ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಸಿಕ್ಕ ವ್ಯಕ್ತಿಯ ಹೆಂಡ್ತಿ ಹತ್ಯೆಗೆ ಸ್ಕೆಚ್ ಹಾಕಿ ಮಹಿಳೆಯೊಬ್ಬಳು ಜೈಲು ಸೇರಿದ್ದಾಳೆ. ಇಬ್ಬರ ಮಧ್ಯೆ ಪ್ರೀತಿ ಇರ್ಲಿಲ್ಲ. ಆದ್ರೆ ನಿಶ್ಚಿತಾರ್ಥದ ಸುದ್ದಿ ಕೇಳಿ ಅಸಮಾಧಾನಗೊಂಡಿದ್ದ ಮಹಿಳೆ ಆನ್ಲೈನ್ ನಲ್ಲಿಯೇ ಹತ್ಯೆ ಡೀಲ್ ಮಾಡಿದ್ಲು.
ಡೇಟಿಂಗ್ ಅಪ್ಲಿಕೇಷನ್ (dating application) ನಲ್ಲಿ ಭೇಟಿಯಾದ ವ್ಯಕ್ತಿಯ ಪತ್ನಿಯನ್ನು ಕೊಲ್ಲಲು ಯತ್ನಿಸಿ, ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಹತ್ಯೆಗೆ ಹಿಟ್ ಮ್ಯಾನ್ (hit man) ನೇಮಕ ಮಾಡಿದ್ದ ಮಹಿಳೆಯ ಸಿಕ್ರೇಟ್ (Secret) ಬಯಲಾಗಿದೆ. ಈಗ ಆಕೆಯನ್ನು ಜೈಲಿಗೆ ಕಳುಹಿಸಲಾಗಿದ್ದು, 8 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಭೇಟಿಯಾದ ವ್ಯಕ್ತಿಯ ಹೆಂಡತಿಯನ್ನು ಹತ್ಯೆ (murder)ಮಾಡಲು ಮುಂದಾದ ಮಹಿಳೆ ಹೆಸರು ಮೆಲೋಡಿ ಸಾಸರ್. ಆಕೆಗೆ 48 ವರ್ಷ ವಯಸ್ಸು. ಸಾಸರ್ ಸಾಮಾನ್ಯದವಳಲ್ಲ. ಆಕೆ ಹಿಟ್ ಮ್ಯಾನ್ ಹುಡುಕಲು, ಡಾರ್ಕ್ ವೆಬ್ಸೈಟ್ (Dark Website), ಆನ್‌ಲೈನ್ ಕಿಲ್ಲರ್ ಮಾರ್ಕೆಟ್ (Online Killer Market) ಬಳಸಿದ್ದಳು. ಮಹಿಳೆ ಕೊಲೆ ಮಾಡಲು ಸಾಸರ್, ಬಿಟ್ ಕಾಯಿನ್ ನಲ್ಲಿ 9,750 ಡಾಲರ್ ನೀಡೋದಾಗಿ ಹೇಳಿದ್ದಳು. ಕೊಲೆಗಾರನಿಗೆ ಆಯ್ಕೆಯನ್ನು ನೀಡಿದ್ದು, ದುರ್ಘಟನೆ ಅಥವಾ ಆಕಸ್ಮಿಕ ಸಾವಿನ ರೀತಿಯಲ್ಲಿ ಹತ್ಯೆ ಮಾಡ್ಬೇಕಿತ್ತು.
undefined
ಕವರಲ್ಲಿ ಮೂತ್ರ ಮಾಡಿ, ಕೈ ತೊಳೆಯದೇ ಹಣ್ಣು ಮಾರಿದವನ ವೀಡಿಯೋ ವೈರಲ್!
