Vijayapura: ಮಗನಿಗೆ ಸರ್ಕಾರಿ ನೌಕರಿ ಸಿಕ್ಕ ಖುಷಿ, ಸಿಡಿ ಆಡಿ ಹರಕೆ ತೀರಿಸಲು ಹೋಗಿ ಮಹಿಳೆ ಬಲಿ!

Published : Apr 15, 2023, 09:02 PM IST
Vijayapura: ಮಗನಿಗೆ ಸರ್ಕಾರಿ ನೌಕರಿ ಸಿಕ್ಕ ಖುಷಿ, ಸಿಡಿ ಆಡಿ ಹರಕೆ ತೀರಿಸಲು ಹೋಗಿ ಮಹಿಳೆ ಬಲಿ!

ಸಾರಾಂಶ

ನಿಷೇಧಿತ ಸಿಡಿ ಆಚರಣೆಗೆ ವೇಳೆ ಮಹಿಳೆ ಸಾವು. ಮಗನಿಗೆ ಸರ್ಕಾರಿ ನೌಕರಿ ಸಿಕ್ಕ ಹರಕೆ ತೀರಿಸಲು ಹೋಗಿ ದುರ್ಮರಣ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ತಕ್ಷಣವೇ ಕ್ರಮಕ್ಕೆ ಆದೇಶಿಸಿದ ವಿಜಯಪುರ ಜಿಲ್ಲಾಧಿಕಾರಿಗಳು.

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಏ.15): ಮನೆ ಕಟ್ಟಲು, ಮಕ್ಕಳ ಕೆಲಸಕ್ಕಾಗಿ ಸೇರಿದಂತೆ ತಮ್ಮ ನಾನಾ  ಆಸೆಗಳ ಈಡೇರಿಕೆಗೆ ದೇವರಿಗೆ ಜನರು ಹರಕೆ ಕಟ್ಟಿಕೊಳ್ತಾರೆ. ಹರಕೆ ತೀರಿಸಲು 101 ಕಾಯಿ ಒಡೆಯವುದು, ದೀಡು ನಮಸ್ಕಾರ, ಉರುಳು ಸೇವೆ ಈ ರೀತಿಯ ಅನೇಕ ಹರಕೆಗಳನ್ನ‌ ಹೊತ್ತಿರುತ್ತಾರೆ. ಇದರಲ್ಲಿ  ಸಿಡಿ ಆಡಿ ಹರಕೆ ತೀರಿಸುವುದು ಕೂಡ ಒಂದಾಗಿದೆ. ಹೀಗೆ ಮಗನಿಗೆ ನೌಕರಿಯಾಗಲಿ ಎಂದು ಸಿಡಿ ಆಡಲು ಹೋದ ಮಹಿಳೆ ಶಿವನ ಪಾದ ಸೇರಿದ್ದಾರೆ. ಸಿಡಿ ಆಡುವ ವೇಳೆ ಮೇಲಿಂದ ಬಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ಗಮನಿಸಬೇಕಾದ ವಿಚಾರ ಅಂದ್ರೆ ಸಿಡಿ ಆಡುವುದು ನಿಷೇಧಿತ ಆಚರಣೆಯಾಗಿದೆ. 

ಮಹಾಲಕ್ಷ್ಮಿ ದೇವಿಯ  ಸಿಡಿ ಹರಕೆ ತೀರಿಸುವಾಗ ಅವಘಡ!
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಮಹಿಳೆಯೊಬ್ಬಳು ದೇವರ ಹರಕೆ ತೀರಿಸಲು ಸಿಡಿ ಆಡಲು ಹೋಗಿ ಸಾವನ್ನಪ್ಪಿದ್ದಾಳೆ. ಗ್ರಾಮದ ಆರಾಧ್ಯ ದೈವ ಎನಿಸಿಕೊಂಡಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಹರಕೆ ತೀರಿಸುವಾಗ ಅವಘಡ ನಡೆದಿದ್ದು, ಹರಕೆ ಹೊತ್ತ ಮಹಿಳೆ ಬಲಿಯಾಗಿದ್ದಾಳೆ. ತಾಂಬಾ ನಿವಾಸಿ ಲಕ್ಷ್ಮೀಬಾಯಿ ಪೂಜಾರಿ ಎಂಬ 55 ವರ್ಷದ ಮಹಿಳೆ ಸಿಡಿಯಾಡಿ ಹರಕೆ ತೀರಿಸುವಾಗ 50ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ.

