಏನ್ಮಾಡ್ಲಿ ?

ಆತನ ನಿರ್ಲಕ್ಷ್ಯವನ್ನು ಸಹಿಸದ ಯುವತಿ ಫುಡ್‌ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆತನ ಬೈಕನ್ನೇ ಎಗರಿಸುವ ಪ್ಲಾನ್‌ ಮಾಡಿದ್ದಳು. ಇದು ಆತನ ಬದುಕಿನ ಮೇಲೆ ಪರಿಣಾಮ ಬೀರಬಹುದು ಎಂದು ಯೋಚಿಸಿ ಯುವತಿ ಈ ಕಿತಾಪತಿ ಮಾಡಿದ್ದಳು. ಕಳವಿಗೂ ಮೊದಲು ಯುವಕನ ಬೈಕ್‌ನ ಡುಬ್ಲಿಕೇಟ್‌ ಕೀ ಮಾಡಿಸಿದ ಯುವತಿ ಇದಕ್ಕಾಗಿ ತನ್ನ ಪರಿಚಯಸ್ಥ ಗೆಳೆಯನೋರ್ವನಲ್ಲಿ ಈ ಬೈಕ್‌ನ್ನು ಎಗರಿಸುವಂತೆ ಕೇಳಿದ್ದಳು. ಆಕೆಯ ಮಾತಿನಂತೆ ಗೆಳೆಯ ಆಕೆಗೆ ಬೈಕ್ ತಂದು ಕೊಟ್ಟಿದ್ದಾನೆ. ನಂತರ ಆ ಬೈಕ್‌ನ್ನು ಗೋವಾಂಡಿಯಲ್ಲಿರುವ MHADA colonyಗೆ ತೆಗೆದುಕೊಂಡು ಬಂದಿದ್ದಾಳೆ.  2021ರ ಸೆಪ್ಟೆಂಬರ್ 24 ರಂದು ಈ ಕಳ್ಳತನ ನಡೆದಿದ್ದು, ಇದಾದ ಬಳಿಕ ಬೈಕ್‌ ಮಾಲೀಕ ಪೊವೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. 

ತನಿಖೆ ವೇಳೆ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ತನಿಖಾಧಿಕಾರಿಗಳು ತಮ್ಮ ಮಾಹಿತಿದಾರರಿಗೆ ಬೈಕ್‌ನ ಚಿತ್ರಗಳನ್ನು ಸಹ ನೀಡಿದ್ದಾರೆ. ಆದರೆ ಹಳೆ ಕಳ್ಳರು ಅಲ್ಲದ ಕಾರಣ ಈ ಬೈಕ್ ಪತ್ತೆ ಮಾಡುವುದು ಪೊಲೀಸರಿಗೆ ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಆದಾಗ್ಯೂ ಈ ವರ್ಷ ಫೆಬ್ರವರಿಯಲ್ಲಿ ಅವರು ಈ ಕೇಸ್ ಫೈಲ್‌ ಮುಚ್ಚಿದ್ದರು. ನಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಎ ರಿಪೋರ್ಟ್ ಸಲ್ಲಿಸಿದೆವು. ಇದರರ್ಥ ಪ್ರಕರಣ ನಡೆದಿದೆ ಆದರ ಪತ್ತೆಯಾಗಿಲ್ಲ ಆದರೆ ತನಿಖೆ ಮುಕ್ತಾಯವಾಗಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದರು. ಈ ಮಧ್ಯೆ, ದೂರುದಾರರು ಸಾಲದ ಮೇಲೆ ಮತ್ತೊಂದು ಬೈಕ್ ಖರೀದಿಸಿ ಅವರ ಕುಟುಂಬವನ್ನು ಪೋಷಿಸಲು ಮತ್ತೆ ತಮ್ಮ ಕೆಲಸವನ್ನು ಪ್ರಾರಂಭಿಸಿದರು.

ಸಂಗಾತಿ ಬಗ್ಗೆ ವಿಪರೀತ ಡೌಟ್‌, ಇಂಥಾ ಭಾವನೆ ಹೋಗಲಾಡಿಸೋದು ಹೇಗೆ ?

ಆದರೆ ಒಂದು ದಿನ ಈ ಮಹಿಳೆ ಮತ್ತೆ ಪೊಲೀಸರಿಗೆ ಸಂದೇಶ ಕಳುಹಿಸಿ ನೀನು ತನ್ನೊಂದಿಗೆ ಮತ್ತೆ ಮಾತನಾಡಲು ಪ್ರಾರಂಭಿಸಿದರೆ  ಕದ್ದ ಬೈಕ್ ಇರುವ ಸ್ಥಳವನ್ನು ತಿಳಿಸುವುದಾಗಿ ಭರವಸೆ ನೀಡಿದ್ದಳು. ಇದಾದ ಬಳಿಕ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಕೂಡಲೇ ಅವರು ಮಹಿಳೆಯನ್ನು ವಿಚಾರಣೆಗೆ ಕರೆಸಿದ್ದಾರೆ. ಆರಂಭದಲ್ಲಿ ಯುವತಿ ಸತ್ಯ ಒಪ್ಪಿಕೊಳ್ಳಲು ನಿರಾಕರಿಸಿದ್ದಾಳೆ. ನಂತರ ಒಪ್ಪಿಕೊಂಡಿದ್ದಾಳೆ. ಬಳಿಕ ಬೈಕ್ ಗೋವಂಡಿಯಲ್ಲಿ ಇರುವುದಾಗಿ ಹೇಳಿದ್ದಾಳೆ. ಆದರೆ ಆ ವೇಳೆ ಬೈಕ್ ಅಲ್ಲಿಂದ ನಾಪತ್ತೆಯಾಗಿತ್ತು. 

ನಂತರ, ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದಾಗ, ವಾಹನವನ್ನು ಸಂಚಾರ ಇಲಾಖೆ ಮತ್ತು ಬಿಎಂಸಿ ಅಧಿಕಾರಿಗಳು  ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೈಕ್ ಬಿಎಂಸಿಯ ಮೋಟಾರು ವಾಹನ ಡಂಪಿಂಗ್ ಯಾರ್ಡ್‌ನಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಬೈಕ್ ಸ್ವಾಧೀನಪಡಿಸಿಕೊಳ್ಳಲು ಕೋರಿ ಬಿಎಂಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅವರ ಹೊಲದಲ್ಲಿ ಬೈಕ್ ಹೇಗೆ ಇಳಿಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಗುರುವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಏತನ್ಮಧ್ಯೆ, ಬೈಕ್ ಕದಿಯಲು ಸಹಾಯ ಮಾಡಿದ ಆಕೆಯ ಪುರುಷ ಸ್ನೇಹಿತನನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

click me!