ಕೋರ್ಟ್ ರೆಕಾರ್ಡ್ ಪ್ರಕಾರ, ಸಾಸರ್ Match.com ನಲ್ಲಿ ಡೇವಿಡ್ ವ್ಯಾಲೇಸ್ ಎಂಬಾತನನ್ನು ಭೇಟಿಯಾಗಿದ್ದಳು. ಆತನಿಗೆ ನಿಶ್ಚಿತಾರ್ಥವಾಗಿದೆ ಎಂಬ ವಿಷ್ಯ ತಿಳಿಯುತ್ತಿದ್ದಂತೆ ಆಕೆ ಅಸಮಾಧಾನಗೊಂಡಿದ್ದಳು. ಡೇವಿಡ್ ವ್ಯಾಲೇಸ್ ಮತ್ತು ಸಾಸರ್ ಮಧ್ಯೆ ಹೆಚ್ಚಿನ ಸಂಬಂಧವಿರಲಿಲ್ಲ. ಇಬ್ಬರೂ ಹೈಕಿಂಗ್ ಒಡನಾಡಿಗಳಾಗಿದ್ದರು. ಅಪ್ಪಲಾಚಿಯನ್ ಟ್ರಯಲ್ ಹೈಕಿಂಗ್ ನಲ್ಲಿ ಸಾಸರ್, ವ್ಯಾಲೇಸ್ ಗೆ ಸಹಾಯ ಮಾಡಿದಳು. ನಾಕ್ಸ್‌ವಿಲ್ಲೆ ಪ್ರದೇಶದಲ್ಲಿ ಒಟ್ಟಿಗೆ ಒಡಾಡಿದ್ದರು. ಆದ್ರೆ ಸಾಸರ್ ಗೆ ವ್ಯಾಲೇಸ್ ನಿಶ್ಚಿತಾರ್ಥದ ವಿಷ್ಯವನ್ನು ಸಹಿಸಲು ಸಾಧ್ಯವಾಗ್ಲಿಲ್ಲ. ಎಂಗೇಜ್ಮೆಂಟ್ ಸುದ್ದಿ ಕೇಳ್ತಿದ್ದಂತೆ ವ್ಯಾಲೇಸ್ನ ಅಲಬಾಮಾ ಮನೆಗೆ ಬಂದ ಸಾಸರ್, ಬೆದರಿಕೆಯ ಧಮಕಿ ಹಾಕಲು ಶುರು ಮಾಡಿದ್ದಳು. ಅಲ್ಲದೆ ವ್ಯಾಲೇಸ್ ಪತ್ನಿ ವಿರುದ್ಧ ಅಪಪ್ರಚಾರ ಶುರು ಮಾಡಿದ್ದಳು. ಫಿಟ್ನೆಸ್ ಅಪ್ಲಿಕೇಷನ್ ಸಹಾಯದಿಂದ ವ್ಯಾಲೇಸ್ ಹಾಗೂ ಆತನ ಪತ್ನಿ ಚಲನವಲನಗಳನ್ನು ವೀಕ್ಷಣೆ ಮಾಡ್ತಿದ್ದ ಸಾಸನ್, ದಿನಕ್ಕೆ ಆರಕ್ಕಿಂತ ಹೆಚ್ಚು ಫೋನ್ ಕರೆ ಮಾಡಿ ಟಾರ್ಚರ್ ನೀಡ್ತಿದ್ದಳು.
ದಂಪತಿ ಎಲ್ಲಿಗೆ ಹೋಗ್ತಾರೆ, ಎಲ್ಲಿಂದ ಬರ್ತಾರೆ ಎಂಬುದರ ಮೇಲೆ ಕಣ್ಣಿಟ್ಟಿದ್ದ ಸಾಸರ್, ಅದನ್ನು ಡಾರ್ಕ್ ವೆಬ್ಸೈಟ್ ಆನ್‌ಲೈನ್ ಕಿಲ್ಲರ್ ಮಾರ್ಕೆಟ್ ನಲ್ಲಿ ಬರೆಯುತ್ತಿದ್ದಳು. ಅವರಿಗೆ ಮಾಹಿತಿ ನೀಡುತ್ತಿದ್ದಳು. ಒಂದು ಬಾರಿ ವ್ಯಾಲೆಸ್ ಹಾಗೂ ಪತ್ನಿ ಮನೆಯಿಂದ ಕೇವಲ ಎರಡು ಮೈಲಿ ದೂರ ಹೋದಾಗ, ಇದು ಆಕಸ್ಮಿಕ, ದುರ್ಘಟನೆ ಅಥವಾ ಮಾದಕವಸ್ತುವಿನಿಂದ ನಡೆದ ಸಾವಾಗಿರಬೇಕು. ಸುದೀರ್ಘ ತನಿಖೆ ನಡೆಯಬಾರದು. ಆಕೆ ಸದ್ಯ ತನ್ನ ಪತಿ ಜೊತೆ ವಾಸಿಸುತ್ತಿದ್ದಾಳೆ ಎಂದು ವೆಬ್ಸೈಟ್ ನಲ್ಲಿ ಸಾಸನ್ ಬರೆದಿದ್ದಳು.