ಮಗನಿಗೆ ಸರ್ಕಾರಿ ನೌಕರಿ ಸಿಗಲಿ ಎಂದು ಹರಕೆ ಹೊತ್ತಿದ್ದ ಮಹಿಳೆ:
ಲಕ್ಷ್ಮಿಬಾಯಿ ಪೂಜಾರಿ ಎಂಬ ಮಹಿಳೆ ತನ್ನ ಮಗನಿಗೆ ಸರ್ಕಾರಿ ನೌಕರಿ ಸಿಕ್ಕರೆ ಸಿಡಿ ಆಡುತ್ತೇನೆ ಎಂದು ಹರಕೆ ಕಟ್ಟಿಕೊಂಡಿದ್ಲಂತೆ. ಅದರಂತೆ ಮಗನಿಗೆ ವಿಧಾನಸೌಧದಲ್ಲಿ ನೌಕರಿ ಸಿಕ್ಕಿದ್ದರಿಂದ ನಿನ್ನೆ ಆ ಹರಕೆ ತೀರಿಸಲೆಂದು ಸಿಡಿ ಆಡುತ್ತಿದ್ದ ವೇಳೆ ಮೇಲಿಂದ ಬಿದ್ದು ಜೀವ ಕಳೆದುಕೊಂಡಿದ್ದಾಳೆ. 

ಸಿಡಿ ಆಡುವ ವೇಳೆ ಮೇಲಿಂದ ಬಿದ್ದವಳು ಸತ್ತೆ ಹೋದಳು!
ಮಹಾಲಕ್ಷ್ಮೀ ದೇವಸ್ಥಾನದ ಪಾದಗಟ್ಟೆಯಿಂದ ದೇವಸ್ಥಾನದ ವರೆಗೂ ಸುಮಾರು 300 ಮೀಟರ್ ಅಂತರ ಇರುವ ಸ್ಥಳದಿಂದ 50 ಅಡಿ ಎತ್ತರದ ಕಂಬಕ್ಕೆ ಜೋತು ಬಿದ್ದು ಸಿಡಿಯಾಡುತ್ತ ಬರುವಾಗ ಆಕಸ್ಮಿಕವಾಗಿ ಹಗ್ಗ ಹರಿದು ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ.

ಸಿಡಿ ಆಡುವುದು ನಿಷೇಧಿತ ಆಚರಣೆ:
ಸಿಡಿ ಆಡುವುದು ಅತ್ಯಂತ ಅಪಾಯಕಾರಿ, ಬೆನ್ನಿನ ಮೇಲಿನ ಚರ್ಮಕ್ಕೆ ರಂಧ್ರಗಳನ್ನ ಕೊರೆದು ಅಲ್ಲಿ ವೃತ್ತಾಕಾರದ ಕಬ್ಬಿಣದ ಸಲಾಕೆಗಳನ್ನ ಸಿಕ್ಕಿಸಿ ಒಂದು ಕಂಬಕ್ಕೆ ಜೋತು ಬಿಡಲಾಗುತ್ತೆ. ಆಗ ಹರಕೆ ಹೊತ್ತವರು ದೇವರ ಜೈಕಾರ ಹಾಕುತ್ತ ಉಡಿಯಲ್ಲಿ ಕಟ್ಟಿಕೊಂಡು ಬಂದ ಪರಾಳನ್ನ ಎಸೆಯುತ್ತ ಬರಬೇಕು. ಚಕ್ರಗಳು ಇರುವ ಸಿಡಿ‌ ಕಂಬವನ್ನ ಭಕ್ತರು ತಳ್ಳುತ್ತಾ ಸಾಗುತ್ತಾರೆ. ಪಾದಗಟ್ಟಿಯಿಂದ ದೇವರ ಗುಡಿಯ ವರೆಗೆ ಹರಕೆ ಹೊತ್ತಿರುತ್ತಾರೆ. ಈ ಆಚರಣೆ ಮುಗಿದ ಮೇಲೆ ಹರಕೆ ತೀರಿದಂತೆ. ಇದು ಪ್ರಾಣಾಪಾಯ ಉಂಟು ಮಾಡುವುದರಿಂದ ಇದನ್ನ ರಾಜ್ಯ ಸರ್ಕಾರ ಈಗಾಗಲೇ ನಿಷೇಧ ಮಾಡಿದೆ. 

ತಾಂಬಾದಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿತ್ತು ನಿಷೇಧಿತ ಸಿಡಿ ಆಟ:
ನಿಷೇಧಿತ ಸಿಡಿ ಆಡುವ ಕಾರ್ಯಕ್ರಮ ತಾಂಬಾದಲ್ಲಿ ಪ್ರತಿ ಶುಕ್ರವಾರ ನಡೆಯುತ್ತದೆ ಎಂಬುದೇ ಆಶ್ಚರ್ಯಕರವಾಗಿದೆ. ಯಾಕಂದ್ರೆ ಇಷ್ಟೊಂದು ಜಾಗೃತಿ ಇರುವ ಈ ಸಂದರ್ಭದಲ್ಲೂ ಅದ್ಹೇಗೆ ಸಿಡಿ ಆಡುವುದು ನಡೆದುಕೊಂಡು ಬಂದಿದೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ಇನ್ನು ಈ ಕುರಿತು ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಅದು ಹೇಗೆ ಗಮನ ಹರಿಸಲಿಲ್ಲ ಅನ್ನೋದೆ ಅಚ್ಚರಿಯಾಗಿದೆ.

ಮೊನ್ನೆಯಷ್ಟೆ ರಥೋತ್ಸವ ವೇಳೆ ನಡೆದಿದ್ದ ಎರಡು ಸಾವು:
ಮೊನ್ನೆಯಷ್ಟೆ ಏಪ್ರೀಲ್ 6ರಂದು ಸಿಂದಗಿ ತಾಲೂಕಿನ ಗೋಲಗೇರಿಯ ಗೊಲ್ಲಾಳೇಶ್ವರ ಜಾತ್ರೆಯ ವೇಳೆ 70ಅಡಿ ಎತ್ತರದ ರಥೋತ್ಸವದ ಮೇಲಿಂದ ಬಿದ್ದು ಗ್ರಾಮದ ಮುದುಕಪ್ಪ ಕಾಚಾಪುರ ಎಂಬ 50ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಅದೇ ದಿನ ಮುದ್ದೇಬಿಹಾಳ ತಾಲೂಕಿನ ಬಸರಕೋಡದಲ್ಲಿ ಪವಾಡ ಬಸವೇಶ್ವರ ರಥೋತ್ಸವದ ವೇಳೆ ರಥದ ಚಕ್ರದ ಅಡಿಗೆ ಸಿಲುಕಿ ಯಲ್ಲಪ್ಪ ವಣಿಕ್ಯಾಳ ಎಂಬ 25ವರ್ಷದ ಯುವಕ ಕೂಡ ಮೃತಪಟ್ಟಿದ್ದಾನೆ. ದೇವರ ಆಚರಣೆ ವೇಳೆ ಹೀಗೆ ಸಾಲು ಸಾಲು ಭಕ್ತರು ಮೃತಪಟ್ಟಿದ್ದು ಜನ್ರಲ್ಲಿ ಆತಂಕ ಮೂಡಿಸಿದೆ.

ತುಮಕೂರಿನಲ್ಲಿ ಭೀಕರ ಅಪಘಾತ, ಬಸ್ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರು: ಮಗು ಸೇ

ತಕ್ಷಣವೇ ಕ್ರಮಕ್ಕೆ ಆದೇಶಿಸಿದ ಜಿಲ್ಲಾಧಿಕಾರಿಗಳು:
ಇನ್ನು ತಾಂಬಾ ಗ್ರಾಮದಲ್ಲಿ ನಡೆದ ನಿಷೇಧಿತ ಸಿಡಿ ಆಡುವ ಆಚರಣೆ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಕ್ರಮಕ್ಕೆ ಸೂಚಿಸಿದ್ದಾರೆ. ನಿಷೇಧವಾದ ಮೇಲೆ ಆಚರಣೆಗೆ ಅವಕಾಶ ಕೊಟ್ಟಿದ್ದೇಕೆ ಎಂದು ಅಧಿಕಾರಿಗಳಿಗೆ ಉತ್ತರ ಕೇಳಿದ್ದಾರೆ‌. ಇಂಥಹ ಅಪಾಯಕಾರಿ ಆಚರಣೆಗಳ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಿಲು ಸೂಚನೆ ನೀಡಿದ್ದಾರೆ‌‌.

Bengaluru: ಪ್ರಿಯತಮೆ ಬರ್ತ್‌ಡೇ ಆಚರಿಸಿದ, ಬಳಿಕ ಕೇಕ್‌ ಕತ್ತರಿಸಿದ ಚೂರಿಯಿಂದಲೇ ಆಕೆಯ ಕತ್ತನ್ನು

ಕಮಿಟಿಗೂ ನೋಟಿಸ್ ಜಾರಿ:
ನಿಷೇಧಿತ ಆಚರಣೆ ನಡೆಯುತ್ತಿದ್ದ ಶ್ರೀ ಮಹಾಲಕ್ಷ್ಮಿ ದೇಗುಲದ ಕಮೀಟಿಗು ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಅದು ಹೇಗೆ ಇದಕ್ಕೆ ಅವಕಾಶ ಕೊಟ್ಟಿದ್ದೀರಿ, ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!