ಅಷ್ಟೇ ಅಲ್ಲ, ಕೆಲಸ ಪೂರ್ಣಗೊಳಿಸದ ವೆಬ್ಸೈಟ್ ಗೆ ಧಮಕಿ ಹಾಕಿದ್ದಳು ಸಾಸನ್. ನಾನು ಎರಡು ತಿಂಗಳು 11 ದಿನಗಳಿಂದ ಕಾಯ್ತಿದ್ದೇನೆ. ಇನ್ನೂ ಕೆಲಸ ಪೂರ್ಣಗೊಂಡಿಲ್ಲ. ಒಂದು ವಾರದಲ್ಲಿ ಕೆಲಸ ಪೂರ್ಣವಾಗುತ್ತೆ ಅಂತ ನೀವು ಎರಡು ವಾರದ ಹಿಂದೆ ಹೇಳಿದ್ರಿ. ಆದ್ರೆ ಕೆಲಸ ಇನ್ನೂ ಮುಗಿದಿಲ್ಲ. ನಾನು ಬೇರೆಯವರನ್ನು ಕಾಂಟೆಕ್ಟ್ ಮಾಡ್ಬೇಕಾ? ವಿಳಂಬ ಏಕೆ ಆಗ್ತಿದೆ ಎಂದು ಸಾಸರ್ ಬರೆದಿದ್ದಳು.
ನಿಗೂಢವಾಗೇ ಉಳಿದ ಮಹಾಲಕ್ಷ್ಮಿ ಮರ್ಡರ್ ಕೇಸ್! ಹಂತಕ ಪೊಲೀಸರನ್ನ ಹೇಗೆಲ್ಲಾ ದಿಕ್ಕು ತಪ್ಪಿಸಿದ್ದ ಗೊತ್ತಾ?
ಎಷ್ಟೇ ಮಾಡಿದ್ರು ಸಾಸರ್ ಸಕ್ಸಸ್ ಆಗ್ಲಿಲ್ಲ. ಆಕೆ ಸಿಕ್ಕಿಬಿದ್ಲು. ಮನೆಯ ಮೇಲೆ ದಾಳಿ ನಡೆಸಿದಾಗ ಆನ್ಲೈನ್ ಕಿಲ್ಲರ್ ಮಾರ್ಕೆಟ್ ಜೊತೆ ನಡೆಸಿದ ಸಂಭಾಷಣೆ ಹಾಗೂ ಅನೇಕ ದಾಖಲೆಗಳು ಪೊಲೀಸ್ ಕೈಗೆ ಸಿಕ್ಕಿವೆ. ದಾಖಲೆ ಪರಿಶೀಲಿಸಿ, ಪ್ರಕರಣದ ವಿಚಾರಣೆ ಮಾಡಿದ ಕೋರ್ಟ್ ಅಂತಿಮವಾಗಿ ಸಾಸರ್ ದೋಷಿ ಎಂದು ಘೋಷಿಸಿದೆ. ಸಾಸರ್ ಕೂಡ ಕೊನೆಯಲ್ಲಿ ತನ್ನ ತಪ್ಪೊಪ್ಪಿಕೊಂಡಿದ್ದಾಳೆ. ಕೋರ್ಟ್, ಸಾಸರ್ ಗೆ 100 ತಿಂಗಳ ಜೈಲು ಹಾಗೂ 5,300 ಡಾಲರ್ ದಂಡವನ್ನು ವಿಧಿಸಿದೆ.